ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್ಜೋಯ್ ಚಂಡಮಾರುತ: ಪ್ರಧಾನಿ ಮೋದಿಗೆ ಸಿಎಂ ಭೂಪೇಂದ್ರ ಪಟೇಲ್ ಮಾಹಿತಿ!
ಕಚ್(ಗುಜರಾತ್): ಬಿಪರ್ಜೋಯ್ ಚಂಡಮಾರುತ 125 ಕಿ.ಮೀ ವೇಗದಲ್ಲಿ ಗುಜರಾತ್ ಕರಾವಳಿಗೆ ಅಪ್ಪಳಿಸಿದ್ದು ಮಧ್ಯರಾತ್ರಿ ನಂತರ ಇದರ ತೀವ್ರತೆ ಕಡಿಮೆಯಾಗಲಿದೆ.
ಬಿಪರ್ಜೋಯ್ ಚಂಡಮಾರುತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯೆ ಕ್ರಮಗಳನ್ನು ಕೈಗೊಂಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು ಪ್ರಬಲ ಚಂಡಮಾರುತ ಬಿಪರ್ಜೋಯ್ ಅಪ್ಪಳಿಸಿದ ನಂತರ ರಾಜ್ಯದ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ.
ಇತರ ವಿಷಯಗಳ ಜೊತೆಗೆ, ಕಾಡು ಪ್ರಾಣಿಗಳ, ವಿಶೇಷವಾಗಿ ಗಿರ್ ಅರಣ್ಯದಲ್ಲಿರುವ ಸಿಂಹಗಳ ಸುರಕ್ಷತೆಗಾಗಿ ರಾಜ್ಯ ಆಡಳಿತವು ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್ಜೋಯ್ ಚಂಡಮಾರುತ
ಚಂಡಮಾರುತದಿಂದಾಗಿ ಸುಮಾರು 22 ಜನರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ. ಇನ್ನು 23 ಪ್ರಾಣಿಗಳು ಸಾವನ್ನಪ್ಪಿವೆ. 524 ಮರಗಳು ದರೆಗುರುಳಿದ್ದು ಕೆಲವೆಡೆ ವಿದ್ಯುತ್ ಕಂಬಗಳು ಸಹ ಬಿದ್ದಿವೆ. ಇದರಿಂದಾಗಿ 940 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಗುಜರಾತ್ ನ ಕರಾವಳಿ ಭಾಗದ ಎಂಟು ಜಿಲ್ಲೆಗಳಲ್ಲಿ ಬಿಪರ್ಜೋಯ್ ಚಂಡಮಾರುತದ ಪರಿಣಾಮ ಬೀರಲಿದ್ದು, ಇದು ಮಧ್ಯರಾತ್ರಿಯವರೆಗೂ ಹೆಚ್ಚು ಸಕ್ರಿಯವಾಗಿರಲಿದೆ ಎಂದು ಭಾರತೀಯ ಹವಾಮಾನಇಲಾಖೆ (ಐಎಂಡಿ) ತಿಳಿಸಿದೆ.
ಕಚ್ ಜಿಲ್ಲೆಯಲ್ಲಿ ಬಿಪೋರ್ಜಾಯ್ ಚಂಡಮಾರುತದ ಅಪ್ಪಳಿಸುವ ಮುನ್ನ ಗುಜರಾತ್‌ನ ಕರಾವಳಿ ಪ್ರದೇಶದಿಂದ ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

