ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್, ಪಿಎಫ್ಐಗಳಲ್ಲೂ 'ಇಂಡಿಯಾ' ಇದೆ: ಪ್ರಧಾನಿ ಮೋದಿ ಟೀಕೆ

ಪ್ರತಿಪಕ್ಷಗಳು ದಿಕ್ಕುತೋಚದಂತಹ ಪರಿಸ್ಥಿತಿಗೆ ತಲುಪಿವೆ. ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಎಂದರೆ "ಇಂಡಿಯನ್ ಮುಜಾಹಿದ್ದೀನ್" ಮತ್ತು "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ" ಎಂದು ಕೂಡ ಆಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಸಹೋದ್ಯೋಗಿಗಳೊಂದಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಸಹೋದ್ಯೋಗಿಗಳೊಂದಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರತಿಪಕ್ಷಗಳು ದಿಕ್ಕುತೋಚದಂತಹ ಪರಿಸ್ಥಿತಿಗೆ ತಲುಪಿವೆ. ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಎಂದರೆ "ಇಂಡಿಯನ್ ಮುಜಾಹಿದ್ದೀನ್" ಮತ್ತು "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ" ಎಂದು ಕೂಡ ಆಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಜೊತೆಗಿರುವ ಎನ್ ಡಿಎ ಮೈತ್ರಿಕೂಟವನ್ನು ಕಟ್ಟಿಹಾಕಲು 26 ವಿಪಕ್ಷಗಳು ಒಟ್ಟು ಸೇರಿ ಮಾಡಿಕೊಂಡಿರುವ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಲಾಗಿದ್ದು ಇವುಗಳ ವಿರುದ್ಧ ಮೋದಿಯವರು ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಇಂತಹ ದಿಕ್ಕುದೆಸೆಯಿಲ್ಲದಿರುವ ವಿರೋಧ ಪಕ್ಷಗಳನ್ನು ನಾನು ಎಂದಿಗೂ ನೋಡಿಲ್ಲ ಎಂದು ಬಿಜೆಪಿ ಸಭೆಯಲ್ಲಿ ಪ್ರಧಾನಿಗಳು ಹೇಳಿರುವುದಾಗಿ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಸಭೆ ಮುಗಿದ ಬಳಿಕ ಉಲ್ಲೇಖಿಸಿದ್ದಾರೆ. 

ಇಂಡಿಯಾ ಎಂದು ಹಸರಿಟ್ಟುಕೊಂಡು ವಿಪಕ್ಷಗಳು ತಮ್ಮನ್ನು ತಾವು ಹೊಗಳಿಕೊಳ್ಳುತ್ತಲೇ ಇರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ - ಇವುಗಳಲ್ಲೆಲ್ಲ ಇಂಡಿಯಾ ಎಂಬ ಹೆಸರಿದೆ. ಭಾರತ ಎಂಬ ಹೆಸರನ್ನು ಬಳಸುವುದರಿಂದ ಏನೂ ಆಗುವುದಿಲ್ಲ. ಕೇವಲ ದೇಶದ ಹೆಸರನ್ನು ಬಳಸಿಕೊಂಡು ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದರು ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು. 

ಪ್ರತಿಪಕ್ಷಗಳು ಸೋಲು, ದಣಿದ, ಹತಾಶ, ಒಂದೇ ಅಂಶದ ಅಜೆಂಡಾದೊಂದಿಗೆ ಒಟ್ಟು ಸೇರಿವೆ ಅದು ಮೋದಿಯನ್ನು ವಿರೋಧಿಸುವುದು, ಅವರ ನಡತೆ ಅವರು ಪ್ರತಿಪಕ್ಷವಾಗಿ ಉಳಿಯಲು ಮನಸ್ಸು ಮಾಡಿದ್ದಾರೆ ಎಂದು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2024ರ ಲೋಕಸಬೆ ಚುನಾವಣೆಯಲ್ಲಿ ಜನಬೆಂಬಲದಿಂದ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ಸಭೆಯಲ್ಲಿ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com