ಮಾದಕವಸ್ತು ಸಾಗಿಸುತ್ತಿದ್ದ ಪಾಕಿಸ್ತಾನದ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್!

ಪಂಜಾಬ್‌ನ ಅಮೃತಸರದ ವಾಘಾ-ಅಟ್ಟಾರಿ ಅಂತರರಾಷ್ಟ್ರೀಯ ಗಡಿ ಬಳಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಮತ್ತೊಂದು ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಂಜಾಬ್‌ನ ಅಮೃತಸರದ ವಾಘಾ-ಅಟ್ಟಾರಿ ಅಂತರರಾಷ್ಟ್ರೀಯ ಗಡಿ ಬಳಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಮತ್ತೊಂದು ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ.

ಅಮೃತಸರದ ರತ್ತನ್‌ಖುರ್ದ್ ಗ್ರಾಮದ ಬಳಿ ಭಾನುವಾರ ರಾತ್ರಿ 9.45 ರ ಸುಮಾರಿಗೆ ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಅನ್ನು ಪತ್ತೆ ಮಾಡಿದರು.

ಬಿಎಸ್‌ಎಫ್ ಪಡೆಗಳು ತಕ್ಷಣವೇ ಡ್ರೋನ್ ಅನ್ನು ತಡೆಹಿಡಿಯಲು ಪ್ರತಿಕ್ರಿಯಿಸಿದವು ಮತ್ತು ಪಾಕ್ ಡ್ರೋನ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದವು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ರದೇಶದಲ್ಲಿ ಹುಡುಕಾಟ ನಡೆಸಿದ ನಂತರ, 'ಕಪ್ಪು ಬಣ್ಣದ ಡ್ರೋನ್ (ಕ್ವಾಡ್‌ಕಾಪ್ಟರ್, ಡಿಜೆಐ ಮ್ಯಾಟ್ರಿಸ್, 300 ಆರ್‌ಟಿಕೆ) ಜೊತೆಗೆ ಮೂರು ಪ್ಯಾಕೆಟ್ ಮಾದಕವಸ್ತು (ಹೆರಾಯಿನ್) ವನ್ನು ರತ್ತನಖುರ್ದ್ ಗ್ರಾಮದ ಕೃಷಿಭೂಮಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ವಶಪಡಿಸಿಕೊಂಡ ಹೆರಾಯಿನ್‌ನ ಒಟ್ಟು ತೂಕವು ಸುಮಾರು 3.2 ಕೆಜಿಯಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಸದಾ ಎಚ್ಚರದಿಂದಿರುವ ಬಿಎಸ್‌ಎಫ್‌ನಿಂದ ಡ್ರೋನ್‌ಗಳ ಮೂಲಕ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಮತ್ತೊಂದು ನೀಚ ಪ್ರಯತ್ನ ವಿಫಲವಾಗಿದೆ ಎಂದು ಪಡೆ ಹೇಳಿದೆ.

ಇದಕ್ಕೂ ಮುನ್ನ, ಅಮೃತಸರದ ಹೊರವಲಯದಲ್ಲಿ ಪಾಕಿಸ್ತಾನಿ ಡ್ರೋನ್‌ಗಳು ಬೀಳಿಸಿದ ಭಾರಿ ಪ್ರಮಾಣದ ಮಾದಕವಸ್ತುವನ್ನು ಶನಿವಾರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಶನಿವಾರ ಮುಂಜಾನೆ, ಭದ್ರತಾ ಪಡೆ ಮತ್ತು ಪಂಜಾಬ್ ಪೊಲೀಸರ ಜಂಟಿ ದಾಳಿಯಲ್ಲಿ ಅಮೃತಸರ ಜಿಲ್ಲೆಯ ರಾಯ್ ಗ್ರಾಮದ ಹೊರವಲಯದಲ್ಲಿ ಡ್ರೋನ್‌ಗಳ ಝೇಂಕರಿಸುವ ಮತ್ತು ಸರಕುಗಳನ್ನು ಬೀಳಿಸುವ ಶಬ್ದವನ್ನು ಕೇಳಿದೆ ಎಂದು ಬಿಎಸ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಕಾರಿಗಳ ಪ್ರಕಾರ, ವಶಪಡಿಸಿಕೊಂಡ ಶಂಕಿತ ಮಾದಕವಸ್ತುಗಳ (ಹೆರಾಯಿನ್) ಒಟ್ಟು ತೂಕ ಸುಮಾರು 5.5 ಕೆ.ಜಿ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com