ಸೊರಗಿದ ಆದಿಪುರುಷ್: ಜನರನ್ನು ಸೆಳೆಯಲು ಟಿಕೆಟ್‌ ದರ 150 ರೂ.ಗೆ ಇಳಿಸಿದ ಚಿತ್ರತಂಡ!

ಆದಿಪುರುಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದು ವಾರವೂ ಕಳೆದಿಲ್ಲ. ಆದರೆ ವಿವಾದಗಳ ಮಾತ್ರ ಬೆಂಬಿಡದೆ ಕಾಡುತ್ತಿವೆ. ಇನ್ನು ಚಿತ್ರದ ಗಳಿಕೆ ಸೋಮವಾರದಿಂದ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ನಿರ್ಮಾಪಕರು ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲಿಸ್‌ನಂತಹ ಮಲ್ಟಿಪ್ಲೆಕ್ಸ್ 150 ರೂ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಚಿತ್ರದ ಪೋಸ್ಟರ್

ಇನ್ನು ಆದಿಪುರುಷ್ ಚಿತ್ರದಲ್ಲಿನ ಸಂಭಾಷಣೆಗಳು ಸಾಕಷ್ಟು ವಿವಾದಗಳನ್ನು ಎಬ್ಬಿಸಿತ್ತು. ಇದರಿಂದ ಎಚ್ಚೆತ್ತಿರುವ ಚಿತ್ರದ ಇದೀಗ ಆದಿಪುರುಷನ ಹಿಂದಿ ಆವೃತ್ತಿಯಲ್ಲಿ ಸಂಭಾಷಣೆಯಲ್ಲಿ ಬದಲಾವಣೆಗಳನ್ನು ಮಾಡಿದ್ದು ಇದನ್ನು ಪ್ರೇಕ್ಷಕರು ಕಾಣಬಹುದಾಗಿದೆ.

ಕೆಲವು ದಿನಗಳ ಹಿಂದೆ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಬಹಿರಂಗಪಡಿಸಿದಂತೆ, ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಅವರ 'ಪಾದಚಾರಿ' ಸಂಭಾಷಣೆಗಳನ್ನು ಎಡಿಟ್ ಮಾಡಲಾಗುತ್ತದೆ.

ರಾವಣನ ಮಗ ಇಂದ್ರಜಿತ್‌ಗೆ ಹನುಮಂತ (ಅಥವಾ ಬಜರಂಗ್ ಎಂದು ಕರೆಯಲ್ಪಡುವ) "ತೇಲ್ ತೇರೆ ಬಾಪ್ ಕಾ, ಆಗ್ ತೇರಿ ಬಾಪ್ ಕಿ, ಜಲೇಗಿ ಭಿ ತೇರೆ ಬಾಪ್ ಕಿ" ಎಂದು ಹೇಳುವ ಭಾಗದ ಸಂಭಾಷಣೆಯನ್ನು ಬದಲಾಗಿಸಲಾಗಿದೆ. "ತೇಲ್ ತೇರಿ ಲಂಕಾ" ಕಾ, ಆಗ್ ತೇರಿ ಲಂಕಾ ಕಾ, ಜಲೇಗಿ ಭೀ ತೇರೆ ಲಂಕಾ ಹೈ" ಎಂದ ಬದಲಾಗಿಸಲಾಗಿದೆ.

PVR ಪ್ರಕಾರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಆಫರ್ ಮಾನ್ಯವಾಗಿಲ್ಲ. ತೆಲುಗು ಆವೃತ್ತಿಯ ಡೈಲಾಗ್‌ಗಳು ಮತ್ತು ಮಲಯಾಳಂ ಮತ್ತು ತಮಿಳು ಡಬ್‌ಗಳು ಯಾವುದೇ ಸಂಪಾದನೆಯ ಅಗತ್ಯವಿಲ್ಲದ ಉತ್ತಮ ಸಂಭಾಷಣೆಗಳನ್ನು ಹೊಂದಿವೆ ಎಂಬುದು ಸ್ಪಷ್ಟವಾಗಿದೆ.

ಕಳೆದ ಶುಕ್ರವಾರ ಬಿಡುಗಡೆಯಾಗಿದ್ದ ಆದಿಪುರುಷ್ ಚಿತ್ರ ಆರು ದಿನಗಳಲ್ಲಿ ಜಗತ್ತಿನಾದ್ಯಂತ 351 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. 500ರಿಂದ 600 ಕೋಟಿ ರುಪಾಯಿಯಲ್ಲಿ ನಿರ್ಮಾಣವಾಗಿದ್ದ ಚಿತ್ರ ಇದೀಗ ಪ್ರೇಕ್ಷಕರಿಲ್ಲದೆ ಬಣಗುಡುತ್ತಿದ್ದು, ಥಿಯೇಟರ್ ಗಳ ಸಂಖ್ಯೆಯಲ್ಲೂ ಬಾರಿ ಇಳಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com