ದುಬೈ ಕೆಲಸ ಎಂದು ಮನಸೋತಿರಿ ಜೋಕೆ.. ಟ್ರಾವೆಲ್ ಏಜೆಂಟ್ ಗಳ ಆಫರ್ ಗೆ ಸಿಲುಕಿ ಮಹಿಳೆಯರು ನರಕಯಾತನೆ!

ಗೌರವಾನ್ವಿತ ಮತ್ತು ಲಾಭದಾಯಕ ಉದ್ಯೋಗದ ಭರವಸೆಯೊಂದಿಗೆ ದುಬೈಗೆ ತೆರಳಿರುವ ಪಂಜಾಬ್‌ನ ಅನೇಕ ಮಹಿಳೆಯರು ಇದೀಗ ತಮಗಾದ ಕರಾಳ ಅನುಭವಗಳನ್ನು ಬಿಚ್ಚಿಡುತ್ತಿದ್ದು, ಟ್ರಾವೆಲ್ ಏಜೆಂಟ್ ಗಳ ಹಣದಾಸೆಗೆ ನರಕ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಚಿತ್ರವನ್ನು ಪ್ರತಿನಿಧಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ.
ಚಿತ್ರವನ್ನು ಪ್ರತಿನಿಧಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ.

ಚಂಡೀಗಢ: ಗೌರವಾನ್ವಿತ ಮತ್ತು ಲಾಭದಾಯಕ ಉದ್ಯೋಗದ ಭರವಸೆಯೊಂದಿಗೆ ದುಬೈಗೆ ತೆರಳಿರುವ ಪಂಜಾಬ್‌ನ ಅನೇಕ ಮಹಿಳೆಯರು ಇದೀಗ ತಮಗಾದ ಕರಾಳ ಅನುಭವಗಳನ್ನು ಬಿಚ್ಚಿಡುತ್ತಿದ್ದು, ಟ್ರಾವೆಲ್ ಏಜೆಂಟ್ ಗಳ ಹಣದಾಸೆಗೆ ನರಕ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಹೌದು.. ಭಾರತದಿಂದ ದುಬೈ ಕೆಲಸಕ್ಕೆ ಹೋಗುವ ಲಕ್ಷಾಂತರ ನಿವಾಸಿಗಳು ಅಲ್ಲಿ ತಾವು ಅಂದುಕೊಂಡ ಕೆಲಸ ಸಿಗದೇ ಮಾನವ ಕಳ್ಳಸಾಗಣೆಯ ಬಲಿಪಶುಗಳಾಗುತ್ತಿದ್ದಾರೆ. ಇಲ್ಲಿ ಲಾಭದಾಯಕ ಉದ್ಯೋಗದ ಭರವಸೆ ನೀಡಿ ಕರೆದೊಯ್ಯವು ಟ್ರಾವೆಲ್ ಏಜೆಂಟ್ ಗಳು ಅಲ್ಲಿ ತಮ್ಮದೇ ವರಸೆ ತೋರಿಸಿ ಉದ್ಯೋಗಿಗಳ ಬದುಕು ಕಸಿದುಕೊಳ್ಳುತ್ತಿದ್ದಾರೆ. ಉದ್ಯೋಗಕ್ಕಾಗಿ ಕರೆದೊಯ್ಯವ ಏಜೆಂಟ್  ಗಳು ಅಲ್ಲಿ ಉದ್ಯೋಗಿಗಳಿಗೆ ಉದ್ಯೋಗದ ವೀಸಾ ಬದಲು ಪ್ರವಾಸಿ ವೀಸಾದಲ್ಲಿ ದುಬೈಗೆ ಕರೆದೊಯ್ಯುತ್ತಿರುವ ಅಘಾತಕಾರಿ ಅಂಶವನ್ನು ಪಂಜಾಬ್ ಎಸ್ ಐಟಿ ಬಹಿರಂಗಪಡಿಸಿದೆ.

