ಎನ್​ಡಿಎ ಅಂದರೆ N–ನ್ಯೂ ಇಂಡಿಯಾ, D–ಡೆವಲಪ್​ಮೆಂಟ್ ಹಾಗೂ A– ಆಸ್ಪಿರೇಷನ್- ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ I.N.D.I.A  ಸಭೆಗೆ ಪರ್ಯಾಯವಾಗಿ ನಡೆದ ಎನ್ ಡಿಎ ಸಭೆ ಬಳಿಕ ಪ್ರಧಾನಿ ಮೋದಿ ಮಾತನಾಡಿದ್ದು, ಎನ್ ಡಿಎ ಅಂದರೆ N- ನ್ಯೂ ಇಂಡಿಯಾ, D- ಡೆವಲಪ್​ಮೆಂಟ್, A- ಆಸ್ಪಿರೇಷನ್ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ I.N.D.I.A  ಸಭೆಗೆ ಪರ್ಯಾಯವಾಗಿ ನಡೆದ ಎನ್ ಡಿಎ ಸಭೆ ಬಳಿಕ ಪ್ರಧಾನಿ ಮೋದಿ ಮಾತನಾಡಿದ್ದು, ಎನ್ ಡಿಎ ಅಂದರೆ N- ನ್ಯೂ ಇಂಡಿಯಾ, D- ಡೆವಲಪ್​ಮೆಂಟ್, A- ಆಸ್ಪಿರೇಷನ್ ಎಂದು ಹೇಳಿದ್ದಾರೆ.

ಎನ್ ಡಿಎ ಮೈತ್ರಿಕೂಟಕ್ಕೆ ದೇಶವೇ ಮೊದಲು, ದೇಶದ ಭದ್ರತೆಯೇ ಮೊದಲು, ಅಭಿವೃದ್ಧಿ ಹಾಗೂ ಜನರ ಸಬಲೀಕರಣವೇ ಆದ್ಯತೆಯಾಗಿದೆ. ಆದರೆ ಮಹಾಮೈತ್ರಿಕೂಟಕ್ಕೆ ಮೋದಿಯನ್ನು ಮಣಿಸುವುದುಷ್ಟೇ ಉದ್ದೇಶ, ದೇಶದ ಜನರಿಗೆ ಒಳಿತು ಮಾಡುವುದಲ್ಲ, ಮಹಾಮೈತ್ರಿಕೂಟವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಎನ್ ಡಿಎ ಯಾರನ್ನೋ ಅಧಿಕಾರದಿಂದ ಇಳಿಸಲು ಮಾಡಿರಲಿಲ್ಲ ಸ್ಥಿರ ಸರ್ಕಾರ ನೀಡಲು ಎನ್ ಡಿಎ ರಚನೆ, ನಾವು ಸರ್ಕಾರವನ್ನು ನೀಡುತ್ತಿದ್ದೇವೆ, ಈ ಹಿಂದೆ ನಾವು ಸರ್ಕಾರವನ್ನು ವಿರೋಧಿಸಲಿಲ್ಲ ಸರ್ಕಾರ ಕೆಡವಲು ವಿದೇಶಗಳ ನೆರವು ಪಡೆದಿರಲಿಲ್ಲ. ವಿಪಕ್ಷ ಸ್ಥಾನದಲ್ಲಿದ್ದುಕೊಂಡು ಹೋರಾಟ ಮಾಡಿದ್ದೇವೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಬಡತನ ನಿರ್ಮೂಲನೆಯೇ ಎನ್ ಡಿಎ ಗುರಿ, ಈ ಹಿಂದೆ ಬಡವರನ್ನು ಬಡವರನ್ನಾಗಿಯೇ ಇಡುವ ಸಂಚು ಇತ್ತು ಆ ಸಂಚನ್ನು ಎನ್ ಡಿಎ ಸರ್ಕಾರ ಛಿದ್ರಗೊಳಿಸಿದೆ. 

ಇಲ್ಲಿ ವಚಿತರು, ಶೋಷಿತರ ನಡುವೆ ಕೆಲಸ ಮಾಡುವ ಪಕ್ಷಗಳಿವೆ. ಬಡವರು ರೈತರು ಎನ್ ಡಿಎ ಸರ್ಕಾರವನ್ನು ನಂಬಿದ್ದಾರೆ. ಬಡವರಿಗೆ ಮನೆ ಬ್ಯಾಂಕ್ ಸಾಲ ಬೇಕು ಕನಸುಗಳಿಗೆ ರೆಕ್ಕೆ ಬರಲಿವೆ. ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ, ಇದು ಅಂಬೇಡ್ಕರ್ ಲೋಹಿಯಾ ಹೇಳಿದ ಸಮಾಜವಾದ 

ಎನ್ ಡಿಎ ಪ್ರಾದೇಶಿಕ ಆಶೋತ್ತರಗಳ ಸುಂದರ ಕಾಮನಬಿಲ್ಲಾಗಿದೆ. ಭಾರತದ ಅಭಿವೃದ್ಧಿಯೆಡೆಗೆ ನಾವು ಕೆಲಸ ಮಾಡುತ್ತಿದ್ದೇವೆ, ಎಲ್ಲರ ಪ್ರಯತ್ನದ ಚೈತನ್ಯಕ್ಕೆ ಎನ್ ಡಿಎ ಅದರ ನೇತೃತ್ವ ವಹಿಸಿದೆ ಎಂದು ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com