ಪ್ರಧಾನಿ ಮೋದಿ ಐತಿಹಾಸಿಕ ಅಮೆರಿಕ ಭೇಟಿ: ಜನರಲ್ ಎಲೆಕ್ಟ್ರಿಕ್ ಜೊತೆ ಭಾರತ ಕ್ರಾಂತಿಕಾರಿ ಜೆಟ್ ಎಂಜಿನ್ ಒಪ್ಪಂದ ಸಾಧ್ಯತೆ

ಐತಿಹಾಸಿಕ 2ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಪ್ರವಾಸದಲ್ಲಿ ಖ್ಯಾತ ಜೆಟ್ ವಿಮಾನದ ಎಂಜಿನ್ ತಯಾರಿಕಾ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ಜೊತೆ ಕ್ರಾಂತಿಕಾರಿ ಜೆಟ್ ಎಂಜಿನ್ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜನರಲ್ ಎಲೆಕ್ಟ್ರಿಕ್ ಸಂಸ್ಥೆಯ ಜೆಟ್ ಎಂಜಿನ್ ತಂತ್ರಜ್ಞಾನ
ಜನರಲ್ ಎಲೆಕ್ಟ್ರಿಕ್ ಸಂಸ್ಥೆಯ ಜೆಟ್ ಎಂಜಿನ್ ತಂತ್ರಜ್ಞಾನ

ನವದೆಹಲಿ: ಐತಿಹಾಸಿಕ 2ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಪ್ರವಾಸದಲ್ಲಿ ಖ್ಯಾತ ಜೆಟ್ ವಿಮಾನದ ಎಂಜಿನ್ ತಯಾರಿಕಾ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ಜೊತೆ ಕ್ರಾಂತಿಕಾರಿ ಜೆಟ್ ಎಂಜಿನ್ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೌದು.. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಅತ್ಯಂತ ಮಹತ್ವದ ಭೇಟಿ ಕೈಗೊಂಡಿದ್ದು, ಇದೇ ಹೊತ್ತಿನಲ್ಲಿ ಅವರು ಖ್ಯಾತ ಜೆಟ್ ವಿಮಾನದ ಎಂಜಿನ್ ತಯಾರಿಕಾ ಸಂಸ್ಥೆ ಜನರಲ್ ಎಲೆಕ್ಟ್ರಿಕ್ ಜೊತೆ ಕ್ರಾಂತಿಕಾರಿ ಜೆಟ್ ಎಂಜಿನ್ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಈ ಒಪ್ಪಂದ ಆಗಿದ್ದೇ ಆದರೆ ಜನರಲ್ ಎಲೆಕ್ಟ್ರಿಕ್ (GE) ನಿಂದ ಭಾರತಕ್ಕೆ ನಿರ್ಣಾಯಕ ಎಂಜಿನ್ ತಂತ್ರಜ್ಞಾನವನ್ನು ವರ್ಗಾಯಿಸಲು ಅನುಕೂಲವಾಗಲಿದೆ. ಈ ಬಹು ನಿರೀಕ್ಷಿತ ಒಪ್ಪಂದವು ಹಿಂದೂಸ್ತಾನ್ ಏರೋನಾಟಿಕ್ಸ್ (HAL) ನೊಂದಿಗೆ ಬಹು-ಮಿಲಿಯನ್-ಡಾಲರ್ ಪಾಲುದಾರಿಕೆಯಲ್ಲಿ ಭಾರತದೊಳಗೆ ಅತ್ಯಾಧುನಿಕ GE-F414 ಜೆಟ್ ಎಂಜಿನ್‌ನ ಉತ್ಪಾದನೆಗೆ ನಾಂದಿ ಹಾಡಬಹುದು ಎನ್ನಲಾಗಿದೆ.