ಉದ್ಯೋಗಕ್ಕಾಗಿ ತೆರಳುವ ಭಾರತೀಯರಿಗೆ ಉದ್ಯೋಗದ ವೀಸಾ ಬದಲಿಗೆ ಅವರನ್ನು ಪ್ರವಾಸಿ ವೀಸಾದಲ್ಲಿ ಕರೆದೊಯ್ದು ಅಲ್ಲಿ ಅವರನ್ನು ವಂಚಿಸುತ್ತಿದ್ದಾರೆ. ಅಲ್ಲಿ ಅವರನ್ನು ತಾವು ಹೇಳಿದ ಕೆಲಸಕ್ಕೆ ಅಲ್ಲದೆ ಇತರೆ ಕೆಳಮಟ್ಟದ ಮತ್ತು ಇತರ ಉದ್ಯೋಗಗಳಿಗೆ ತಳ್ಳಲಾಗುತ್ತಿದೆ.  ಪಶ್ಚಿಮ ಏಷ್ಯಾದ ದೇಶಗಳಿಗೆ ಮಹಿಳೆಯರನ್ನು ಸಾಗಿಸುವ 18 ಪ್ರಕರಣಗಳನ್ನು ಈವರೆಗೆ ಪತ್ತೆ ಮಾಡಲಾಗಿದ್ದು, ಪಂಜಾಬ್ ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ತನಿಖೆಯಲ್ಲಿ ಈ ಸಂಗತಿಗಳು ಹೊರಬಿದ್ದಿವೆ. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ಎಸ್‌ಐಟಿಯು ಫಿರೋಜ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ರಣಧೀರ್ ಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಕಳೆದ ತಿಂಗಳು ಈ ಸಂಬಂಧ ತನಿಖೆಗೆ ಆದೇಶಿಸಿತ್ತು. ನಂತರ ಕೆಲವು ದಿನಗಳ ಹಿಂದೆ ಕೆಲಸ ಮಾಡಲು ಪ್ರಾರಂಭಿಸಿತು. ಕೆಲವು ಸಂದರ್ಭಗಳಲ್ಲಿ, ಟ್ರಾವೆಲ್ ಏಜೆಂಟ್‌ಗಳಿಂದ ವಂಚನೆಗೊಳಗಾದ ಮಹಿಳೆಯರು ತಮಗಾದ ಕರಾಳ ಪರಿಸ್ಥಿತಿಗಳನ್ನು SIT ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಮಹಿಳೆಯರು ಮುಖ್ಯವಾಗಿ ಕೆಳ ಮಧ್ಯಮ ವರ್ಗದ ಅಥವಾ ಬಡ ಕುಟುಂಬಗಳಿಂದ ಬಂದವರಾಗಿದ್ದು, ಟ್ರಾವೆಲ್ ಏಜೆಂಟ್‌ಗಳು ದುಬೈನಲ್ಲಿ ಬ್ಯೂಟಿ ಪಾರ್ಲರ್‌ಗಳಲ್ಲಿ ಉತ್ತಮ ಉದ್ಯೋಗಗಳು ಮತ್ತು ವಯಸ್ಸಾದವರ ಆರೈಕೆಯಲ್ಲಿ ಸಹಾಯ ಮಾಡುವ ಭರವಸೆ ನೀಡಿ ಅಲ್ಲಿಗೆ ಕರೆದೊಯ್ದಿದ್ದರು. ಇದಕ್ಕಾಗಿ ಅವರು ಕೆಲಸದ ವೀಸಾದಲ್ಲಿ ಹೋಗಬೇಕಿತ್ತು.

