ಹಾಡಿನಿಂದ ವಿವಾದ: ಮಣಿಪುರದ ಖ್ಯಾತ ಸಂಗೀತಕಾರನ ವಿರುದ್ಧ ಕೇಸ್

ಜನಾಂಗೀಯ ಗಲಭೆಗಳನ್ನು ಎದುರಿಸುತ್ತಿರುವ ಮಣಿಪುರದಲ್ಲಿ ಖ್ಯಾತ ಸಂಗೀತಗಾರನ ವಿರುದ್ಧ ಪ್ರಕರಣ ದಾಖಲಾಗಿದೆ. 
ಮಣಿಪುರದ ಗಲಭೆ (ಸಂಗ್ರಹ ಚಿತ್ರ)
ಮಣಿಪುರದ ಗಲಭೆ (ಸಂಗ್ರಹ ಚಿತ್ರ)

ಮಣಿಪುರ: ಜನಾಂಗೀಯ ಗಲಭೆಗಳನ್ನು ಎದುರಿಸುತ್ತಿರುವ ಮಣಿಪುರದಲ್ಲಿ ಖ್ಯಾತ ಸಂಗೀತಗಾರನ ವಿರುದ್ಧ ಪ್ರಕರಣ ದಾಖಲಾಗಿದೆ. 

ತಪ್ತ ಎಂದೇ ಖ್ಯಾತರಾಗಿರುವ ಜಯೆಂತಾ ಲೌಕ್ರಕ್ಪಂ ಎಂಬುವವರ ಹಾಡು ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ  ಜೋಮಿ ವಿದ್ಯಾರ್ಥಿಗಳ ಒಕ್ಕೂಟ (ಝೆಡ್ಎಸ್ಎಫ್)  ಎಫ್ಐಆರ್ ದಾಖಲಿಸಿದೆ. 

ಝೆಡ್ಎಸ್ಎಫ್ ನ ಪ್ರಕಾರ ಜಯೆಂತಾ ಲೌಕ್ರಕ್ಪಂ ಅವರು ರಚಿಸಿರುವ ಹಾಡಿನಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ಗಲಭೆಗೆ ಕರೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜಯೆಂತಾ ಲೌಕ್ರಕ್ಪಂ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದರು ಎಂದು ಝೆಡ್ ಎಸ್ಎಫ್ ಅಧ್ಯಕ್ಷರು ಆರೋಪಿಸಿದ್ದಾರೆ.
 
ಪವರ್ ಆಫ್ ಅಟ್ರಾಕ್ಷನ್ ಎಂಬ ಆಲ್ಬಮ್ ಮೂಲಕ ಜಯೆಂತಾ ಲೌಕ್ರಕ್ಪಂ ಖ್ಯಾತಿ ಪಡೆದಿದ್ದರು. ಮಣಿಪುರದ ಗಲಭೆಯಲ್ಲಿ ಈ ವರೆಗೂ 150 ಮಂದಿ ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com