ಹೆಚ್ಚುತ್ತಿರುವ ಸೈಬರ್ ಅಪರಾಧ: ಎಲ್ಲಾ ಸರ್ಕಾರಿ ಸಿಬ್ಬಂದಿಗೆ ಆನ್‌ಲೈನ್ ಸುರಕ್ಷತಾ ಕೋರ್ಸ್ ಕಡ್ಡಾಯ

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಳೆದ ಕೆಲವು ವರ್ಷಗಳಲ್ಲಿ ಅಗಾಧ ಸಂಖ್ಯೆಯ ಸೈಬರ್ ದಾಳಿಗಳಿಗೆ ತುತ್ತಾಗಿರುವುದರಿಂದ ಕೇಂದ್ರವು ಈಗ ಹಿರಿಯ ಅಧಿಕಾರಿಗಳು ಸೇರಿದಂತೆ ತನ್ನ ಉದ್ಯೋಗಿಗಳಿಗೆ ಸೈಬರ್ ಭದ್ರತೆಯ ಕುರಿತು ಕಿರು ಆನ್‌ಲೈನ್ ಕೋರ್ಸ್ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಳೆದ ಕೆಲವು ವರ್ಷಗಳಲ್ಲಿ ಅಗಾಧ ಸಂಖ್ಯೆಯ ಸೈಬರ್ ದಾಳಿಗಳಿಗೆ ತುತ್ತಾಗಿರುವುದರಿಂದ ಕೇಂದ್ರವು ಈಗ ಹಿರಿಯ ಅಧಿಕಾರಿಗಳು ಸೇರಿದಂತೆ ತನ್ನ ಉದ್ಯೋಗಿಗಳಿಗೆ ಸೈಬರ್ ಭದ್ರತೆಯ ಕುರಿತು ಕಿರು ಆನ್‌ಲೈನ್ ಕೋರ್ಸ್ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಿದೆ.

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಸರ್ಕಾರಿ ಉದ್ಯೋಗಿಗಳಿಗಾಗಿ 'ಸೈಬರ್ ಜಾಗದಲ್ಲಿ ಸುರಕ್ಷಿತವಾಗಿರಿ' ಎಂಬ ಉಪಕ್ರಮವನ್ನು ಪರಿಚಯಿಸಿದೆ. ಸಚಿವಾಲಯವು ಇನ್ನೂ ಎರಡು ಕೋರ್ಸ್‌ಗಳನ್ನು ಸಹ ಪರಿಚಯಿಸಿದ್ದು, ಒಂದು ಯೋಗ ಮತ್ತು ಎರಡನೆಯದು ಓರಿಯಂಟೇಶನ್ ಮಾಡ್ಯೂಲ್‌ ಆಫ್ ಮಿಷನ್ ಲೈಫ್‌ ಆಗಿದೆ.

ಎಲ್ಲಾ ಸರ್ಕಾರಿ ನೌಕರರ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಯೋಜನಕಾರಿ ಮತ್ತು ಉಪಯುಕ್ತ ಪರಿಣಾಮವನ್ನು ಬೀರುವ ಗುರಿಯನ್ನು ಹೊಂದಿರುವ ಸೈಬರ್ ಸುರಕ್ಷತಾ ಕೋರ್ಸ್ ಸರ್ಕಾರದ iGOT ಕರ್ಮಯೋಗಿ ವೇದಿಕೆಯಲ್ಲಿದೆ. 'ಕೆಲಸದ ಸ್ಥಳಗಳಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಎಲ್ಲಾ ಸರ್ಕಾರಿ ನೌಕರರು ಈ ಕೋರ್ಸ್ ಅನ್ನು ಮಾಡಿಕೊಳ್ಳಬೇಕು ಮತ್ತು ಪೂರ್ಣಗೊಳಿಸಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

