ಮಣಿಪುರ: ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಯೋಧನಿಗೆ ಗಾಯ; ಮೂರು ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಭಾನುವಾರ ರಾತ್ರಿ 11.45ರ ಸುಮಾರಿಗೆ ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಗುಂಡೇಟಿನಿಂದ ಸೇನಾ ಯೋಧನ ಎಡಗಾಲಿಗೆ ಗಾಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂಫಾಲ: ಭಾನುವಾರ ರಾತ್ರಿ 11.45ರ ಸುಮಾರಿಗೆ ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಗುಂಡೇಟಿನಿಂದ ಸೇನಾ ಯೋಧನ ಎಡಗಾಲಿಗೆ ಗಾಯವಾಗಿದೆ.

ಮೂಲಗಳ ಪ್ರಕಾರ, ಯೋಧನನ್ನು ಲೀಮಾಖೋಂಗ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅವರು ಸ್ಥಿರವಾಗಿದ್ದಾರೆ ಎಂದು ಹೇಳಲಾಗಿದೆ.

ಲೀಮಾಖೋಂಗ್ (ಚಿಂಗ್‌ಮಾಂಗ್) ಪಕ್ಕದಲ್ಲಿರುವ ಕಾಂಟೊ ಸಬಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ನಂತರ, ಈ ಪ್ರದೇಶದ ಗ್ರಾಮಸ್ಥರ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೇನಾಪಡೆಗಳು ತಕ್ಕ ಉತ್ತರ ನೀಡಿದವು ಎಂದು ಮೂಲಗಳು ತಿಳಿಸಿವೆ.

ಘಟನೆಯ ವೇಳೆ, ಚಿನ್ಮಾಂಗ್ ಗ್ರಾಮದಲ್ಲಿ ದುಷ್ಕರ್ಮಿಗಳು ಮೂರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಸೇನೆಯಿಂದ ಬೆಂಕಿ ನಂದಿಸಲಾಯಿತು.

ಒಂದೆರಡು ಗಂಟೆಗಳ ಶಾಂತತೆಯ ನಂತರ, ಅಪ್ರಚೋದಿತ ಗುಂಡಿನ ಚಕಮಕಿಯು ಕಾಂಟೋ ಸಬಲ್‌ನ ಮೈತೆ ಗ್ರಾಮದಿಂದ 2.35 ರ ಸುಮಾರಿಗೆ ಮತ್ತೆ ಪ್ರಾರಂಭವಾಯಿತು ಮತ್ತು 3 ಗಂಟೆಯವರೆಗೆ ಮುಂದುವರೆಯಿತು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com