20ಕ್ಕೂ ಹೆಚ್ಚು ಜನರ ಮೇಲೆ ದಾಳಿ: 21,000 ರೂ. ಬಹುಮಾನ ಘೋಷಿಸಿದ್ದ 'ಮೋಸ್ಟ್ ವಾಂಟೆಡ್' ಕೋತಿ ಸೆರೆ!

20 ಜನರ ಮೇಲೆ ದಾಳಿ ನಡೆಸಿದ ಎರಡು ವಾರಗಳ ನಂತರ 'ಮೋಸ್ಟ್ ವಾಂಟೆಡ್' ಕೋತಿಯೊಂದು ಕೊನೆಗೂ ಸಿಕ್ಕಿ ಬಿದ್ದಿದೆ. ಇದರ ಸೆರೆಗೆ ರೂ. 21,000 ಬಹುಮಾನ ಘೋಷಿಸಲಾಗಿತ್ತು.
ಮೋಸ್ಟ್ ವಾಂಟೆಡ್ ಮಂಕಿ ಚಿತ್ರ
ಮೋಸ್ಟ್ ವಾಂಟೆಡ್ ಮಂಕಿ ಚಿತ್ರ

ಭೋಪಾಲ್: 20 ಜನರ ಮೇಲೆ ದಾಳಿ ನಡೆಸಿದ ಎರಡು ವಾರಗಳ ನಂತರ 'ಮೋಸ್ಟ್ ವಾಂಟೆಡ್' ಕೋತಿಯೊಂದು ಕೊನೆಗೂ ಸಿಕ್ಕಿ ಬಿದ್ದಿದೆ. ಇದರ ಸೆರೆಗೆ ರೂ. 21,000 ಬಹುಮಾನ ಘೋಷಿಸಲಾಗಿತ್ತು.

ಮಧ್ಯಪ್ರದೇಶದ ರಾಜಗಢದಲ್ಲಿ ನಿನ್ನೆ ಸಂಜೆ ಉಜ್ಜಯಿನಿಯಿಂದ ಕರೆಸಲ್ಪಟ್ಟ ರಕ್ಷಣಾ ತಂಡ, ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಕೋತಿ ಹಿಡಿಯಲು ಪ್ರಯತ್ನಿಸಿತು. ಕೋತಿ ಪತ್ತೆಗೆ ಡ್ರೋನ್ ಬಳಸಿದ ತಂಡ ಕೊನೆಗೆ ಅದಕ್ಕೆ ಅರವಳಿಕೆ ನೀಡಿ ಶಾಂತಗೊಳಿಸುವಲ್ಲಿ ಯಶಸ್ವಿಯಾಯಿತು. ನಂತರ ಅದನ್ನು ಪಂಜರದಲ್ಲಿ ಇರಿಸಿತು.

ಅರಣ್ಯ ಇಲಾಖೆ ಸಿಬ್ಬಂದಿ ಶಾಂತವಾದ ಕೋತಿಯನ್ನು ಬಲೆಯಲ್ಲಿ ವಾಹನಕ್ಕೆ ಕೊಂಡೊಯ್ಯುತ್ತಿದ್ದಂತೆ ಅಲ್ಲಿದ್ದ ಗುಂಪು ಜೈ ಶ್ರೀ ರಾಮ್ ಜೈ ಬಜರಂಗ ಬಲಿ ಘೋಷಣೆ ಕೂಗಿತು. ನಂತರ ಮತ್ತೆ ಪ್ರಜ್ಞೆ ಬಂದಾಗ ಕೋತಿ ಕಾಣಿಸಿತು. ಈ ಮಂಗ ಕಳೆದ ಹದಿನೈದು ದಿನಗಳಲ್ಲಿ 20ಕ್ಕೂ ಅಧಿಕ ಜನರ ಮೇಲೆ ದಾಳಿ ನಡೆಸಿದ್ದು, ಈ ಪೈಕಿ ಎಂಟು ಮಕ್ಕಳಿದ್ದರು.

ಗಾಯಾಳುಗಳ ಪೈಕಿ ಅನೇಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸಾಕಷ್ಟು ಹೊಲಿಗೆ ಹಾಕಲಾಗಿದೆ. ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮಂಗನ ಕೃತ್ಯ ಸೆರೆಯಾಗಿದೆ. ವಯೋವೃದ್ಧರೊಬ್ಬರ ಮೇಲೆ ದಾಳಿ ನಡೆಸಿ ಆತನನ್ನು ನೆಲಕ್ಕೆ ಎಳೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಕಂಡುಬಂದಿವೆ.

ಪದೇ ಪದೇ ನಟೋರಿಯಸ್ ಮಂಕಿ ಹಿಡಿಯುವಲ್ಲಿ ಸ್ಥಳೀಯ ಆಡಳಿತ ವಿಫಲವಾದ ನಂತರ ರೂ. 21,000 ಬಹುಮಾನ ಘೋಷಿಸಲಾಗಿತ್ತು. ಇದೀಗ ಈ ಹಣವನ್ನು ಪ್ರಾಣಿ ರಕ್ಷಣಾ ತಂಡಕ್ಕೆ ನೀಡುವುದಾಗಿ ರಾಜಗಢದ ಮುನ್ಸಿಪಾಲ್ ಕಾರ್ಪೋರೇಷನ್ ಅಧ್ಯಕ್ಷ ವಿನೋದ್ ಶಾಹು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com