ಮಣಿಪುರ ವೀಡಿಯೋ: ಮುಖ್ಯ ಆರೋಪಿಯ ಬಂಧನ; ಮೇ, ಜೂನ್ ನಲ್ಲೆ ಪ್ರತ್ಯೇಕ ಎಫ್ಐಆರ್ ಹಾಕಲಾಗಿತ್ತು!

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಪರೇಟ್ ಮಾಡಿರುವ ವೀಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಕರಣದ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡೀಯೋ ದೃಶ್ಯ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡೀಯೋ ದೃಶ್ಯ

ಮಣಿಪುರ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಪರೇಟ್ ಮಾಡಿರುವ ವೀಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಕರಣದ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. 

ಆತನ ಬಂಧನವಾಗುತ್ತಿದ್ದಂತೆಯೇ ಆರೋಪಿಯ ವಿರುದ್ಧ ಆಕ್ರೋಶಗೊಂಡ ಗುಂಪೊಂದು ಆತನ ಮನೆಗೆ ಬೆಂಕಿ ಹಚ್ಚಿದೆ. ಈ ನಡುವೆ ಸ್ಥಳೀಯ ಮಾಧ್ಯಮಗಳು ಮತ್ತೋರ್ವ ಆರೋಪಿಯ ಬಂಧನದ ಸುದ್ದಿಯನ್ನು ಪ್ರಕಟಿಸಿವೆ. ಆದರೆ 2 ನೇ ಆರೋಪಿಯ ಬಂಧನದ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. 

ಮಹಿಳೆಯರ ಮೇಲಿನ ಈ ಕೃತ್ಯ ಮೇ.04 ರಂದು  ಕಾಂಗ್ಪೋಕ್ಪಿ ಜಿಲ್ಲೆಯ ಫೈನೋಮ್ ಗ್ರಾಮದಲ್ಲಿ ನಡೆದಿತ್ತು. 

ಅನಾಮಿಕ ದುಷ್ಕರ್ಮಿಗಳೆಂದು ಉಲ್ಲೇಖಿಸಿ ಘಟನೆಗೆ ಸಂಬಂಧಿಸಿದಂತೆ ನಾಂಗ್ಪೋಕ್ ಸೆಕ್ಮೈ ಪೋಲಿಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಹಾಗೂ ಹತ್ಯೆ ಹಾಗೂ ಇನ್ನಿತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಸಿಎಂ ಬಿರೇನ್ ಸಿಂಗ್ ಮಾತನಾಡಿದ್ದು, ಪೊಲೀಸರು ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದಾರೆ. ಈ ನಡುವೆ ತಂಗ್ಬೋಯಿ ವೈಫೇಯ್ ಮೇ.18 ರಂದು ಕಾಂಗ್ಪೋಪಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ಹಾಗೂ ಜೂ.21 ರಂದು ತೌಬಲ್ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ನ್ನು ದಾಖಲಿಸಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com