ಕಾಕ್‌ಪಿಟ್‌ಗೆ ಮಹಿಳೆಯ ಆಹ್ವಾನ: ಇಬ್ಬರು ಪೈಲಟ್ ಗಳ ವಿರುದ್ಧ ಏರ್ ಇಂಡಿಯಾ ಶಿಸ್ತುಕ್ರಮ

ಏರ್ ಇಂಡಿಯಾ ಪೈಲಟ್ ತನ್ನ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಆಹ್ವಾನಿಸಿದ್ದಕ್ಕಾಗಿ ಸಂಸ್ಥೆಯಿಂದ ತನಿಖೆ ಎದುರಿಸಿದ ಒಂದು ತಿಂಗಳ ನಂತರ, ಮತ್ತೊಮ್ಮೆ ಕಳೆದ ವಾರ ದೆಹಲಿ-ಲೇಹ್ ವಿಮಾನದ ಕಾಕ್‌ಪಿಟ್‌ಗೆ ಮಹಿಳೆಯನ್ನು ಆಹ್ವಾನಿಸಿದ್ದಕ್ಕಾಗಿ ಏರ್‌ಲೈನ್ಸ್ ಈಗ ಇಬ್ಬರು ಪೈಲಟ್‌ಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದೆ. 
ಏರ್ ಇಂಡಿಯಾ
ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಪೈಲಟ್ ತನ್ನ ಸ್ನೇಹಿತೆಯನ್ನು ಕಾಕ್‌ಪಿಟ್‌ಗೆ ಆಹ್ವಾನಿಸಿದ್ದಕ್ಕಾಗಿ ಸಂಸ್ಥೆಯಿಂದ ತನಿಖೆ ಎದುರಿಸಿದ ಒಂದು ತಿಂಗಳ ನಂತರ, ಮತ್ತೊಮ್ಮೆ ಕಳೆದ ವಾರ ದೆಹಲಿ-ಲೇಹ್ ವಿಮಾನದ ಕಾಕ್‌ಪಿಟ್‌ಗೆ ಮಹಿಳೆಯನ್ನು ಆಹ್ವಾನಿಸಿದ್ದಕ್ಕಾಗಿ ಏರ್‌ಲೈನ್ಸ್ ಈಗ ಇಬ್ಬರು ಪೈಲಟ್‌ಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದೆ. 

ಎಐ-445 ವಿಮಾನದ ಕಾಕ್‌ಪಿಟ್‌ಗೆ ಅನಧಿಕೃತವಾಗಿ ಮಹಿಳಾ ಪ್ರಯಾಣಿಕರೊಬ್ಬರು ಪ್ರವೇಶಿಸಿದ ಬಗ್ಗೆ ಕ್ಯಾಬಿನ್ ಸಿಬ್ಬಂದಿಯಿಂದ ದೂರು ಬಂದ ಕೂಡಲೇ ಏರ್ ಇಂಡಿಯಾ ಸಂಸ್ಥೆ ಪೈಲಟ್ ಮತ್ತು ಸಹ-ಪೈಲಟ್ ವಿರುದ್ಧ ಕ್ರಮ ಕೈಗೊಂಡಿದೆ. 

ಎಐ-445 ಪೈಲಟ್‌ನ ಮಹಿಳಾ ಸ್ನೇಹಿತೆಯೊಬ್ಬರು ನಿಯಮಗಳನ್ನು ಪಾಲಿಸದೆ ಕಾಕ್‌ಪಿಟ್‌ಗೆ ಪ್ರವೇಶಿಸಿದ್ದಾರೆ, ಇಬ್ಬರೂ ಪೈಲಟ್‌ಗಳಿಗೆ ವಿಚಾರಣೆ ಮುಗಿಯುವವರೆಗೆ ಕರ್ತವ್ಯಕ್ಕೆ ಹಾಜರಾಗದಂತೆ ಆದೇಶ ನೀಡಿದೆ ಎಂದು ಏರ್ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಘಟನೆ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಈ ವಿಚಾರ ಗಮನಕ್ಕೆ ಬಂದಿದ್ದು, ಕಾರ್ಯವಿಧಾನದ ಅನುಸಾರ ಈ ವಿಷಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

"ಕೂಲಂಕುಷ ತನಿಖೆಗಾಗಿ ಏರ್ ಇಂಡಿಯಾ ಸಮಿತಿಯನ್ನು ರಚಿಸಿದೆ" ಎಂದು ಅಧಿಕಾರಿಯೊಬ್ಬರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಏರ್ ಇಂಡಿಯಾದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com