ಗಂಡ-ಮಕ್ಕಳ ಬಿಟ್ಟು, ಪ್ರಿಯಕರನಿಗಾಗಿ ಪಾಕ್ ಗೆ ಓಡಿ ಹೋದ ಮಹಿಳೆ: ತನಿಖೆಗೆ ಆದೇಶಿಸಿದ ಮಧ್ಯ ಪ್ರದೇಶ ಸರ್ಕಾರ!

ಪ್ರಿಯಕರನಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋಗಿರುವ ಭಾರತ ಮೂಲದ ಮಹಿಳೆ ಅಂಜು ಪ್ರಕರಣವನ್ನು ಮಧ್ಯ ಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಸಂಬಂದ ಕೂಲಂಕುಷ ತನಿಖೆಗೆ ಆದೇಶಿಸಿದೆ.
ಪ್ರಿಯಕರನಿಗಾಗಿ ಪಾಕ್ ಗೆ ಓಡಿ ಹೋದ ಮಹಿಳೆ
ಪ್ರಿಯಕರನಿಗಾಗಿ ಪಾಕ್ ಗೆ ಓಡಿ ಹೋದ ಮಹಿಳೆ

ಭೋಪಾಲ್: ಪ್ರಿಯಕರನಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋಗಿರುವ ಭಾರತ ಮೂಲದ ಮಹಿಳೆ ಅಂಜು ಪ್ರಕರಣವನ್ನು ಮಧ್ಯ ಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಸಂಬಂದ ಕೂಲಂಕುಷ ತನಿಖೆಗೆ ಆದೇಶಿಸಿದೆ.

ಹೌದು.. ಪ್ರಿಯತಮನಿಗಾಗಿ ಯಾರಿಗೂ ತಿಳಿಸದೇ ಗುಟ್ಟಾಗಿ ಪಾಕಿಸ್ತಾನಕ್ಕೆ ಹೋಗಿರುವ ಅಂಜು ಪ್ರಕರಣವನ್ನು ತನಿಖೆ ಮಾಡುವಂತೆ ಮಧ್ಯಪ್ರದೇಶ ಸರ್ಕಾರ ಆದೇಶ ನೀಡಿದೆ. ಎರಡು ಮಕ್ಕಳ ತಾಯಿ ಅಂಜು ಪಾಕ್‌ಗೆ ಹೋದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸ್ ಸ್ಪೆಷಲ್ ಬ್ರಾಂಚ್​ಗೆ ಆದೇಶ ನೀಡಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ರಾಜಸ್ಥಾನದ ನಿವಾಸಿಯಾಗಿದ್ದ ಅಂಜುಗೆ ಇಬ್ಬರು ಮಕ್ಕಳು, ಗಂಡ ಇದ್ದಾರೆ. ಫೇಸ್​ಬುಕ್​​ ಮೂಲಕ ಪರಿಚಯವಾಗಿದ್ದ ಪಾಕಿಸ್ತಾನದ ನಸ್ರುಲ್ಲಾ ಜೊತೆಗೆನ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ಇತ್ತೀಚೆಗೆ ಸ್ನೇಹಿತನ ಭೇಟಿಗೆ ಹೋಗ್ತೀನಿ ಎಂದು ಗಂಡನ ಬಳಿ ಹೇಳಿ ಹೋಗಿದ್ದ ಅಂಜು, ಗುಟ್ಟಾಗಿ ಪಾಕಿಸ್ತಾನಕ್ಕೆ ಹೋಗಿದ್ದಳು. ನಂತರ ಗಂಡನಿಗೆ ಕಾಲ್ ಮಾಡಿದ್ದ ಅಂಜು ನಾನು ಪಾಕಿಸ್ತಾನದಲ್ಲಿದ್ದೇನೆ. ಸ್ನೇಹಿತನ ಭೇಟಿ ಮಾಡಲು ಬಂದಿದ್ದೇನೆ ಎಂದು ಬಾಂಬ್ ಹಾಕಿದ್ದಾಳೆ. ನಂತರ ಫೇಸ್​ಬುಕ್ ಪ್ರಿಯಕರ ನಸ್ರುಲ್ಲಾನನ್ನು ಮದುವೆಯಾಗಿ, ಫಾತಿಮಾ ಎಂದು ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾಳೆ.

ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಈ ಪ್ರಕರಣದ ಕುರಿತು ಹಲವು ಪ್ರಶ್ನೆಗಳೂ ಮೂಡತೊಡಗಿವೆ. ಪಾಕ್​ ಓಡಿ ಹೋಗಿರುವ ಆ ಮಹಿಳೆಗೆ ಪಾಸ್​ಪೋರ್ಟ್ ಹೇಗೆ ಸಿಕ್ಕಿತು. ಆಕೆ ನಕಲಿ ದಾಖಲೆಗಳನ್ನು ನೀಡಿದ್ದಾಳಾ? ಇದರ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆಯಾ ಎಂಬ ಅನುಮಾನ ಹಲವರಲ್ಲಿ ಕಾಡುತ್ತಿದೆ. ಇದೇ ವಿಚಾರವಾಗಿ ಇದೀಗ ಮಧ್ಯ ಪ್ರದೇಶ ಸರ್ಕಾರ ತನಿಖೆಗೆ ಆದೇಶ ನೀಡಿದೆ.

ಮಾತ್ರವಲ್ಲ, ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಆಗಿರುವ ಅಂಜು ತಂದೆ ಗಯಾ ಪ್ರಸಾದ್, ಕೂಡ ತನಿಖೆ ಬಗ್ಗೆ ಮಾತನಾಡಿದ್ದರು. 'ಮಗಳು ನಮಗೆ ಪಾಕ್​ ಹೋಗೋದನ್ನು ತಿಳಿಸಿಲ್ಲ. ಆಕೆ ಆತನನ್ನು ಮದುವೆ ಆಗೋದಿದ್ದರೆ ಮೊದಲ ಪತಿಗೆ ಡಿವೋರ್ಸ್ ನೀಡಬೇಕಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ಮನೆಯಲ್ಲಿದ್ದ ಇಬ್ಬರು ಮಕ್ಕಳ ಬಗ್ಗೆ ಯೋಚನೆ ಮಾಡಲಿಲ್ಲ. ನನ್ನ ಮಕ್ಕಳು ಅಪರಾಧ ಹಿನ್ನೆಲೆ ಇದ್ದರೆ ನಾನು ಯಾವುತ್ತೂ ಸಹಿಸಲ್ಲ. ಈ ಬಗ್ಗೆ ತನಿಖೆ ನಡೆದರೆ ಅದನ್ನು ಎದುರಿಸಲು ನಾವು ಸಿದ್ಧ ಎಂದು ಹೇಳಿದ್ದಾರೆ.

ಇದೇ ಅಂಜು ತಂದೆ ಈ ಹಿಂದೆ ತಮ್ಮ ಮಗಳು ಮಾನಸಿಕವಾಗಿ ತೊಂದರೆಗೀಡಾಗಿದ್ದಳು ಎಂದು ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com