ಧೈರ್ಯ-ಶೌರ್ಯಕ್ಕೆ ದಾರಿದೀಪ ಛತ್ರಪತಿ ಶಿವಾಜಿ ಮಹಾರಾಜರು: ಪ್ರಧಾನಿ ಮೋದಿ

ಛತ್ರಪತಿ ಶಿವಾಜಿ ಮಹಾರಾಜರು ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸಿದರು. ಅವರ ಆಲೋಚನೆಗಳು 'ಏಕ್ ಭಾರತ್ ಶ್ರೇಷ್ಠ ಭಾರತ'ದ ದೃಷ್ಟಿಕೋನವನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರು ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸಿದರು. ಅವರ ಆಲೋಚನೆಗಳು 'ಏಕ್ ಭಾರತ್ ಶ್ರೇಷ್ಠ ಭಾರತ'ದ ದೃಷ್ಟಿಕೋನವನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು.

ಈ ವೇಳೆ ಛತ್ರಪತಿ ಶಿವಾಜಿ ಅವರನ್ನು ಶೌರ್ಯ ಮತ್ತು ಧೈರ್ಯದ ದಾರಿದೀಪ ಎಂದು ಕರೆದರು, ಛತ್ರಪತಿ ಶಿವಾಜಿ ಮಹಾರಾಜರು ದೇಶಕ್ಕೆ ಸ್ಫೂರ್ತಿ ನೀಡುತ್ತಿದ್ದು, ಅವರ ಚಿಂತನೆಗಳನ್ನು 'ಏಕ ಭಾರತ ಶ್ರೇಷ್ಠ ಭಾರತ'ದ ದೃಷ್ಟಿಯಲ್ಲಿ ನೋಡಬಹುದಾಗಿದೆ ಎಂದು ಹೇಳಿದರು.

ಛತ್ರಪತಿ ಶಿವಾಜಿ ನಮಗೆ ಸ್ಫೂರ್ತಿ ನೀಡುತ್ತಿದ್ದಾರೆ. ಅವರು ಶೌರ್ಯ ಮತ್ತು ಧೈರ್ಯದ ದಾರಿದೀಪವಾಗಿದ್ದರು. ನಮಗೆ ಸ್ವರಾಜ್ಯವನ್ನು ತೋರಿಸಿದರು. ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸಿದರು. ಶಿವಾಜಿ ಅವರು ಮಹಾನ್ ಸೈನಿಕ ಮತ್ತು ಶ್ರೇಷ್ಠ ಆಡಳಿತಗಾರರಾಗಿದ್ದರು."ಈ ದಿನವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನಡೆದಾಗ, ಅದು ಸ್ವರಾಜ್ಯ ಘೋಷಣೆ ಮತ್ತು ರಾಷ್ಟ್ರೀಯತೆಯ ಮೆರಗು ಮತ್ತು ಹೊಸ ಪ್ರಜ್ಞೆ, ಹೊಸ ಶಕ್ತಿಯನ್ನು ನೀಡಿತ್ತು.

"ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವು ಆ ಕಾಲದ ಅದ್ಭುತ ಮತ್ತು ವಿಶೇಷ ಅಧ್ಯಾಯವಾಗಿದೆ. ರಾಷ್ಟ್ರೀಯ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣವು ಅವರ ಆಡಳಿತದ ಮೂಲ ಅಂಶಗಳಾಗಿವೆ ಎಂದು ತಿಳಿಸಿದರು.

ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದು ಭಾರತೀಯ ನೌಕಾಪಡೆಯನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲಾಯಿತು. ನೂರಾರು ವರ್ಷಗಳ ಗುಲಾಮಗಿರಿಯು ನಮ್ಮ ದೇಶವಾಸಿಗಳ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಂಡಿತ್ತು, ಆ ಸಮಯದಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಕಷ್ಟದ ಕೆಲಸವಾಗಿತ್ತು. ಆದರೆ, ಛತ್ರಪತಿ ಶಿವಾಜಿ ಮಹಾರಾಜರು ಅದು ಕಷ್ಟಕರವಾಗಿರಲಿಲ್ಲ. ಆಕ್ರಮಣಕಾರರ ವಿರುದ್ಧ ಹೋರಾಡಿದರು. ಹೋರಾಟದಿಂದ ಸ್ವರಾಜ್ಯ ಸಾಧ್ಯ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಿದರು ಎಂದರು.

ಇಷ್ಟು ವರ್ಷಗಳ ನಂತರವೂ, ಅವರು ಸ್ಥಾಪಿಸಿದ ಮೌಲ್ಯಗಳು ನಮಗೆ ಮುಂದಿನ ದಾರಿಯನ್ನು ತೋರಿಸುತ್ತಿವೆ, ಈ ಮೌಲ್ಯಗಳ ಆಧಾರದ ಮೇಲೆ, ನಾವು 25 ವರ್ಷಗಳ ಅಮೃತ ಕಾಲದ ಪ್ರಯಾಣವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com