ಬಂದೂಕು ಕಳ್ಳಸಾಗಣೆ ದಂಧೆ; ಕೇರಳ ಜೈಲಿನಿಂದ ಕೈದಿಯನ್ನು ವಶಕ್ಕೆ ಪಡೆದ ಕರ್ನಾಟಕ ಪೊಲೀಸರು

ಗನ್ ಕಳ್ಳಸಾಗಣೆ ದಂಧೆಯ ಹಿಂದಿರುವ ಮಾಹಿತಿ ಮೇರೆಗೆ ಕರ್ನಾಟಕದ ಪೊಲೀಸರು ಟಿಕೆ ಕಣ್ಣೂರು ಜೈಲಿನಲ್ಲಿರುವ ಕೈದಿ ರೆಜೀಶ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತಿರುವನಂತಪುರಂ: ಗನ್ ಕಳ್ಳಸಾಗಣೆ ದಂಧೆಯ ಹಿಂದಿರುವ ಮಾಹಿತಿ ಮೇರೆಗೆ ಕರ್ನಾಟಕದ ಪೊಲೀಸರು ಟಿಕೆ ಕಣ್ಣೂರು ಜೈಲಿನಲ್ಲಿರುವ ಕೈದಿ ರೆಜೀಶ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಸಿಪಿಐ(ಎಂ)ನ ಮಾಜಿ ನಾಯಕ ಟಿ.ಪಿ. ಚಂದ್ರಶೇಖರನ್ ಅವರ ಹತ್ಯೆ ಪ್ರಕರಣದ ಆರೋಪಿ ರೆಜೀಶ್, ಸದ್ಯ ಕೇರಳದ ಜೈಲಿನಲ್ಲಿದ್ದ. 

ಚಂದ್ರಶೇಖರನ್ ಅವರನ್ನು 2012 ರಲ್ಲಿ ಕೋಯಿಕ್ಕೋಡ್‌ನಲ್ಲಿರುವ ಅವರ ಮನೆಯ ಬಳಿ ದಾಳಿಕೋರರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಪ್ರಕರಣವು ಟಿಪಿ ಕೇಸ್ ಎಂದೇ ಕರೆಯಲ್ಪಡುತ್ತದೆ.

ಚಂದ್ರಶೇಖರನ್ ಅವರು 2008 ರಲ್ಲಿ ಸಿಪಿಐಎಂ ಪಕ್ಷವನ್ನು ತೊರೆದು ತಮ್ಮದೇ ಆದ ಕ್ರಾಂತಿಕಾರಿ ಮಾರ್ಕ್ಸ್‌ವಾದಿ ಪಕ್ಷವನ್ನು ಸ್ಥಾಪಿಸಿದರು.

ಈ ಹತ್ಯೆಗೆ ಸಂಬಂಧಿಸಿದಂತೆ ಮೂವರು ಸ್ಥಳೀಯ ಸಿಪಿಐ(ಎಂ) ನಾಯಕರು ಸೇರಿದಂತೆ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವವರಲ್ಲಿ ರೆಜೀಶ್ ಕೂಡ ಒಬ್ಬನು.

ಕೇರಳಕ್ಕೆ ಗನ್‌ಗಳನ್ನು ಕೊಂಡೊಯ್ಯುತ್ತಿದ್ದಾಗ ಇಬ್ಬರು ಕೇರಳ ಮೂಲದವರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದರು. 

ಹೆಚ್ಚಿನ ವಿಚಾರಣೆ ವೇಳೆ ರೆಜೀಶ್ ಹೆಸರು ಕೇಳಿಬಂದಿದ್ದು, ರೆಜೀಶ್ ಹೆಚ್ಚಿನ ಭದ್ರತೆಯಿರುವ ಕಣ್ಣೂರು ಜೈಲ್‌ನಿಂದಲೇ ವಿಷಯಗಳನ್ನು ನಿಯಂತ್ರಿಸುತ್ತಿರುವ ವಿಚಾರ ತನಿಖಾ ತಂಡಕ್ಕೆ ತಿಳಿದುಬಂದಿತ್ತು.

ಗನ್ ಕಳ್ಳಸಾಗಣೆ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪೊಲೀಸರು ರೆಜೀಶ್‌ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಇದೀಗ ವಿಚಾರಣೆ ನಡೆಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com