ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್

ಸುಗ್ರೀವಾಜ್ಞೆಯನ್ನು ಬಹಿರಂಗವಾಗಿ ಖಂಡಿಸಲು ಕಾಂಗ್ರೆಸ್ ನಕಾರ, ಅವರ ಮೌನ ಅನುಮಾನ ಹುಟ್ಟುಹಾಕಿದೆ: ಎಎಪಿ

ದೆಹಲಿ ಆಡಳಿತ ಸೇವೆಗಳ ಕುರಿತ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಬಹಿರಂಗವಾಗಿ ಖಂಡಿಸಲು ಕಾಂಗ್ರೆಸ್ "ನಿರಾಕರಿಸಿದೆ" ಎಂದ ಎಎಪಿ, ಕಾಂಗ್ರೆಸ್ ಭಾಗವಹಿಸುವ ಮುಂದಿನ ವಿರೋಧ ಪಕ್ಷಗಳ ಸಭೆಗಳಲ್ಲಿ ಭಾಗವಹಿಸುವುದು...

ನವದೆಹಲಿ: ದೆಹಲಿ ಆಡಳಿತ ಸೇವೆಗಳ ಕುರಿತ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಬಹಿರಂಗವಾಗಿ ಖಂಡಿಸಲು ಕಾಂಗ್ರೆಸ್ "ನಿರಾಕರಿಸಿದೆ" ಎಂದ ಎಎಪಿ, ಕಾಂಗ್ರೆಸ್ ಭಾಗವಹಿಸುವ ಮುಂದಿನ ವಿರೋಧ ಪಕ್ಷಗಳ ಸಭೆಗಳಲ್ಲಿ ಭಾಗವಹಿಸುವುದು ಕಷ್ಟ ಎಂದು ಶುಕ್ರವಾರ ಹೇಳಿದೆ.

ಕಾಂಗ್ರೆಸ್‌ನ ಮೌನ ಅದರ ನಿಜವಾದ ಉದ್ದೇಶಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಎಎಪಿ ಪ್ರಕಟಣೆಯಲ್ಲಿ ತಿಳಿಸಿದೆ.

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ 17 ವಿರೋಧ ಪಕ್ಷಗಳ ನಾಯಕರು ಇಂದು ಪಾಟ್ನಾದಲ್ಲಿ ಸಭೆ ಸೇರಿದ್ದು, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು "ಒಟ್ಟಿಗೆ ಕೆಲಸ ಮಾಡಲು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಲು" ನಿರ್ಧರಿಸಿದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಆಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಕಾಂಗ್ರೆಸ್ ತಮಗೆ ಬೆಂಬಲ ನೀಡುವ ಭರವಸೆ ನೀಡದಿದ್ದರೆ ವಿರೋಧ ಪಕ್ಷದ ನಾಯಕರ ಸಭೆಯಿಂದ ಹೊರಗುಳಿಯುವುದಾಗಿ ಎಎಪಿ ಗುರುವಾರ ಹೇಳಿತ್ತು.

"ಆದಾಗ್ಯೂ ಇಂದು ಪಾಟ್ನಾ ಸಭೆಯಲ್ಲಿ ಭಾಗವಹಿಸಿದ್ದ ಎಎಪಿ, ಕೇಂದ್ರದ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಖಂಡಿಸುವಂತೆ ಅನೇಕ ಪಕ್ಷಗಳು ಕಾಂಗ್ರೆಸ್ ಅನ್ನು ಒತ್ತಾಯಿಸಿದವು. ಆದರೆ, ಕಾಂಗ್ರೆಸ್ ಹಾಗೆ ಮಾಡಲು ನಿರಾಕರಿಸಿತು" ಎಂದು ಆರೋಪಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com