ಭಾರತದಲ್ಲಿ ಟ್ವಿಟರ್‌ ಮುಚ್ಚಿಸುವ ಬೆದರಿಕೆ ಇತ್ತೆಂಬ ಆರೋಪ ಸುಳ್ಳು: ಮಾಜಿ ಸಿಇಒ ವಿರುದ್ಧ ಕೇಂದ್ರ ಸಚಿವ ಗರಂ

ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಇತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ಮಾಜಿ ಸಿಇಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಕ್ ಡಾರ್ಸಿ ಮತ್ತು ರಾಜೀವ್ ಚಂದ್ರ ಶೇಖರ್
ಜಾಕ್ ಡಾರ್ಸಿ ಮತ್ತು ರಾಜೀವ್ ಚಂದ್ರ ಶೇಖರ್

ನವದೆಹಲಿ: ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಇತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ಮಾಜಿ ಸಿಇಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಹಾಕಲಾಗಿತ್ತು ಎಂದು ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸಿ ಅವರು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. 

‘ಕೆಲವು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಬೇಕೆಂಬ ಸೂಚನೆ ಇತ್ತು. ಅದನ್ನು ಪಾಲಿಸದೇ ಹೋದಲ್ಲಿ ನಿರ್ಬಂಧ ವಿಧಿಸುವ ಬೆದರಿಕೆಗಳು ಭಾರತ, ನೈಜೀರಿಯಾ ಮತ್ತು ಟರ್ಕಿಯಲ್ಲಿ ಎದುರಾಗಿದ್ದವು. ಭಾರತವು ಪತ್ರಕರ್ತರು ಮತ್ತು ಹೋರಾಟಗಾರರ ಸಾಮಾಜಿಕ ಮಾಧ್ಯಮ ಬಳಕೆಯನ್ನು ತಡೆಯಲು ಬಯಸುತ್ತದೆ’ ಎಂದು ಡಾರ್ಸಿ ಯುಟ್ಯೂಬ್ ಸುದ್ದಿ ಸಂಸ್ಥೆ ‘ಬ್ರೇಕಿಂಗ್‌’ಗೆ ನೀಡಿದ ಸಂದರ್ಶನದಲ್ಲಿ ಸೋಮವಾರ ಹೇಳಿದ್ದಾರೆ.

ಇನ್ನು ಡಾರ್ಸಿ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಡಾರ್ಸಿ ಆರೋಪಗಳು ಸತ್ಯಕ್ಕೆ ದೂರವಾದದ್ದು. ಭಾರತೀಯ ಕಾನೂನನುಗಳನ್ನು ಟ್ವಿಟರ್ ಪದೇ ಪದೇ ಉಲ್ಲಂಘಿಸಿದೆ. 2022ರ ಜೂನ್‌ನಿಂದ ಭಾರತೀಯ ಕಾನೂನುಗಳನ್ನು ಅನುಸರಿಸಲು ಪ್ರಾರಂಭಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಮಂಗಳವಾರ ತಿಳಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, "ಜ್ಯಾಕ್ ಡಾರ್ಸೆಯವರ ಹೇಳಿಕೆ ಸಂಪೂರ್ಣ ಸುಳ್ಳು, ಬಹುಶಃ Twitter ನ ಇತಿಹಾಸದ ಒಂದು ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನ ಎಂದು ಅವರು ಹೇಳಿದ್ದಾರೆ.

ಇನ್ನು ಸಂದರ್ಶನದಲ್ಲಿ ಡಾರ್ಸಿ, '"ಭಾರತ ಕೇವಲ ಒಂದು ಉದಾಹರಣೆಯಷ್ಟೇ.. ರೈತರ ಪ್ರತಿಭಟನೆಗಳ ಸುತ್ತ, ಸರ್ಕಾರವನ್ನು ಟೀಕಿಸುವ ನಿರ್ದಿಷ್ಟ ಪತ್ರಕರ್ತರ ಸುತ್ತ ಅನೇಕ ವಿನಂತಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ, ಮತ್ತು ಅದು 'ಭಾರತದಲ್ಲಿ ನಾವು ಟ್ವಿಟರ್ ಅನ್ನು ಮುಚ್ಚುತ್ತೇವೆ'...' ನಾವು ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸುತ್ತೇವೆ ಎಂದು ಒತ್ತಡ ಹೇರಿತ್ತು. ನೀವು ಅನುಸರಿಸದಿದ್ದರೆ ನಾವು ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ' ಮತ್ತು ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಒತ್ತಡ ಇತ್ತು ಎಂದು ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com