ರಾಜಕೀಯ ಪ್ರವೇಶ ಗುಸುಗುಸು ನಡುವೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ ಖ್ಯಾತ ನಟ ವಿಜಯ್!

ತಮಿಳಿನ ಖ್ಯಾತ ನಟ ವಿಜಯ್ ರಾಜಕೀಯ ಪ್ರವೇಶ ಕುರಿತ ಊಹಾಪೋಹಗಳ ನಡುವೆ ಡಿಎಂಕೆ ಪುತ್ರ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಅವರ ಜೊತೆಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ರಾಜಕೀಯ ಕುರಿತು ಮಾತನಾಡಿದ್ದಾರೆ.
ನಟ ವಿಜಯ್
ನಟ ವಿಜಯ್
Updated on

ಚೆನ್ನೈ: ತಮಿಳಿನ ಖ್ಯಾತ ನಟ ವಿಜಯ್ ರಾಜಕೀಯ ಪ್ರವೇಶ ಕುರಿತ ಊಹಾಪೋಹಗಳ ನಡುವೆ ಡಿಎಂಕೆ ಪುತ್ರ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಅವರ ಜೊತೆಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ರಾಜಕೀಯ ಕುರಿತು ಮಾತನಾಡಿದ್ದಾರೆ.

ಹೌದು. ನೀಲಂಗರೈನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ 10 ಮತ್ತು 12 ನೇ ತರಗತಿಯ ಟಾಪರ್‌ಗಳನ್ನು ಸನ್ಮಾನಿಸಿ ಮಾತನಾಡಿದ ವಿಜಯ್, ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವಂತೆ ಪೋಷಕರನ್ನು ಮಕ್ಕಳು ಮನವೊಲಿಸಬೇಕೆಂದು ಒತ್ತಾಯಿಸಿದ್ದಾರೆ. "ಚುನಾವಣೆ ಸಮಯದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಹಾಕಲು ಪೋಷಕರಿಗೆ ಹೇಳಿ, ನೀವು ಅದರಲ್ಲಿ ಯಶಸ್ವಿಯಾಗಬಹುದು ಮತ್ತು ಬದಲಾವಣೆ ನೋಡಬಹುದು ಎಂದಿದ್ದಾರೆ. 

ಮೊದಲ ಬಾರಿಯ ಮತದಾರರಾದ ವಿದ್ಯಾರ್ಥಿಗಳು ಮತಕ್ಕಾಗಿ ಹಣ ಪಡೆಯದ ನಾಯಕನನ್ನು ಆಯ್ಕೆ ಮಾಡುವತ್ತ ಗಮನಹರಿಸಬೇಕು, ಇದು ಆದಾಗ ನಿಮ್ಮ ಶಿಕ್ಷಣ ಪೂರ್ಣಗೊಳ್ಳಲಿದೆ. ತಮ್ಮ ನಂಬಿಕೆಗೆ ವಿರುದ್ಧವಾಗಿ ಮತಕ್ಕಾಗಿ ಲಂಚ ಪಡೆಯಬಾರದು ಎಂದು ಅವರು ಕಿವಿಮಾತು ಹೇಳಿದರು. 

1.5 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಒಬ್ಬ ಮತದಾರರಿಗೆ 1,000 ರೂಪಾಯಿ ನೀಡುವ ರಾಜಕಾರಣಿಯನ್ನು ಪರಿಗಣಿಸಿದರೆ ಆತ ಎಷ್ಟು ಲಂಚ ನೀಡಿರಬೇಕು - ಸುಮಾರು 15 ಕೋಟಿ? ಒಬ್ಬ ವ್ಯಕ್ತಿ 15 ಕೋಟಿ ರೂಪಾಯಿ ಲಂಚ ನೀಡಿದರೆ, ಅವನು ಹಿಂದೆ ಎಷ್ಟು ಸಂಪಾದಿಸರಬಹುದು ಎಂಬುದನ್ನು ಯೋಚಿಸಿ. ಅದಕ್ಕೂ ಮುನ್ನ ಗಳಿಸಿದ್ದೇವೆ. ಇದೆಲ್ಲವೂ  ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಬೇಕೆಂದು ನಾನು ಬಯಸುತ್ತೇನೆ ಎಂದರು. 

ಅಲ್ಲದೆ, ಯುವ ಜನತೆ ಪುಸ್ತಕದ ಜ್ಞಾನ ಪಡೆಯುವುದರೊಂದಿಗೆ  ಬಿಆರ್ ಅಂಬೇಡ್ಕರ್, ಇವಿಆರ್ ಪೆರಿಯಾರ್, ಕೆ ಕಾಮರಾಜ್ ಸೇರಿದಂತೆ ಎಲ್ಲಾ ನಾಯಕರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅವರ ಉತ್ತಮ ಅಂಶಗಳನ್ನು ಮಾತ್ರ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಪರೀಕ್ಷೆಯಲ್ಲಿ ಪಾಸಾಗದವರೊಂದಿಗೆ ಸಮಯ ಕಳೆಯಿರಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭ ಎಂದು ಹೇಳಿ ಅವರನ್ನು ಪ್ರೋತ್ಸಾಹಿಸಿ" ಎಂದು ಅವರು ಮನವಿ ಮಾಡಿದರು.

"ಹಾಗೆಯೇ ಎಂದಿಗೂ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಿ ,ಜೀವನದಲ್ಲಿ ಮೇಲಕ್ಕೆ ಹೋದಂತೆ, ನೀವು ಸ್ವಯಂ ಶಿಸ್ತಿನಿಂದ ಪಡೆಯುವ ಸ್ವಾತಂತ್ರ್ಯವನ್ನು ನಿಭಾಯಿಸಿ, ಜೀವನದಲ್ಲಿ ಆನಂದಿಸಿ ಆದರೆ ನಿಮ್ಮ ಗುರುತನ್ನು ಬಿಟ್ಟುಕೊಡಬೇಡಿ. ನಮ್ಮ ಜೀವನ ನಮ್ಮ ಕೈಯಲ್ಲಿದೆ." ವಿಜಯ್ ಸಲಹೆ ನೀಡಿದರು.

ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್, ವಿಜಯ್ ಅವರ ಭಾಷಣಕ್ಕೆ ಪಿಧಾ ಆಗಿದ್ದಾರೆ.  ವಿಜಯ್ ಒಳ್ಳೆಯ ವಿಷಯ ಹೇಳಿದ್ದಾರೆ. ನಿಮ್ಮ ಸಮಸ್ಯೆ ಏನು ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು.  ವಿಜಯ್ ರಾಜಕೀಯ ಪ್ರವೇಶ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕೀಯ ಕ್ಷೇತ್ರಕ್ಕೆ ಬರಲು ಎಲ್ಲರಿಗೂ ಹಕ್ಕಿದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com