ಪುರಿ ಜಗನ್ನಾಥ ರಥಯಾತ್ರೆ: ಶುಭ ಹಾರೈಸಿದ ರಾಷ್ಟ್ರಪತಿ, ಪ್ರಧಾನಿ ಹಾಗೂ ಇತರ ಗಣ್ಯರು, ಭಕ್ತಿಯಿಂದ ಮಿಂದೆದ್ದ ಜನ

ಒಡಿಶಾ ಪುರಿ ಜಗನ್ನಾಥನ ವಾರ್ಷಿಕ 'ರಥ ಜಾತ್ರೆ' ಮಂಗಳವಾರ ಸಾವಿರಾರು ಭಕ್ತರು ಸಮುದ್ರ ತೀರದ ಯಾತ್ರಾರ್ಥಿ ಪಟ್ಟಣದಲ್ಲಿ ಸೇರಿ ಭಕ್ತಿಯಿಂದ ಮಿಂದೇಳುವ ಮೂಲಕ ಆರಂಭವಾಗಿದೆ. ಒಡಿಶಾ ಸರ್ಕಾರವು ಆ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿದ್ದು ಸಾಕಷ್ಟು ಬಂದೋಬಸ್ತ್ ಏರ್ಪಡಿಸಿದೆ. 
ಪುರಿ ಜಗನ್ನಾಥ ರಥ ಯಾತ್ರೆ
ಪುರಿ ಜಗನ್ನಾಥ ರಥ ಯಾತ್ರೆ
Updated on

ಪುರಿ(ಒಡಿಶಾ): ಒಡಿಶಾ ಪುರಿ ಜಗನ್ನಾಥನ ವಾರ್ಷಿಕ 'ರಥ ಜಾತ್ರೆ' ಮಂಗಳವಾರ ಸಾವಿರಾರು ಭಕ್ತರು ಸಮುದ್ರ ತೀರದ ಯಾತ್ರಾರ್ಥಿ ಪಟ್ಟಣದಲ್ಲಿ ಸೇರಿ ಭಕ್ತಿಯಿಂದ ಮಿಂದೇಳುವ ಮೂಲಕ ಆರಂಭವಾಗಿದೆ. ಒಡಿಶಾ ಸರ್ಕಾರವು ಆ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿದ್ದು ಸಾಕಷ್ಟು ಬಂದೋಬಸ್ತ್ ಏರ್ಪಡಿಸಿದೆ. 

ಪುರಿ ಜಗನ್ನಾಥನ ರಥಯಾತ್ರೆಯ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಸಚಿವರು ಮತ್ತು ಒಡಿಶಾ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಶುಭಕೋರಿದ್ದು, ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ. ಈ ಪವಿತ್ರ ದಿನದಂದು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಧರ್ಮೇಂದ್ರ ಪ್ರಧಾನ್ ಅವರು ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿ ಮಾಡಿದರು.

ದೆಹಲಿಯ ಹೌಜ್ ಖಾಸ್‌ನಲ್ಲಿರುವ ಜಗನ್ನಾಥ ಮಂದಿರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮೆರಿಕ ಪ್ರವಾಸ ಕೈಗೊಂಡಿದ್ದು ಟ್ವಿಟರ್‌ನಲ್ಲಿ ಪ್ರಾರ್ಥನೆ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ ಜಗನ್ನಾಥ ರಥ ಯಾತ್ರೆಯ ಶುಭಾಶಯಗಳು. ನಾವು ಈ ಪವಿತ್ರ ಸಂದರ್ಭವನ್ನು ಆಚರಿಸುತ್ತಿರುವಾಗ ಭಗವಾನ್ ಜಗನ್ನಾಥನ ದಿವ್ಯ ಪ್ರಯಾಣವು ನಮ್ಮ ಜೀವನವನ್ನು ಆರೋಗ್ಯ, ಸಂತೋಷ ಮತ್ತು ಆಧ್ಯಾತ್ಮಿಕ ಸಮೃದ್ಧಿಯಿಂದ ತುಂಬಲಿ ಎಂದು ವಿಡಿಯೊ ಹಂಚಿಕೊಂಡು ಬರೆದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವಿಟ್ಟರ್ ನಲ್ಲಿ ಶುಭಾಶಯ ಕೋರಿದ್ದಾರೆ. ಜಗನ್ನಾಥ ರಥ ಯಾತ್ರೆಯು ಸನಾತನ ಸಂಸ್ಕೃತಿಯ ಅತ್ಯಂತ ಮಂಗಳಕರ ಹಬ್ಬವಾಗಿದೆ, ಇದನ್ನು ದೇಶದ ಕೋಟ್ಯಂತರ ಜನರು ಭಕ್ತಿಯಿಂದ ಆಚರಿಸುತ್ತಾರೆ. ಎಲ್ಲರಿಗೂ ಜಗನ್ನಾಥ ರಥ ಯಾತ್ರೆಯ ಶುಭಾಶಯಗಳು. ಈ ರಥ ಯಾತ್ರೆಯ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಎಲ್ಲರಿಗೂ ರಥ ಯಾತ್ರೆಗೆ ಶುಭ ಹಾರೈಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪವಿತ್ರ ರಥ ಯಾತ್ರೆಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು. ಭಗವಂತನ ಆಶೀರ್ವಾದ ಮತ್ತು ನಿಮ್ಮ ಸಹಕಾರದೊಂದಿಗೆ ನಾವು ಹೊಸ ಒಡಿಶಾದ ಅಭಿವೃದ್ಧಿಗೆ ದಾರಿ ಮಾಡಿಕೊಡೋಣ ಎಂದು ಬರೆದುಕೊಂಡಿದ್ದಾರೆ.