ಅದರೆ ಏಜೆಂಟ್ ಗಳು ಅವರನ್ನು ಕೆಲಸದ ವೀಸಾ ಬದಲಿಗೆ ಪ್ರವಾಸೀ ವೀಸಾದಲ್ಲಿ ಕರೆದೊಯ್ದಿದ್ದಾರೆ. ಅಲ್ಲಿಂದ ರಸ್ತೆಯ ಮೂಲಕ ಮಸ್ಕತ್‌ಗೆ ಕರೆದೊಯ್ಯಲಾಗಿದೆ. ಕೆಲವು ದಿನಗಳ ನಂತರ ಅವರ ವೀಸಾ ಅವಧಿ ಮುಗಿದ ನಂತರ, ಅವರು ದೇಶದಲ್ಲಿ ಕಾನೂನುಬಾಹಿರರಾಗಿದ್ದು, ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಇದಕ್ಕೆ ಹೆದರಿದ ಸಂತ್ರಸ್ಥ ಹೆಣ್ಣುಮಕ್ಕಳು, ಕಳಪೆ ವೇತನವನ್ನು ಪಡೆಯುವ ಕೀಳು ಕೆಲಸಗಳಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮಹಿಳೆಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಅವರಿಗೆ ಸರಿಯಾದ ವಸತಿ ಮತ್ತು ಊಟವನ್ನು ನೀಡಲಾಗಿಲ್ಲ. ಅವರು ಟ್ರಾವೆಲ್ ಏಜೆಂಟ್‌ಗಳನ್ನು ವಾಪಸ್ ಕಳುಹಿಸಲು ಕೇಳಿದಾಗ, ಅವರು ಹಿಂದಿರುಗಲು ಇನ್ನೂ 2 ಲಕ್ಷ ಪಾವತಿಸಬೇಕಾಗುತ್ತದೆ ಎಂದು ಅವರಿಗೆ ತಿಳಿಸಿದ್ದಾರೆ. ಅವರು ಆರ್ಥಿಕವಾಗಿ ಸದೃಢರಲ್ಲದ ಕಾರಣ, ಅವರು ಅನಿವಾರ್ಯವಾಗಿ ತಮಗಿಷ್ಠವಿಲ್ಲದ ಕೆಲಸಕ್ಕೇ ಅಂಟಿಕೊಂಡು ಕೆಲಸ ಮಾಡಬೇಕಾದ ಸ್ಥಿತಿಗೆ ತಲುಪುತ್ತಾರೆ ಎಂದು ಹೇಳಿದ್ದಾರೆ.

ಅಂತೆಯೇ ದೇಶಾದ್ಯಂತ ಈ ಬೃಹತ್ ಜಾಲ ಹಬ್ಬಿದ್ದು, ಪಂಜಾಬ್, ದೆಹಲಿ, ಕೇರಳ ಮತ್ತು ತೆಲಂಗಾಣದಲ್ಲಿ ಹರಡಿರುವ ಏಜೆಂಟ್‌ಗಳ ಜಾಲವನ್ನು ಬಿಚ್ಚಿಡಲು ಎಸ್‌ಐಟಿ ಪ್ರಯತ್ನಿಸುತ್ತಿದೆ. ಈ ಟ್ರಾವೆಲ್ ಏಜೆಂಟ್‌ಗಳು ಉಪ-ಏಜೆಂಟರನ್ನು ತಮ್ಮ ಕೃತ್ಯಕ್ಕೆ ಬಳಸುತ್ತಾರೆ ಮತ್ತು ಅವರಿಗೆ ಕೆಲವು ಕಮಿಷನ್ ನೀಡಲಾಗುತ್ತದೆ. ಈ ಉಪ-ಏಜೆಂಟರು ತಮ್ಮ ಬಾಸ್‌ಗಳಿಗೆ ಅವರ ಹೆಸರನ್ನು ಶಿಫಾರಸು ಮಾಡುವ ಮೊದಲು ಅವರ ಕುಟುಂಬದ ಇತಿಹಾಸವನ್ನು ಪರಿಶೀಲಿಸುತ್ತಾರೆ. ಈ ಮಹಿಳೆಯರ ಪಾಸ್‌ಪೋರ್ಟ್‌ಗಳನ್ನು ತೆಗೆದುಕೊಂಡು ಹೋಗಲಾಗಿರುವುದರಿಂದ ಅವರಿಗೆ ಹಿಂತಿರುಗಲು ಕಷ್ಟವಾಗುತ್ತದೆ. ಈ ಮಹಿಳೆಯರಲ್ಲಿ ಕೆಲವರು ಭಾರತೀಯ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿದ ಕೆಲವು ಪ್ರಕರಣಗಳೂ ನಮ್ಮಲ್ಲಿವೆ, ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೆಲವು ದಿನಗಳ ಹಿಂದೆ 15 ಮಹಿಳೆಯರು ಒಮನ್‌ನಿಂದ ಹಿಂತಿರುಗಿ ತಮ್ಮ ಸಂಕಷ್ಟವನ್ನು ವಿವರಿಸಿದ್ದರು. ಟ್ರಾವೆಲ್ ಏಜೆಂಟ್‌ಗಳಿಂದ ಸಿಕ್ಕಿಬಿದ್ದಿರುವ ಬಗ್ಗೆ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಇದುವರೆಗೆ ಒಮನ್‌ನಿಂದ 23 ಮಹಿಳೆಯರನ್ನು ರಕ್ಷಿಸಲಾಗಿದ್ದು, ಇನ್ನೂ 14 ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com