ಆರೋಗ್ಯಕರ, ಸಂಸ್ಕಾರ’ವಂತ ಮಕ್ಕಳಿಗಾಗಿ ರಾಮಾಯಣ ಓದಿ: ಗರ್ಭಿಣಿಯರಿಗೆ ತೆಲಂಗಾಣ ರಾಜ್ಯಪಾಲೆ ಸಲಹೆ

ಮಕ್ಕಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಉತ್ತೇಜಿಸಲು ಗರ್ಭಿಣಿಯರು ‘ಸುಂದರ್ ಕಂಡ್’ ಪಠಣದ ಜೊತೆಗೆ ರಾಮಾಯಣದಂತಹ ಧಾರ್ಮಿಕ ಮಹಾಕಾವ್ಯಗಳನ್ನು ಓದುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಸಲಹೆ ನೀಡಿದ್ದಾರೆ.
ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್
ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್

ಹೈದರಾಬಾದ್: ಮಕ್ಕಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಉತ್ತೇಜಿಸಲು ಗರ್ಭಿಣಿಯರು ‘ಸುಂದರ್ ಕಂಡ್’ ಪಠಣದ ಜೊತೆಗೆ ರಾಮಾಯಣದಂತಹ ಧಾರ್ಮಿಕ ಮಹಾಕಾವ್ಯಗಳನ್ನು ಓದುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್) ದೊಂದಿಗೆ ಸಂಯೋಜಿತವಾಗಿರುವ ಸಂಸ್ಥೆ ಆಯೋಜಿಸಿದ್ದ ‘ಗರ್ಭ ಸಂಸ್ಕಾರ’ ಎಂಬ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಳ್ಳಿಗಳಲ್ಲಿ ತಾಯಂದಿರು ರಾಮಾಯಣ, ಮಹಾಭಾರತ ಮತ್ತು ಇತರ ಮಹಾಕಾವ್ಯಗಳನ್ನು ಮತ್ತು ಉತ್ತಮ ಕಥೆಗಳನ್ನು ಓದುವುದನ್ನು ನಾವು ನೋಡಿದ್ದೇವೆ. ಗರ್ಭಿಣಿಯರು ರಾಮಾಯಣದಿಂದ ಕಲಿಯುವುದು ಸಾಕಷ್ಟು ಇದೆ.  ಗರ್ಭಿಣಿಯಾಗಿರುವಾಗ ಇವೆಲ್ಲಾ ಶಿಶುಗಳಿಗೆ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com