ಪುರಿಯಲ್ಲಿ ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥನ ರಥಗಳನ್ನು  ಗುಂಡಿಚಾ ದೇವಸ್ಥಾನದವರೆಗೆ ಎಳೆಯುವ ಸಂದರ್ಭದಲ್ಲಿ ಸುಮಾರು 10 ಲಕ್ಷ ಜನರು ಇಂದು ಸೇರುವ ನಿರೀಕ್ಷೆಯಿದೆ ಎಂದು ಜಗನ್ನಾಥ ದೇವಸ್ಥಾನದ ಆಡಳಿತ (SJTA) ಮುಖ್ಯ ಆಡಳಿತಾಧಿಕಾರಿ ರಂಜನ್ ಕುಮಾರ್ ದಾಸ್ ಹೇಳಿದ್ದಾರೆ. ಉತ್ಸವಕ್ಕಾಗಿ 12 ನೇ ಶತಮಾನದ ದೇಗುಲದ ಮುಂಭಾಗದಲ್ಲಿ ದೇವತೆಗಳ ಮೂರು ದೈತ್ಯಾಕಾರದ ರಥಗಳನ್ನು ನಿಲ್ಲಿಸಲಾಗಿದೆ.

ಭದ್ರತೆ: ಪುರಿಯಲ್ಲಿ 180 ತುಕಡಿಗಳು (1 ತುಕಡಿಯಲ್ಲಿ 30 ಸಿಬ್ಬಂದಿ ಇದ್ದಾರೆ) ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸಾರಿಗೆ ಆಯುಕ್ತ ಅಮಿತಾಬ್ ಠಾಕೂರ್ ಹೇಳಿದ್ದಾರೆ. ಸುಗಮ ಸಂಚಾರ ನಿರ್ವಹಣೆಗಾಗಿ ಪಟ್ಟಣವನ್ನು ವಿವಿಧ ವಲಯಗಳು ಮತ್ತು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಕಡಲ ತೀರದ ಗಸ್ತಿಗಾಗಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ನ್ನು ಸಹ ಸೇವೆಗೆ ಒತ್ತಾಯಿಸಲಾಗಿದೆ. ಜುಲೈ 2 ರವರೆಗೆ ಯಾವುದೇ ಅನಿಶ್ಚಿತತೆ ಎದುರಾದರ ಪರಿಸ್ಥಿತಿ ಎದುರಿಸಲು ಪ್ರತಿಬಂಧಕ(Interceptor) ಬೋಟ್‌ಗಳನ್ನು ಪರದೀಪ್‌ ಬಂದರಿನಲ್ಲಿ ಇರಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಬ್ಬದ ಸಮಯದಲ್ಲಿ ಒಟ್ಟು 125 ವಿಶೇಷ ರೈಲುಗಳು ಪುರಿಗೆ ಪ್ರಯಾಣಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳು 'ರಥಯಾತ್ರೆ' ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com