'ಕೆಂಪು ಸುಂದರಿ' ಕರಾಮತ್ತು: ಟೊಮೊಟೋ ಬೆಳೆ ಬೆಳೆದು 3 ಕೋಟಿ ರು. ಸಂಪಾದಿಸಿದ ಮಹಾರಾಷ್ಟ್ರ ರೈತ!

ದಿನೇದಿನೇ ಏರುತ್ತಿರುವ ಟೊಮೇಟೊ ಬೆಲೆ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವಾಗಲೇ ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿನಿಂತು ಕೇವಲ ಒಂದು ತಿಂಗಳ ಅವಧಿಯಲ್ಲಿ ಟೊಮೊಟೋ ಬೆಳೆದು ಮೂರು ಕೋಟಿ ರು. ಹಣ ಸಂಪಾದಿಸಿ ಕೋಟ್ಯಾಧಿಪತಿಯಾಗಿದ್ದಾರೆ.
ರೈತ ಈಶ್ವರ್ ಗೇಕರ್ ತನ್ನ ಪತ್ನಿಯೊಂದಿಗೆ
ರೈತ ಈಶ್ವರ್ ಗೇಕರ್ ತನ್ನ ಪತ್ನಿಯೊಂದಿಗೆ

ಪುಣೆ: ದಿನೇದಿನೇ ಏರುತ್ತಿರುವ ಟೊಮೇಟೊ ಬೆಲೆ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿರುವಾಗಲೇ ಮಹಾರಾಷ್ಟ್ರದ ಪುಣೆಯ ರೈತರೊಬ್ಬರು ಹಲವು ಸವಾಲುಗಳನ್ನು ಮೆಟ್ಟಿನಿಂತು ಕೇವಲ ಒಂದು ತಿಂಗಳ ಅವಧಿಯಲ್ಲಿ ಟೊಮೊಟೋ ಬೆಳೆದು ಮೂರು ಕೋಟಿ ರು. ಹಣ ಸಂಪಾದಿಸಿ ಕೋಟ್ಯಾಧಿಪತಿಯಾಗಿದ್ದಾರೆ.

ಪುಣೆ ಜಿಲ್ಲೆಯ ಜುನ್ನಾರ್ ತೆಹಸಿಲ್‌ನ ಪಚ್‌ಘರ್ ಗ್ರಾಮದ ರೈತ ಈಶ್ವರ್ ಗೇಕರ್ (36) ಈ ವರ್ಷದ ಮೇ ತಿಂಗಳಲ್ಲಿ ಕಡಿಮೆ ಬೆಲೆಯಿಂದಾಗಿ ಹೆಚ್ಚಿನ ಪ್ರಮಾಣದ ಟೊಮೆಟೊವನ್ನು ರಸ್ತೆಗೆ ಸುರಿಯುವ ಪರಿಸ್ಥಿತಿ ಎದುರಿಸಿದ್ದರು. ಆದರೆ ಈ ಹಿನ್ನಡೆಯಿಂದ ವಿಚಲಿತರಾಗದೆ ತಮ್ಮ 12 ಎಕರೆ ಜಮೀನಿನಲ್ಲಿ ಮತ್ತೆ ಟೊಮೆಟೊ ಬೆಳೆದು ದಣಿವರಿಯಿಲ್ಲದೆ ಕೆಲಸ ಮಾಡಿದರು.

ಇದೀಗ ಟೊಮೇಟೊ ಬೆಲೆ ಗಗನಕ್ಕೇರಿರುವ ನಡುವೆಯೇ ಜೂನ್ 11ರಿಂದ ಜುಲೈ 18ರ ನಡುವೆ ತಮ್ಮ ಬೆಳೆ ಇಳುವರಿ ಮಾರಾಟದ ಮೂಲಕ ಮೂರು ಕೋಟಿ ರೂಪಾಯಿ ಗಳಿಸಿರುವುದಾಗಿ ಗೇಕರ್  ಹೇಳಿಕೊಂಡಿದ್ದಾರೆ. ನಾನು 18 ಎಕರೆ ಜಮೀನನ್ನು ಹೊಂದಿದ್ದು, 12 ಎಕರೆಯಲ್ಲಿ ಟೊಮೆಟೊ ಕೃಷಿ ಮಾಡಿದ್ದೇನೆ, ಜೂನ್ 11 ರಿಂದ 18,000 ಕ್ರೇಟ್‌ಗಳನ್ನು ಮಾರಾಟ ಮಾಡಿದ್ದೇನೆ ಮತ್ತು ಇದುವರೆಗೆ 3 ಕೋಟಿ ರೂಪಾಯಿ ಗಳಿಸಿದ್ದೇನೆ ಎಂದು ಗೇಕರ್ ಹೇಳಿದರು.

