ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ ಮೋದಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು (ಎನ್‌ಐಟಿಬಿ) ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವರ್ಚುವಲ್ ಉದ್ಘಾಟನೆ ಮಾಡಿದರು.
ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು (ಎನ್‌ಐಟಿಬಿ) ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವರ್ಚುವಲ್ ಉದ್ಘಾಟನೆ ಮಾಡಿದರು.

ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಆವರಣದಲ್ಲಿ ವಿಡಿ ಸಾವರ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ನಿಲ್ದಾಣ ವೀಕ್ಷಿಸಿದರು. ಈ ವೇಳೆ ಅವರೊಂದಿಗೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ, ಜನರಲ್ (ನಿವೃತ್ತ) ವಿ ಕೆ ಸಿಂಗ್ ಅವರೊಂದಿಗೆ ಇದ್ದರು.

ಈ ಭವ್ಯ ನಿಲ್ದಾಣವನ್ನು ಇಂದು ಪ್ರಧಾನಿ ಮೋದಿ ವರ್ಚುವಲ್ ಉದ್ಘಾಟನೆ ಮಾಡಿದ್ದು, ಈ ವಿಶೇಷ ಕಟ್ಟಡವು ಶೆಲ್ ಆಕಾರದಲ್ಲಿದ್ದು, ದ್ವೀಪಗಳ ನೈಸರ್ಗಿಕ ಪರಿಸರವನ್ನು ಚಿತ್ರಿಸುತ್ತದೆ. ಇಡೀ ಟರ್ಮಿನಲ್ ದಿನಕ್ಕೆ 12 ಗಂಟೆಗಳ ಕಾಲ ಶೇ. 100 ಪ್ರತಿಶತ ನೈಸರ್ಗಿಕ ಬೆಳಕನ್ನು ಹೊಂದಿರುತ್ತದೆ, ಇದನ್ನು ಛಾವಣಿಯ ಮೇಲೆ ಸ್ಕೈಲೈಟ್‌ಗಳ ಮೂಲಕ ಸಾಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರ ದಟ್ಟಣೆಯ ಹೆಚ್ಚಳದಿಂದಾಗಿ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಸುಮಾರು 707.73 ಕೋಟಿಗಳ ರೂ ಅಂದಾಜು ವೆಚ್ಚದಲ್ಲಿ NITB ಅನ್ನು ನಿರ್ಮಿಸಿದೆ. ಇದು ಸುಮಾರು 40,837 ಚದರ ಮೀಟರ್‌ಗಳ ಒಟ್ಟು ನಿರ್ಮಾಣ ಪ್ರದೇಶದೊಂದಿಗೆ, ಹೊಸ ಟರ್ಮಿನಲ್ ಕಟ್ಟಡವು ಪೀಕ್ ಅವರ್‌ಗಳಲ್ಲಿ 1,200 ಪ್ರಯಾಣಿಕರನ್ನು ಮತ್ತು ವಾರ್ಷಿಕವಾಗಿ ಸುಮಾರು 40 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಮೂರು ಅಂತಸ್ತಿನ ಕಟ್ಟಡದಲ್ಲಿ 28 ಚೆಕ್-ಇನ್ ಕೌಂಟರ್‌ಗಳು, ಮೂರು ಪ್ರಯಾಣಿಕರ ಬೋರ್ಡಿಂಗ್ ಸೇತುವೆಗಳು ಮತ್ತು ನಾಲ್ಕು ಕನ್ವೇಯರ್ ಬೆಲ್ಟ್‌ಗಳನ್ನು ಅಳವಡಿಸಲಾಗಿದೆ. ಸುಮಾರು 710 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಕಟ್ಟಡವು ದ್ವೀಪದ ಸಂಪರ್ಕವನ್ನು ಹೆಚ್ಚಿಸುತ್ತದೆ. ಸುಮಾರು 40,800 ಚದರ ಮೀಟರ್ ಒಟ್ಟು ನಿರ್ಮಿತ ಪ್ರದೇಶದೊಂದಿಗೆ, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com