ಈ ಕೋರ್ಸ್ ಮೂಲಕ, ವೆಬ್‌ಸೈಟ್‌ಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಡೇಟಾಬೇಸ್ ಮತ್ತು ಸಂವಹನದ ಇತರ ಪಾಸ್‌ವರ್ಡ್-ಚಾಲಿತ ಡಿಜಿಟಲ್ ಮೋಡ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಎಲ್ಲಾ ವಿಧಾನಗಳನ್ನು ಸರ್ಕಾರಿ ಉದ್ಯೋಗಿಗಳಿಗೆ ಕಲಿಸಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಮತ್ತು ಅಧಿಕಾರಿಗಳು ಸೈಬರ್ ಸುರಕ್ಷತಾ ಕೋರ್ಸ್ ಅನ್ನು ಮಾಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು. 

ಅಧಿಕೃತ ಅಂಕಿಅಂಶಗಳ ಪ್ರಕಾರ, ಮಾರ್ಚ್ 1, 2023 ರ ಹೊತ್ತಿಗೆ ವಿವಿಧ ಇಲಾಖೆಗಳಲ್ಲಿ ಕೇಂದ್ರ ಸರ್ಕಾರದ ನೌಕರರ ಸಂಖ್ಯೆ ಸುಮಾರು 34.45 ಲಕ್ಷ, ಇದು ಮಾರ್ಚ್ 1, 2024 ರ ವೇಳೆಗೆ 35.55 ಲಕ್ಷಕ್ಕೆ ಏರುತ್ತದೆ ಎಂದು ಅಂದಾಜಿಸಲಾಗಿದೆ. ಸುಮಾರು 29 ಕ್ಯಾಬಿನೆಟ್ ಮಂತ್ರಿಗಳು, 47 ರಾಜ್ಯ ಸಚಿವರು ಮತ್ತು ಮೂವರು ಸ್ವತಂತ್ರ ಉಸ್ತುವಾರಿ ಹೊಂದಿರುವ ಸಚಿವರು ಕೇಂದ್ರ ಸರ್ಕಾರದ ಸುಮಾರು 93 ಇಲಾಖೆಗಳನ್ನು ನೋಡಿಕೊಳ್ಳುತ್ತಾರೆ.

ಈಮಧ್ಯೆ, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು (CERT-In) ಕಳೆದ ಒಂಬತ್ತು ವರ್ಷಗಳಲ್ಲಿ, 2014 ರಿಂದ 2022 ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ಮೇಲೆ ಆಗಿರುವ 10,000ಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ಪತ್ತೆಹಚ್ಚಿದೆ ಎಂದು ಸರ್ಕಾರಿ ಮಾಹಿತಿ ತೋರಿಸುತ್ತದೆ. CERT-In ದೇಶದಲ್ಲಿ ಸೈಬರ್ ಭದ್ರತಾ ಘಟನೆಗಳನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಕಡ್ಡಾಯಗೊಳಿಸಲಾಗಿದೆ.

ಸರ್ಕಾರಿ ವೆಬ್‌ಸೈಟ್‌ಗಳನ್ನು ಹೊರತುಪಡಿಸಿ, ಇದೇ ಅವಧಿಯಲ್ಲಿ ಸರ್ಕಾರಿ ಆರೋಗ್ಯ ಸಂಸ್ಥೆಗಳ ಮೇಲೆ ಸುಮಾರು 12,691 ಸೈಬರ್ ದಾಳಿಗಳನ್ನು ನಡೆಸಲಾಗಿದೆ. ಹ್ಯಾಕಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರವು, ವೆಬ್‌ಸೈಟ್‌ಗಳನ್ನು ಆಡಿಟ್ ಮಾಡಲು ವಿವಿಧ ಏಜೆನ್ಸಿಗಳನ್ನು ಕಡ್ಡಾಯಗೊಳಿಸಿದೆ. ಡೇಟಾ ಮತ್ತು ಸೈಬರ್ ಉಲ್ಲಂಘನೆಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com