12 ಎಕರೆಯಲ್ಲಿ ನಾನು 2017ರಿಂದಲೂ ಟೊಮೆಟೊ ಕೃಷಿ ಮಾಡಿಕೊಂಡು ಬಂದಿದ್ದೇನೆ. 2021ರಲ್ಲಿ ಹೀಗೆ ಟೊಮೆಟೊ ಬೆಳೆದು ಸರಿಸುಮಾರು 20 ಲಕ್ಷ ರೂ. ನಷ್ಟ ಅನುಭವಿಸಿದ್ದೆ. ಆದರೆ, ಈಗ ಒಳ್ಳೆಯ ಬೆಲೆ ಬಂದಿರುವುದರಿಂದ ಉತ್ತಮ ಆದಾಯ ಬಂದಿದೆ. ನಿಜಕ್ಕೂ ಖುಷಿಯಾಗುತ್ತಿದೆ. ನಾನು ಪ್ರತಿ ಕ್ರೇಟ್‌ ಟೊಮೆಟೊವನ್ನು 770-2,311 ರೂ. ದರದಲ್ಲಿ ಮಾರಾಟ ಮಾಡಿದ್ದೇನೆ. ಇನ್ನೂ 4,000 ಕ್ರೇಟ್‌ ಟೊಮೆಟೊ ಕಟಾವಿಗೆ ಬರಲಿದ್ದು, ಇದೇ ರೀತಿಯ ಒಳ್ಳೆಯ ರೇಟ್‌ ನಿರೀಕ್ಷಿಸಿದ್ದೇನೆ,'' ಎನ್ನುತ್ತಾರೆ ಈಶ್ವರ್‌ ಗೇಕರ್‌.

ಜೂನ್ 11 ರಂದು, ಅವರು ಒಂದು ಕ್ರೇಟ್‌ಗೆ 770 ರೂ (ಕೆಜಿಗೆ ರೂ 37 ರಿಂದ 38 ರೂ), ಮತ್ತು ಜುಲೈ 18 ರಂದು ಅವರು ಟೊಮ್ಯಾಟೊವನ್ನು ಕ್ರೇಟ್‌ಗೆ ರೂ 2,200 (ಕೆಜಿಗೆ ರೂ 110) ಮಾರಾಟ ಮಾಡಿದರು. ಕಡಿಮೆ ಬೆಲೆಯಿಂದಾಗಿ ಎರಡು ತಿಂಗಳ ಹಿಂದೆ ಕಟಾವು ಮಾಡಿದ ಟೊಮೆಟೊಗಳನ್ನು ದೊಡ್ಡ ಪ್ರಮಾಣದಲ್ಲಿ ಸುರಿಯಬೇಕಾಯಿತು ಎಂಬುದನ್ನು ನೆನಪಿಸಿಕೊಂಡರು.

ಟೊಮ್ಯಾಟೊ ಬೆಳೆಗಾರರಿಗೆ ಇದು ಉತ್ತಮ ಸಮಯ, ಆದರೆ ನಾವು ಕೆಟ್ಟ ಸಮಯವನ್ನು ಸಹ ನೋಡಿದ್ದೇವೆ. ಮೇ ತಿಂಗಳಲ್ಲಿ, ನಾನು ಒಂದು ಎಕರೆ ಜಮೀನಿನಲ್ಲಿ ಟೊಮೆಟೊಗಳನ್ನು ಬೆಳೆದಿದ್ದೇನೆ, ಆದರೆ ಬೆಲೆಗಳು ತುಂಬಾ ಕಡಿಮೆಯಾದ ಕಾರಣ ಹೆಚ್ಚಿನ ಪ್ರಮಾಣದ ಟೊಮೊಟೋವನ್ನು ರಸ್ತೆಗೆ ಎಸೆಯಬೇಕಾಯಿತು. ಪ್ರತಿ ಕ್ರೇಟ್ ದರ ಕೇವಲ 50 ರೂ. ಅಂದರೆ ಕೆಜಿಗೆ 2.50 ರೂ. ಇದ್ದ ಕಾರಣ ನಾನು ಉತ್ಪನ್ನಗಳನ್ನು ಎಸೆದಿದ್ದೇನೆ," ಎಂದು ಅವರು ಹೇಳಿದರು.

"ಈ ವರ್ಷ ಮೇ ತಿಂಗಳಲ್ಲಿ ನಾನು ಟೊಮ್ಯಾಟೊ ಎಸೆಯುವಾಗ, 12 ಎಕರೆ ಭೂಮಿಯಲ್ಲಿ ಟೊಮೊಟೋ ಇಳುವರಿ ಬೆಳೆಯುತ್ತಿತ್ತು. ಆದರೆ ಬೆಲೆ ಸಿಗದ್ದಕ್ಕೆ ನಾನು ಧೃತಿ ಗೆಡಲಿಲ್ಲ. ನಾನು ಕೃಷಿಯೆಡೆಗಿನ ನನ್ನ ಬದ್ಧತೆ ಮತ್ತು ಅಚಲ ನಂಬಿಕೆ ಉಳಿಸಿಕೊಂಡಿದ್ದೆ ಅದರಿಂದ ನನಗೆ ಲಾಭ ದೊರೆಯಿತು ಎಂದಿದ್ದಾರೆ.

"ನಾನು ಸುಡುವ ಮೇ ಶಾಖದಲ್ಲಿಯೂ ಬೆಳೆಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ಹೆಚ್ಚಿನ ತಾಪಮಾನದ ಕಾರಣ, ಇತರ ಭಾಗಗಳಲ್ಲಿ ಟೊಮ್ಯಾಟೊ ಬೆಳೆ ಹಾಳಾಯಿತು. ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ನನ್ನಂತಹ ರೈತರು ಲಾಭ ಪಡೆದರು ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com