ಗುಜರಾತ್ ನ ಕಚ್‌ನಲ್ಲಿ 3.5 ತೀವ್ರತೆಯ ಭೂಕಂಪ

ಗುಜರಾತ್ ನ ಕಚ್‌ ಜಿಲ್ಲೆಯಲ್ಲಿ ಬುಧವಾರ ಸಂಜೆ 3.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಪ್ರದೇಶಕ್ಕೆ 'ಬಿಪರ್‌ಜೋಯ್' ಚಂಡಮಾರುತ ಅಪ್ಪಳಿಸುತ್ತಿರುವ ಸಮಯದಲ್ಲಿ ಭೂಮಿ ಕಂಪಿಸಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಚ್‌: ಗುಜರಾತ್ ನ ಕಚ್‌ ಜಿಲ್ಲೆಯಲ್ಲಿ ಬುಧವಾರ ಸಂಜೆ 3.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಪ್ರದೇಶಕ್ಕೆ 'ಬಿಪರ್‌ಜೋಯ್' ಚಂಡಮಾರುತ ಅಪ್ಪಳಿಸುತ್ತಿರುವ ಸಮಯದಲ್ಲಿ ಭೂಮಿ ಕಂಪಿಸಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಲಘು ಭೂಕಂಪದಿಂದ ಯಾವುದೇ ಆಸ್ತಿ ಅಥವಾ ಜೀವ ಹಾನಿಯಾದ ಬಗ್ಗೆ ಇದುವರೆಗೂ ವರದಿಯಾಗಿಲ್ಲ.

ಇಂದು ಸಂಜೆ 5:05 ಗಂಟೆಗೆ ಕಚ್ ಜಿಲ್ಲೆಯ ಭಚೌದಿಂದ ಪಶ್ಚಿಮ ನೈಋತ್ಯಕ್ಕೆ 5 ಕಿಮೀ ದೂರದಲ್ಲಿ ಕಂಪನ ದಾಖಲಾಗಿದೆ ಎಂದು ಗಾಂಧಿನಗರದಲ್ಲಿರುವ ಭೂಕಂಪನ ಸಂಶೋಧನಾ ಸಂಸ್ಥೆ ತಿಳಿಸಿದೆ.

ಪ್ರಬಲ ಬಿಪರ್‌ಜೋಯ್ ಚಂಡಮಾರುತವು ಸೌರಾಷ್ಟ್ರ ಮತ್ತು ಕಚ್ ಹಾಗೂ ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಮತ್ತು ಜೂನ್ 15 ರಂದು ಸಂಜೆ ವೇಳೆಗೆ ಕಚ್‌ನ ಜಖೌ ಬಂದರಿನ ಬಳಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಚ್ ಜಿಲ್ಲೆಯು "ಅತ್ಯಂತ ಹೆಚ್ಚಿನ ಅಪಾಯದ" ಭೂಕಂಪನ ವಲಯದಲ್ಲಿದೆ ಮತ್ತು ಕಡಿಮೆ ತೀವ್ರತೆಯ ಭೂಕಂಪಗಳು ಅಲ್ಲಿ ನಿಯಮಿತವಾಗಿ ಸಂಭವಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com