ಹಿಂಸಾಚಾರ: 18 ಎಬಿವಿಪಿ ವಿದ್ಯಾರ್ಥಿಗಳನ್ನು ಉಚ್ಚಾಟಿಸಿದ ಉತ್ತರ ಪ್ರದೇಶ ವಿವಿ

ಉಪಕುಲಪತಿಗಳು ನೀಡಿದ್ದ ಎಚ್ಚರಿಕೆಯನ್ನೂ ಲೆಕ್ಕಿಸದೇ  ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಂದ ಕಾಲೇಜು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ 18 ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶ ರಾಜ್ಯದ ವಿವಿಯೊಂದು ಅಮಾನತುಗೊಳಿಸಿದೆ. 
ಎಬಿವಿಪಿ ವಿದ್ಯಾರ್ಥಿಗಳು
ಎಬಿವಿಪಿ ವಿದ್ಯಾರ್ಥಿಗಳು

ನವದೆಹಲಿ: ಉಪಕುಲಪತಿಗಳು ನೀಡಿದ್ದ ಎಚ್ಚರಿಕೆಯನ್ನೂ ಲೆಕ್ಕಿಸದೇ  ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಂದ ಕಾಲೇಜು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ 18 ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶ ರಾಜ್ಯದ ವಿವಿಯೊಂದು ಅಮಾನತುಗೊಳಿಸಿದೆ. 

ದೀನ್ ದಯಾಳ್ ಉಪಾಧ್ಯಾಯ ಗೋರಖ್ ಪುರ ವಿವಿಯ 18 ವಿದ್ಯಾರ್ಥಿಗಳನ್ನು ಅಮಾತುಗೊಳಿಸಲಾಗಿದ್ದು, 6 ಮಂದಿಯನ್ನು ಕ್ಯಾಂಪಸ್ ಪ್ರವೇಶಿಸುವುದರಿಂದ ನಿರ್ಬಂಧಿಸಲಾಗಿದೆ. 

ಉಚ್ಚಾಟನೆಗೊಂದಿರುವವರು ಎಬಿವಿಪಿಯ ವಿದ್ಯಾರ್ಥಿಗಳಾಗಿದ್ದು,  ಶುಲ್ಕ ಏರಿಕೆಗೆ ವಿರೋಧ ಹಾಗೂ ಇತರ ವಿಷಯಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರು.  ಜು 21ರಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ವಿದ್ಯಾರ್ಥಿ ಕಲ್ಯಾಣದ ಡೀನ್ ವರದಿಗಳ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಒಪ್ಪಿಸಲು ನಿರ್ಧರಿಸಲಾಗಿದೆ.
 
ಉಚ್ಚಾಟನೆಗೊಂಡಿರುವ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಾಧ್ಯವಾಗುವುದಿಲ್ಲ. ಜು.21 ರಂದು ವಿದ್ಯಾರ್ಥಿಗಳು ವಿಸಿಯ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com