ಮೂರನೇ ಬಾರಿ ಬಹುಮತದೊಂದಿಗೆ ಆಯ್ಕೆಯಾಗಿ 2024ರಲ್ಲಿ ಮೋದಿ ದೇಶದ ಪ್ರಧಾನಿಯಾಗುತ್ತಾರೆ: ಎನ್ ಡಿಎ ನಿರ್ಣಯ

ಭಾರತೀಯ ಜನತಾ ಪಾರ್ಟಿ ನೇತೃತ್ವದ(BJP) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು(NDA) ನಿನ್ನೆ ದೆಹಲಿಯಲ್ಲಿ ಸಭೆ ಸೇರಿ ಹಲವು ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಒಕ್ಕೂಟದ ಮುಂದಿನ ಮುಖ್ಯ ಗುರಿ ಇರುವುದು 2024ರ ಲೋಕಸಭೆ ಚುನಾವಣೆಯನ್ನು ಎದುರಿಸುವುದು. 
ಸಭೆಯಲ್ಲಿ ಎನ್ ಡಿಎ ಮೈತ್ರಿಕೂಟ ನಾಯಕರಿಂದ ಪ್ರಧಾನಿ ಮೋದಿಗೆ ಸನ್ಮಾನ
ಸಭೆಯಲ್ಲಿ ಎನ್ ಡಿಎ ಮೈತ್ರಿಕೂಟ ನಾಯಕರಿಂದ ಪ್ರಧಾನಿ ಮೋದಿಗೆ ಸನ್ಮಾನ

ನವದೆಹಲಿ: ಭಾರತೀಯ ಜನತಾ ಪಾರ್ಟಿ ನೇತೃತ್ವದ(BJP) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು(NDA) ನಿನ್ನೆ ದೆಹಲಿಯಲ್ಲಿ ಸಭೆ ಸೇರಿ ಹಲವು ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಒಕ್ಕೂಟದ ಮುಂದಿನ ಮುಖ್ಯ ಗುರಿ ಇರುವುದು 2024ರ ಲೋಕಸಭೆ ಚುನಾವಣೆಯನ್ನು ಎದುರಿಸುವುದು. 

2024ರ ಲೋಕಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ನೇತೃತ್ವದಲ್ಲಿ ಎದುರಿಸಿ ಅತಿ ಹೆಚ್ಚು ಬಹುಮತದೊಂದಿಗೆ ಸತತ ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿದೆ. 

ಕೇಂದ್ರದ ಆಡಳಿತ ಮೈತ್ರಿಕೂಟವನ್ನು ಸಮರ್ಥವಾಗಿ ಮುಂದಿನ ಚುನಾವಣೆಯಲ್ಲಿ ಎದುರಿಸಲು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ತಮ್ಮ ಸಮಾವೇಶವನ್ನು ನಡೆಸಿದ ದಿನದಂದು, ಬಿಜೆಪಿಯು ದೇಶದ ಅಭಿವೃದ್ಧಿಯನ್ನು ಶ್ಲಾಘಿಸಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದ ತನ್ನ ಮಿತ್ರಪಕ್ಷಗಳ ಶಕ್ತಿ ಪ್ರದರ್ಶನವನ್ನು ತೋರಿಸಿ ಸಭೆ ನಡೆಸಿ ಹಲವು ನಿರ್ಣಯಗಳನ್ನು ಎನ್ ಡಿಎ ಮೈತ್ರಿಕೂಟಗಳು ತೆಗೆದುಕೊಂಡಿವೆ. 

