ಅವಿಶ್ವಾಸ ನಿರ್ಣಯ ಅಂಗೀಕಾರದ ನಂತರ ಮಸೂದೆಗಳನ್ನು ಅಂಗೀಕರಿಸುವುದು ಸಾಂವಿಧಾನಕ್ಕೆ ವಿರುದ್ಧ: ಮನೀಶ್ ತಿವಾರಿ

ಲೋಕಸಭೆಯು ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ನಂತರ ಅಂಗೀಕರಿಸಿದ ಎಲ್ಲಾ ಮಸೂದೆಗಳು 'ಸಾಂವಿಧಾನಕ್ಕೆ ವಿರುದ್ಧ' ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ. 
ಮನೀಶ್ ತಿವಾರಿ
ಮನೀಶ್ ತಿವಾರಿ
Updated on

ನವದೆಹಲಿ: ಲೋಕಸಭೆಯು ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ನಂತರ ಅಂಗೀಕರಿಸಿದ ಎಲ್ಲಾ ಮಸೂದೆಗಳು 'ಸಾಂವಿಧಾನಕ್ಕೆ ವಿರುದ್ಧ' ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ. 

ಯಾವುದೇ ಶಾಸಕಾಂಗ ವ್ಯವಹಾರವನ್ನು ಅವಿಶ್ವಾಸ ನಿರ್ಣಯದ ಫಲಿತಾಂಶಗಳು ಹೊರಬಂದ ನಂತರವೇ ಮಾಡಬೇಕು ಎಂದು ತಿವಾರಿ ಒತ್ತಾಯಿಸಿದರು. ಅವಿಶ್ವಾಸ ನಿರ್ಣಯ ಅಂಗೀಕಾರವಾದ ನಂತರದ 10 ದಿನಗಳ ಅವಧಿಯನ್ನು ಮಸೂದೆಗಳನ್ನು ಅಂಗೀಕರಿಸಲು ಬಳಸಲಾಗುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.

ದೆಹಲಿ ಸೇವಾ ಸುಗ್ರೀವಾಜ್ಞೆಗೆ ಬದಲಿಯಾಗಿ ಸಂಸತ್ತಿನಲ್ಲಿ ಮಸೂದೆ ಮಂಡನೆ ವೇಳೆ ಮನೀಶ್ ತಿವಾರಿ ಹೇಳಿದರು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ ನಂತರ ಸಂಸತ್ತಿನ ಮುಂದೆ ಯಾವುದೇ ಮಸೂದೆ ಅಥವಾ ಕಾಯ್ದೆಗಳನ್ನು ಮಂಡಿಸಿದರೆ ಅದು ನೈತಿಕತೆ, ಔಚಿತ್ಯ ಮತ್ತು ಸಂಸದೀಯ ಸಂಪ್ರದಾಯಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಲೋಕಸಭೆಯು ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ನಂತರ ರಾಜ್ಯಸಭೆ ಅಥವಾ ಲೋಕಸಭೆಯಲ್ಲಿ ಅಂಗೀಕರಿಸಿದ ಎಲ್ಲಾ ಮಸೂದೆಗಳ ಸಿಂಧುತ್ವವನ್ನು ಕಾನೂನು ರೀತಿಯಲ್ಲಿ ಅಂಗೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾನೂನಿನ ಮೂಲಕ ಪರಿಶೀಲಿಸಬೇಕು ಎಂದು ತಿವಾರಿ ಪ್ರತಿಪಾದಿಸಿದರು. ಅವಿಶ್ವಾಸ ಗೊತ್ತುವಳಿ ಮಂಡನೆಯಾದ ನಂತರದ ಎಲ್ಲಾ ಶಾಸಕಾಂಗ ಕೆಲಸಗಳು "ಸಾಂವಿಧಾನಕ್ಕೆ ವಿರುದ್ಧ" ಎಂದು ಅವರು ಪ್ರತಿಪಾದಿಸಿದರು.

ಮಣಿಪುರದ ವಿಚಾರವಾಗಿ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರಿಂದ ಉತ್ತರ ಕೋರಿ ಪ್ರತಿಪಕ್ಷಗಳ ಮೈತ್ರಿಕೂಟ I.N.D.I.A ಪರವಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತನಾಡುವಂತೆ ಮಾಡಿದ ತಂತ್ರದೊಂದಿಗೆ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ. 

ಮಣಿಪುರದ "ಅತ್ಯಂತ ಆತಂಕಕಾರಿ ಪರಿಸ್ಥಿತಿ" ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಪ್ರಧಾನಿಯವರು ಸ್ವಯಂಪ್ರೇರಿತ ಹೇಳಿಕೆಯನ್ನು ನೀಡುತ್ತಾರೆ. ಹೀಗಾಗಿ ಅದರ ಬಗ್ಗೆ ಚರ್ಚಿಸಲಿ ಎಂದು ಪ್ರತಿಪಕ್ಷಗಳು ನಿರೀಕ್ಷಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com