ಮಧ್ಯ ಪ್ರದೇಶ ಸಿಎಂ, ಪ್ರಧಾನಿ ಮೋದಿ ವಿರುದ್ಧದ ಪೋಸ್ಟರ್‌ಗಳಿಂದ ಲೋಗೋ ತೆಗೆದುಹಾಕಿ: ಕಾಂಗ್ರೆಸ್‌ಗೆ ಫೋನ್‌ಪೇ ಮನವಿ

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಪೋಸ್ಟರ್‌ಗಳಿಂದ ತನ್ನ ಲೋಗೋ ತೆಗೆದುಹಾಕುವಂತೆ ಡಿಜಿಟಲ್ ವ್ಯಾಲೆಟ್-ಆನ್‌ಲೈನ್ ಪಾವತಿ ಕಂಪನಿ ಫೋನ್‌ಪೇ ಗುರುವಾರ...
ಮಧ್ಯ ಪ್ರದೇಶ ಸಿಎಂ ವಿರುದ್ಧದ ಪೋಸ್ಟರ್‌
ಮಧ್ಯ ಪ್ರದೇಶ ಸಿಎಂ ವಿರುದ್ಧದ ಪೋಸ್ಟರ್‌

ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಪೋಸ್ಟರ್‌ಗಳಿಂದ ತನ್ನ ಲೋಗೋ ತೆಗೆದುಹಾಕುವಂತೆ ಡಿಜಿಟಲ್ ವ್ಯಾಲೆಟ್-ಆನ್‌ಲೈನ್ ಪಾವತಿ ಕಂಪನಿ ಫೋನ್‌ಪೇ ಗುರುವಾರ ಮಧ್ಯ ಪ್ರದೇಶ ಕಾಂಗ್ರೆಸ್‌ಗೆ ಒತ್ತಾಯಿಸಿದೆ.

“PhonePe ಲೋಗೋ ನಮ್ಮ ಕಂಪನಿಯ ನೋಂದಾಯಿತ ಟ್ರೇಡ್‌ಮಾರ್ಕ್ ಆಗಿದೆ ಮತ್ತು PhonePeನ ಬೌದ್ಧಿಕ ಆಸ್ತಿ ಹಕ್ಕುಗಳ ಯಾವುದೇ ಅನಧಿಕೃತ ಬಳಕೆಯು ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. ನಮ್ಮ ಬ್ರ್ಯಾಂಡ್ ಲೋಗೋ ಮತ್ತು ಬಣ್ಣವನ್ನು ಒಳಗೊಂಡಿರುವ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ತೆಗೆದುಹಾಕುವಂತೆ ನಾವು ಮಧ್ಯ ಪ್ರದೇಶ ಕಾಂಗ್ರೆಸ್ ಗೆ ವಿನಂತಿಸುತ್ತೇವೆ. ನಾವು ಯಾವುದೇ ರಾಜಕೀಯ ಪ್ರಚಾರ ಅಥವಾ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಜೂನ್ 27 ರಂದು PhonePe ತನ್ನ ಅಧಿಕೃತ Twitter ಹ್ಯಾಂಡಲ್‌ನಿಂದ ಟ್ವೀಟ್‌ ಮಾಡಿದೆ.

ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರಗಳನ್ನು ಹೊಂದಿರುವ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪದ ಮೇಲೆ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗ NSUIನ ಮೂವರು ಪದಾಧಿಕಾರಿಗಳ ವಿರುದ್ಧ ಚಿಂದ್ವಾರಾ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಿದ ಒಂದು ದಿನದ ನಂತರ ಫೋನ್‌ಪೇ ತನ್ನ ಲೋಗೋ ತೆಗೆದುಹಾಕುವಂತೆ ಕೇಳಿಕೊಂಡಿದೆ.

ಮಧ್ಯ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮಧ್ಯೆ ಪೋಸ್ಟರ್ ವಾರ್ ಶುರುವಾಗಿದೆ. ಈ ರಾಜಕೀಯ ವಿಷಯಕ್ಕೆ ತನ್ನ ಕಂಪನಿಯ ಲೋಗೋ ಬಳಕೆ ಮಾಡಿರುವ ಬಗ್ಗೆ ಫೋನ್‌ಪೇ ಕಂಪನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com