ನಿನ್ನೆ ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ 39 ಪಕ್ಷಗಳು ಭಾಗವಹಿಸಿದ್ದವು, ಪ್ರತಿಪಕ್ಷಗಳು ಗುರುತು(Identity) ಮತ್ತು ಪ್ರಸ್ತುತತೆಯ(Relevence) ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ಸಭೆಯಲ್ಲಿ ನಾಯಕರು ಟೀಕಿಸಿದರು. ಇಂದು ಪ್ರತಿಪಕ್ಷಗಳು ಗೊಂದಲಕ್ಕೀಡಾಗಿವೆ ಮತ್ತು ಕೇಂದ್ರ ಸರ್ಕಾರದ ಸಾಧನೆ ಕಂಡು ದಿಗ್ಭ್ರಮೆಗೊಂಡಿವೆ. ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ, ಮೋದಿ ಲಕ್ಷಾಂತರ ಭಾರತೀಯರ ಅಚಲ ವಿಶ್ವಾಸವನ್ನು ಹೊಂದಿದ್ದಾರೆ ಎಂದು ಎನ್ ಡಿಎ ಸಭೆಯಲ್ಲಿ ನಾಯಕರು ಒಕ್ಕೊರಲಿನಿಂದ ಹೇಳಿದರು. 

ಮೋದಿ ನೇತೃತ್ವದಲ್ಲಿ 2014 ಕ್ಕಿಂತ 2019 ರಲ್ಲಿ ಆಡಳಿತಾರೂಢ ಮೈತ್ರಿಕೂಟಕ್ಕೆ ಜನರ ಬೆಂಬಲ ಹಲವಾರು ಪಟ್ಟು ಹೆಚ್ಚಾಗಿದೆ. ಮತದಾರರು 'ವಿರೋಧ ಪಕ್ಷಗಳ ಸುಳ್ಳು, ವದಂತಿಗಳು ಮತ್ತು ಆಧಾರರಹಿತ ಆರೋಪಗಳನ್ನು ತಿರಸ್ಕರಿಸುತ್ತಿದ್ದಾರೆ, ತಳ್ಳಿಹಾಕುತ್ತಿದ್ದಾರೆ. ದೇಶವು ಎನ್‌ಡಿಎ ನಾಯಕತ್ವದಲ್ಲಿ ನಂಬಿಕೆ ಇರಿಸುತ್ತಿದೆ. 

ಎನ್‌ಡಿಎಯ ಎಲ್ಲಾ ಪಕ್ಷಗಳು 2019 ರಲ್ಲಿ ಗೆದ್ದಿದ್ದಕ್ಕಿಂತ ದೊಡ್ಡ ಜನಾದೇಶವನ್ನು 2024 ರಲ್ಲಿ ಸಾಧಿಸಲು ಪಿಎಂ ಮೋದಿ ಅವರ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿವೆ ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. 

ಸಭೆಯಲ್ಲಿ ಶಿವಸೇನೆ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿರ್ಣಯವನ್ನು ಪ್ರಸ್ತಾಪಿಸಿದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ ಕೆ ಪಳನಿಸ್ವಾಮಿ ಮತ್ತು ಅಸೋಮ್ ಗಣ ಪರಿಷತ್‌ನ ಅತುಲ್ ಬೋರಾ ಇದನ್ನು ಬೆಂಬಲಿಸಿದರು.

ಸಭೆಯ ನಿರ್ಣಯಗಳು(Resolution): ಪ್ರಧಾನಿ ಮೋದಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸುವುದಾಗಿ ಎನ್‌ಡಿಎಯ ಎಲ್ಲಾ ಮೈತ್ರಿಕೂಟಗಳು ನಿರ್ಧರಿಸಿವೆ. ಸತತ ಮೂರನೇ ಬಾರಿಗೆ ಬಾರಿ ಬಹುಮತದೊಂದಿಗೆ ದೇಶದ ಪ್ರಧಾನಿಯಾಗುತ್ತಾರೆ' ಎಂದು ನಿರ್ಣಯದಲ್ಲಿ ಹೇಳಲಾಗಿದೆ. 

