ಬಾಲಾಸೋರ್: ಒಡಿಶಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಭಾರತೀಯ ನೌಕಾಪಡೆಯು ಬಾಲಸೋರ್ ಜಿಲ್ಲೆಯಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಿದೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ಮತ್ತು ಬೆಂಬಲ ಒದಗಿಸಲು ಭಾರತೀಯ ನೌಕಾಪಡೆ ಒಡಿಶಾದ ರಾಜ್ಯದ ಆಡಳಿತದೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಕನಿಷ್ಠ 288 ಜನರು ಮೃತಪಟ್ಟಿದ್ದು, 803 ಮಂದಿ ಗಾಯಗೊಂಡಿದ್ದಾರೆ. ಇದು ದೇಶದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾಗಿದೆ. ಐಎನ್‌ಎಸ್ ಚಿಲ್ಕಾದಿಂದ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ವೈದ್ಯಕೀಯ ಸಹಾಯಕರು, ಆಂಬ್ಯುಲೆನ್ಸ್‌ಗಳು ಮತ್ತು ಬೆಂಬಲ ಸೇವೆಗಳು ಸೇರಿದಂತೆ 43 ಸಿಬ್ಬಂದಿಗಳ ವೈದ್ಯಕೀಯ ಮತ್ತು ಬೆಂಬಲ ತಂಡವನ್ನು ಕಳೆದ ರಾತ್ರಿ ಕಳುಹಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಸೋರ್ ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ತಕ್ಷಣದ ವೈದ್ಯಕೀಯ ಪರಿಹಾರ ಮತ್ತು ಆಪರೇಷನ್ ಥಿಯೇಟರ್ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಒಡಿಶಾದ INS ಚಿಲ್ಕಾ ಭಾರತೀಯ ನೌಕಾಪಡೆಯ ಪ್ರಮುಖ ತರಬೇತಿ ಸಂಸ್ಥೆಯಾಗಿದೆ.
ಗಂಭೀರವಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಲು ಬಾಲಸೋರ್‌ನ ಗಂಗಾಧರ ಕಲ್ಯಾಣ ಮಂಟಪದಲ್ಲಿ ನೌಕಾಪಡೆಯ ವೈದ್ಯಕೀಯ ಪರಿಹಾರ ತಂಡದಿಂದ ವೈದ್ಯಕೀಯ ಕ್ಯಾಂಪ್ ತೆರೆಯಲಾಗಿದೆ. ನೌಕಾಪಡೆ ತಂಡ ಗಾಯಾಳುಗಳನ್ನು ಸ್ಥಳಾಂತರಿಸಲು ಮತ್ತು ರಕ್ಷಿಸಲು ಒಡಿಶಾ ನಾಗರಿಕ ಆಡಳಿತಕ್ಕೆ ಸಹಾಯ ಮತ್ತು ಬೆಂಬಲವನ್ನು ನೀಡುತ್ತಿದೆ ಅಧಿಕಾರಿ ಹೇಳಿದ್ದಾರೆ.
Advertisement