ಈ ವರ್ಷ ಪೌರತ್ವ ಬಿಟ್ಟುಕೊಟ್ಟ ಭಾರತೀಯರ ಸಂಖ್ಯೆ ಜೂನ್ ವರೆಗೆ 87 ಸಾವಿರ!

ಈ ವರ್ಷದ ಜೂನ್ ವರೆಗೂ 87,026 ಭಾರತೀಯರು ತಮ್ಮ ಪೌರತ್ವವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆ ಸಚಿವ ಎಸ್ ಜೈಶಂಕರ್ ಲೋಕಸಭೆಗೆ ತಿಳಿಸಿದ್ದಾರೆ. 
ಭಾರತೀಯ ಪೌರತ್ವ (ಸಂಗ್ರಹ ಚಿತ್ರ)
ಭಾರತೀಯ ಪೌರತ್ವ (ಸಂಗ್ರಹ ಚಿತ್ರ)
Updated on

ನವದೆಹಲಿ: ಈ ವರ್ಷದ ಜೂನ್ ವರೆಗೂ 87,026 ಭಾರತೀಯರು ತಮ್ಮ ಪೌರತ್ವವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆ ಸಚಿವ ಎಸ್ ಜೈಶಂಕರ್ ಲೋಕಸಭೆಗೆ ತಿಳಿಸಿದ್ದಾರೆ. 

2011 ರಿಂದ ಈ ವರೆಗೂ ಒಟ್ಟು 17.50 ಲಕ್ಷ ಮಂದಿ ಪೌರತ್ವ ಬಿಟ್ಟುಕೊಟ್ಟಿದ್ದಾರೆ ಎಂದು ಸಚಿವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. 

2022 ರಲ್ಲಿ 2,25,620 ಭಾರತೀಯರು, 2021 ರಲ್ಲಿ 1,63,370, 2020 ರಲ್ಲಿ 85,256  ಮಂದಿ, 2019 ರಲ್ಲಿ 1,44,017 ಮಂದಿ, 2018 ರಲ್ಲಿ 1,34,561, 2017ರಲ್ಲಿ 1,33,049, 1,41,603 ಮಂದಿ 2016 ರಲ್ಲಿ, 1,31,489 ಮಂದಿ 2015 ರಲ್ಲಿ, 2014 ರಲ್ಲಿ 1,29,328 ಮಂದಿ, 2013 ರಲ್ಲಿ 1,31,405 ಮಂದಿ, 2012 ರಲ್ಲಿ 1,20,923, 2011 ರಲ್ಲಿ 1,22,819 ಮಂದಿ ಪೌರತ್ವ ತ್ಯಜಿಸಿದ್ದಾರೆ. 

"ಕಳೆದ ಎರಡು ದಶಕಗಳಲ್ಲಿ ಜಾಗತಿಕ ಕೆಲಸದ ಸ್ಥಳವನ್ನು ಅನ್ವೇಷಿಸುವ ಭಾರತೀಯ ಪ್ರಜೆಗಳ ಸಂಖ್ಯೆ ಗಣನೀಯವಾಗಿದೆ. ಅವರಲ್ಲಿ ಅನೇಕರು ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ತೆಗೆದುಕೊಳ್ಳುವುದನ್ನು ಆಯ್ಕೆ ಮಾಡಿದ್ದಾರೆ" ಎಂದು ಸಚಿವರು ಹೇಳಿದರು.

ವಿದೇಶಗಳಲ್ಲಿ ಭಾರತೀಯ ಸಮುದಾಯವನ್ನು ಗುರುತಿಸುತ್ತಿರುವುದು ದೇಶಕ್ಕೆ ಹೆಮ್ಮೆಯ ವಿಷಯ, ಅನಿವಾಸಿ ಭಾರತೀಯರೊಂದಿಗೆ ಸಂಪರ್ಕದಲ್ಲಿರುವುದರ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. "ಯಶಸ್ವಿ, ಸಮೃದ್ಧ ಮತ್ತು ಪ್ರಭಾವಶಾಲಿ ಅನಿವಾಸಿ ಭಾರತೀಯರ ಸಮುದಾಯ ಭಾರತಕ್ಕೆ ಪ್ರಯೋಜನವಾಗಿದೆ ಮತ್ತು ಇಂತಹ ಸಮುದಾಯಗಳ ಖ್ಯಾತಿಯನ್ನು ರಾಷ್ಟ್ರೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ನಮ್ಮ ವಿಧಾನವಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com