ಕಳೆದ ಒಂಬತ್ತು ವರ್ಷಗಳಲ್ಲಿ, ಎನ್‌ಡಿಎ ಸರ್ಕಾರವು ಸೇವಾ, ಸುಶಾಸನ್ ಮತ್ತು ಗರೀಬ್ ಕಲ್ಯಾಣ್ (ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ) ದೃಷ್ಟಿಕೋನವನ್ನು ನಿಜವಾದ ಅರ್ಥದಲ್ಲಿ ಅರಿತುಕೊಂಡಿದೆ. ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಈ ಪ್ರಯಾಣವು ಎಲ್ಲಾ ವಿಭಾಗಗಳು, ಪ್ರದೇಶಗಳು ಮತ್ತು ಸಮುದಾಯಗಳ ಭಾಗವಹಿಸುವಿಕೆಯನ್ನು ಕಂಡಿದೆ.

ಅಟಲ್ ಬಿಹಾರ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವಾಗಲಿ ಅಥವಾ ಮೋದಿ ನೇತೃತ್ವದ ಸರ್ಕಾರವಾಗಲಿ, ಪ್ರಾದೇಶಿಕ ಆಕಾಂಕ್ಷೆಗಳನ್ನು ಗೌರವಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಅದು ಯಾವಾಗಲೂ ಕೆಲಸ ಮಾಡಿದೆ. ಮೋದಿ ಸರ್ಕಾರದ ಬಡವರ ಪರವಾದ ಕ್ರಮಗಳನ್ನು ಶ್ಲಾಘಿಸಿದೆ, ದೇಶದಲ್ಲಿ ಬಡತನದ ಪ್ರಮಾಣ ಇಳಿಕೆಯಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗೆ ಇದು ಬದ್ಧವಾಗಿದೆ.

ಬಡವರ ಸಬಲೀಕರಣಕ್ಕಾಗಿ ಅದರ ಪ್ರಯತ್ನಗಳನ್ನು ಶ್ಲಾಘಿಸಿದ ನಿರ್ಣಯವು ದಲಿತರಾದ ರಾಮ್ ನಾಥ್ ಕೋವಿಂದ್ ಮತ್ತು ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಅಧಿಕಾರಾವಧಿಯಲ್ಲಿ ದೇಶದ ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ.
ಭಾರತದ 'ಜಾಗತಿಕ ವೇದಿಕೆಯಲ್ಲಿ ಹೆಚ್ಚುತ್ತಿರುವ ಆರ್ಥಿಕ ಪರಾಕ್ರಮ' ಮತ್ತು ಮೋದಿಯವರ ನಾಯಕತ್ವದಲ್ಲಿ ಸಮರ್ಥ, ಬಲಿಷ್ಠ, ಶಕ್ತಿಶಾಲಿ ಮತ್ತು ಸುರಕ್ಷಿತ ದೇಶವಾಗಿ ಹೊರಹೊಮ್ಮುವಿಕೆಯನ್ನು ಉಲ್ಲೇಖಿಸಿದೆ.

'ಮೋದಿಜಿಯವರಿಗೆ 14 ದೇಶಗಳು ಅತ್ಯುನ್ನತ ಗೌರವ ನೀಡಿರುವುದು ನಾವೂ ಸೇರಿದಂತೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ' ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. 'ಪ್ರಧಾನಿ ಮೋದಿ ಜಿಯವರ ನಾಯಕತ್ವದಲ್ಲಿ, ಈ ಅಭಿವೃದ್ಧಿ ಪಯಣದ ಭಾಗಿಗಳಾಗಿ -- ನಾವು ಒಂದಾಗಿದ್ದೇವೆ, ನಾವು ಒಗ್ಗಟ್ಟಾಗಿದ್ದೇವೆ ಮತ್ತು ನಾವು ಸರ್ವಾನುಮತದಿಂದ ಇದ್ದೇವೆ ಎಂದು ಎನ್‌ಡಿಎ ಘಟಕಗಳು ಸರ್ವಾನುಮತದಿಂದ ಬದ್ಧರಾಗಿದ್ದೇವೆ' ಎಂದು ಸಭೆಯ ನಿರ್ಣಯ ಅಂಗೀಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com