ರಾಖಿ ಸಾವಂತ್‌ಗೆ ಬಲವಂತದ ಚುಂಬನ: ಗಾಯಕ ಮಿಕಾ ಸಿಂಗ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ನಟಿ ರಾಖಿ ಸಾವಂತ್ ಅವರಿಗೆ ಬಲವಂತವಾಗಿ ಚುಂಬಿಸಿದ ಆರೋಪದ ಮೇಲೆ ಗಾಯಕ ಮಿಕಾ ಸಿಂಗ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ರಾಖಿ ಸಾವಂತ್
ರಾಖಿ ಸಾವಂತ್

ಮುಂಬೈ: ನಟಿ ರಾಖಿ ಸಾವಂತ್ ಅವರಿಗೆ ಬಲವಂತವಾಗಿ ಚುಂಬಿಸಿದ ಆರೋಪದ ಮೇಲೆ ಗಾಯಕ ಮಿಕಾ ಸಿಂಗ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ಎಸ್‌ಜಿ ಡಿಗೆ ಅವರಿದ್ದ ವಿಭಾಗೀಯ ಪೀಠವು, ರಾಖಿ ಮತ್ತು ಸಿಂಗ್ ಅವರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗಿದೆ ಎಂಬ ರಾಖಿ ಸಾವಂತ್ ಅವರ ಅಫಿಡವಿಟ್ ಅನ್ನು ಗಣನೆಗೆ ತೆಗೆದುಕೊಂಡು ಪ್ರಕರಣದಲ್ಲಿ ಸಲ್ಲಿಸಲಾದ ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ರದ್ದುಗೊಳಿಸಿದೆ.

2006ರ ಜೂನ್ 11ರಂದು ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಖಿ ಸಾವಂತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಿಕಾ ಸಿಂಗ್ ಬಲವಂತವಾಗಿ ಚುಂಬಿಸಿದ ನಂತರ ಎಫ್‌ಐಆರ್ ದಾಖಲಿಸಲಾಗಿತ್ತು.

ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ದೌರ್ಜನ್ಯ) ಮತ್ತು 323 (ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಂಗ್ ಈ ವರ್ಷದ ಏಪ್ರಿಲ್‌ನಲ್ಲಿ, ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ನಂತರದ ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ರಾಖಿ ಸಾವಂತ್ ಅವರು ಸಲ್ಲಿಸಿದ ಅಫಿಡವಿಟ್ ಅನ್ನು ಹೈಕೋರ್ಟ್ ಗುರುವಾರ ಪರಿಶೀಲಿಸಿತು. ಅದರಲ್ಲಿ ಅವರು 'ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡಿದ್ದೇವೆ ಮತ್ತು ನಮ್ಮ ಕಡೆಯಿಂದ ತಪ್ಪು ತಿಳುವಳಿಕೆ ಮತ್ತು ತಪ್ಪುಗ್ರಹಿಕೆಯಿಂದ ಇಡೀ ವಿವಾದ ಉದ್ಭವಿಸಿದೆ ಎಂಬುದನ್ನು ಅರಿತುಕೊಂಡಿರುವುದಾಗಿ' ತಿಳಿಸಿದ್ದರು.

ನಂತರ ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ಅನ್ನು ಹೈಕೋರ್ಟ್ ರದ್ದುಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com