ಮುಂಬೈ: ಜುಹು ಬೀಚ್ ನಲ್ಲಿ ನಾಲ್ವರು ಬಾಲಕರು ನೀರುಪಾಲು, ಓರ್ವನ ರಕ್ಷಣೆ!

ಮುಂಬೈನ ಜುಹು ಬೀಚ್ ಗೆ ಇಳಿದಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ವೇಳೆ ಮತ್ತೊರ್ವ ಬಾಲಕನ ರಕ್ಷಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮುಂಬೈನ ಜುಹು ಬೀಚ್ ಗೆ ಇಳಿದಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ವೇಳೆ ಮತ್ತೊರ್ವ ಬಾಲಕನ ರಕ್ಷಿಸಲಾಗಿದೆ.

ಪಶ್ಚಿಮ ಉಪನಗರದ ಜುಹು ಕೋಳಿವಾಡದಲ್ಲಿ ಘಟನೆ ನಡೆದಿದ್ದು, 12 ರಿಂದ 15 ವರ್ಷ ವಯಸ್ಸಿನ ಐದು ಹುಡುಗರ ತಂಡ ಸಂಜೆ 5.30ರ ಸುಮಾರಿಗೆ ಸಮುದ್ರಕ್ಕೆ ಇಳಿದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲು ಒಬ್ಬ ಬಾಲಕನನ್ನು ಮೀನುಗಾರ ರಕ್ಷಿಸಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳ, ಪೊಲೀಸರು, ಬಿಎಂಸಿ ವಾರ್ಡ್ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿವೆ ಎಂದು ಅವರು ಹೇಳಿದರು.

ಅಧಿಕಾರಿಗಳ ಪ್ರಕಾರ, ಹೆಚ್ಚಿನ ಅಲೆಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ಡೈವರ್‌ಗಳನ್ನು ಸಹ ಕಾರ್ಯಾಚರಣೆಗೆ ಸೇರಲು ವಿನಂತಿಸಲಾಗಿದೆ ಎಂದು ಅವರು ಹೇಳಿದರು.

ಜೂನ್ 15ರಂದು ಗುಜರಾತ್ ಕರಾವಳಿಗೆ ‘ಬೈಪರ್‌ಜೋಯ್’ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಜನರು ಮತ್ತು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com