ವಿಮಾನಯಾನ ಜಗತ್ತಿನಲ್ಲಿ ಜೆಟ್ ಎಂಜಿನ್ ತಂತ್ರಜ್ಞಾನದ ಮಹತ್ವ ಅತಿ ಹೆಚ್ಚು ಎಂದೇ ಹೇಳಲಾಗುತ್ತದೆ. ಜಗತ್ತಿನ ಆಯ್ದ ಕೆಲವು ರಾಷ್ಟ್ರಗಳು ಮಾತ್ರ ಇಂತಹ ಫೆಸಿಲಿಟಿ ಹೊಂದಿವೆ. ಈ ಇಂಜಿನ್‌ಗಳ ತಯಾರಿಕೆಯು ಭಾರತದಲ್ಲಿ ನಡೆದರೆ, ಅದು ಭಾರತೀಯ ವಾಯುಪ್ರದೇಶದಲ್ಲಿ ಮಹತ್ತರ ಪರಿವರ್ತಕ ಬದಲಾವಣೆಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಎಂಜಿನ್ F/A-18 ಹಾರ್ನೆಟ್, ಅಮೆರಿಕ ನೌಕಾಪಡೆಯ ಗೋ-ಟು ಫೈಟರ್‌ ವಿಮಾನಗಳಿಗೆ ಶಕ್ತಿ ನೀಡುತ್ತಿದೆ. ಈ ಮಟ್ಟದ ತಂತ್ರಜ್ಞಾನವನ್ನು ಯಾರಿಗೂ ವರ್ಗಾಯಿಸಲು ಅಮೆರಿಕ ಈವರೆಗೂ ಅನುಮತಿಸಿರಲಿಲ್ಲ. ಇದೇ ಕಾರಣಕ್ಕೆ ಈ ಬಹು ನಿರೀಕ್ಷಿತ ಒಪ್ಪಂದದ ಮೇಲೆ ಇಡೀ ಜಗತ್ತಿನ ಕಣ್ಣು ನೆಟ್ಟಿದೆ. 

ಅಂತೆಯೇ ಅಮೆರಿಕದ ನ್ಯೂಯಾರ್ಕ್‌ಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ಉದ್ಯಮಿಗಳು, ಶಿಕ್ಷಣ ತಜ್ಞರು, ಆರೋಗ್ಯ ಕ್ಷೇತ್ರದ ತಜ್ಞರು ಸೇರಿದಂತೆ ಸುಮಾರು 24 ಜನ ವಿವಿಧ ಕ್ಷೇತ್ರದ ಸಾಧಕರನ್ನು ಭೇಟಿಯಾಗಲಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಟೆಸ್ಲಾ ಸಹ-ಸಂಸ್ಥಾಪಕ ಎಲೋನ್ ಮಸ್ಕ್, ಖಗೋಳ ಭೌತಶಾಸ್ತ್ರಜ್ಞ ನೀಲ್ ಡಿಗ್ರಾಸ್ ಟೈಸನ್, ಗ್ರಾಮಿ ಪ್ರಶಸ್ತಿ ವಿಜೇತ ಭಾರತೀಯ-ಅಮೆರಿಕನ್ ಗಾಯಕ ಫಾಲು (ಫಲ್ಗುಣಿ ಶಾ), ಪಾಲ್ ರೋಮರ್, ನಿಕೋಲಸ್ ನಾಸಿಮ್ ತಾಲೆಬ್, ರೇ ಡಾಲಿಯೊ, ಜೆಫ್ ಸ್ಮಿತ್, ಮೈಕೆಲ್ ಫ್ರೊಮಾನ್ ಡೇನಿಯಲ್ ರಸ್ಸೆಲ್, ಎಲ್ಬ್ರಿಡ್ಜ್ ಕೋಲ್ಬಿ, ಡಾ ಪೀಟರ್ ಅಗ್ರೆ, ಡಾ ಸ್ಟೀಫನ್ ಕ್ಲಾಸ್ಕೊ ಮತ್ತು ಚಂದ್ರಿಕಾ ಟಂಡನ್ ಅವರನ್ನು ಭೇಟಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com