ಡಬ್ಲ್ಯೂ‌ಎಫ್ ಐ ಮುಖ್ಯಸ್ಥನ ಬಂಧನಕ್ಕೆ ಜೂನ್ 9 ರವರೆಗೂ ಗಡುವು, ತಪ್ಪಿದರೆ ಆಂದೋಲನ ಆರಂಭ: ರೈತ ನಾಯಕ ಟಿಕಾಯತ್

ದೇಶದ ಅತ್ಯುನ್ನತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಡಬ್ಲ್ಯೂಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಜೂನ್ 9ರೊಳಗೆ ಬಂಧಿಸಬೇಕು, ತಪ್ಪಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರೈತ ನಾಯಕ ರಾಕೇಶ್ ಟಿಕಾಯತ್
ರೈತ ನಾಯಕ ರಾಕೇಶ್ ಟಿಕಾಯತ್

ಕುರುಕ್ಷೇತ್ರ: ದೇಶದ ಅತ್ಯುನ್ನತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಡಬ್ಲ್ಯೂಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಜೂನ್ 9ರೊಳಗೆ ಬಂಧಿಸಬೇಕು, ತಪ್ಪಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.  

ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ ನಡೆದ ರೈತರ ಪಂಚಾಯತ್ ನಲ್ಲಿ ಪಾಲ್ಗೊಂಡು ಮಾತನಾಡಿದ ಟಿಕಾಯತ್, ನೀಡಲಾಗಿರುವ ಗಡುವಿನಲ್ಲಿ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ದೆಹಲಿಯ ಜಂತರ್ ಮಂತರ್ ಗೆ ತೆರಳುವುದಾಗಿ ಹೇಳಿದರು.

ಕುಸ್ತಿಪಟುಗಳ ಬೇಡಿಕೆಯನ್ನು ಸರ್ಕಾರ ಬಗೆಹರಿಸಬೇಕು, ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನು ಬಂಧಿಸಬೇಕು, ತಪ್ಪಿದರೆ ಜೂನ್ 9 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ಹಾಗೂ ದೇಶಾದ್ಯಂತ 'ಪಂಚಾಯತ್ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಒಂದು ವೇಳೆ ಜೂನ್ 9 ರಂದು ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಅವಕಾಶ ನೀಡದಿದ್ದರೆ ಆಂದೋಲನಾ ಆರಂಭಿಸಲಾಗುವುದು ಎಂದು ಟಿಕಾಯಕ್ ಎಚ್ಚರಿಕೆ ನೀಡಿದರು.

ಗುರುವಾರ ಕುಸ್ತಿಪಟುಗಳಾದ ಸಾಕ್ಷಿಮಲ್ಲಿಕ್, ಬಜರಂಗ್ ಪೂನಿಯಾ, ವಿನೇಶ್ ಫೂಗಾಟ್ ಮತ್ತಿತರರು ಹರಿದ್ವಾರದಲ್ಲಿನ ಗಂಗಾ ನದಿಯಲ್ಲಿ ಪದಕ ಎಸೆಯಲು ತೆರಳುತ್ತಿದ್ದರು. ಆದರೆ, ಇಂತಹ ನಿರ್ಧಾರ ತೆಗೆದುಕೊಳ್ಳದಂತೆ ರೈತ ನಾಯಕರು ಮನವೊಲಿಸಿದ ನಂತರ ಕುಸ್ತಿಪಟುಗಳು ಪದಕಗಳನ್ನು ನದಿಗೆ ಎಸೆಯದೆ ವಾಪಸ್ಸಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com