ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನಿಡಿಯಾಗಿ ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಹೆಸರನ್ನು ಘೋಷಿಸಿದ ಒಂದು ದಿನದ ನಂತರ, "ಜೀತೇಗ ಭಾರತ" ಎಂಬ ಅಡಿಬರಹವನ್ನು ಶೀರ್ಷಿಕೆಗೆ ನೀಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, ಮೈತ್ರಿ ಹೆಸರಿನಲ್ಲಿ “ಭಾರತ್” ಎಂಬ ಪದ ಒಳಗೊಂಡಿರಬೇಕು ಎಂದು ಹಲವಾರು ನಾಯಕರು ಅಭಿಪ್ರಾಯಪಟ್ಟರು.ಅದನ್ನು ಅಡಿಬರಹವಾಗಿ ನೀಡಬಹುದು ಎಂದು ನಾಯಕರೊಬ್ಬರು ಸಲಹೆ ನೀಡಿದರು.
ಟ್ಯಾಗ್‌ಲೈನ್ ಹಲವಾರು ನಾಯಕರ ಜಂಟಿ ಪ್ರಯತ್ನದ ಫಲಿತಾಂಶವಾಗಿದೆ ಎಂದು ಹಲವಾರು ನಾಯಕರು ಒತ್ತಿ ಹೇಳಿದರು.
Advertisement