ಜುಲೈ 1 ರಿಂದ ಮಣಿಪುರದಲ್ಲಿ ಶಾಲೆಗಳು ಪುನರಾರಂಭ

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಈ ಹಿಂದೆ ಘೋಷಿಸಿದಂತೆ ನಾಳೆಯಿಂದ ಶಾಲೆಗಳು ಪುನರಾರಂಭವಾಗಬೇಕಿತ್ತು. ಈಗ ಜೂನ್ 21ರ ಬದಲಿಗೆ ಜುಲೈ 1 ರಿಂದ ಶಾಲೆಗಳು ಪುನರಾರಂಭವಾಗಲಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮಣಿಪುರ
ಮಣಿಪುರ

ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಈ ಹಿಂದೆ ಘೋಷಿಸಿದಂತೆ ನಾಳೆಯಿಂದ ಶಾಲೆಗಳು ಪುನರಾರಂಭವಾಗಬೇಕಿತ್ತು. ಈಗ ಜೂನ್ 21ರ ಬದಲಿಗೆ ಜುಲೈ 1 ರಿಂದ ಶಾಲೆಗಳು ಪುನರಾರಂಭವಾಗಲಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮಣಿಪುರದ ಎಲ್ಲಾ ಶಾಲೆಗಳ ಪುನರಾರಂಭವನ್ನು ಜುಲೈ 1 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಶಿಕ್ಷಣ ನಿರ್ದೇಶಕ(ಶಾಲಾ) ಎಲ್. ನಂದಕುಮಾರ್ ಸಿಂಗ್ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.

ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ವಲಯ ಶಿಕ್ಷಣಾಧಿಕಾರಿಗಳಿಗೆ ಈ ಮೂಲಕ ಸಂಬಂಧಪಟ್ಟ ಎಲ್ಲರಿಗೂ ಮಾಹಿತಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಈ ಮೊದಲು ಜೂನ್ 21 ರಂದು ಸಾಮಾನ್ಯ ತರಗತಿಗಳು ಪುನರಾರಂಭಗೊಳ್ಳಲಿವೆ ಎಂದು ಶಿಕ್ಷಣ ಇಲಾಖೆ ಪ್ರಕಟಿಸಿತ್ತು.

ಮಣಿಪುರವು 4,617 ಶಾಲೆಗಳನ್ನು ಹೊಂದಿದ್ದು, ಇವುಗಳಲ್ಲಿ ಸುಮಾರು 100 ಶಾಲೆಗಳನ್ನು ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಪರಿಹಾರ ಶಿಬಿರಗಳಾಗಿ ಮತ್ತು ಕೇಂದ್ರ ಪಡೆಗಳಿಗೆ ವಸತಿ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com