ಜಮ್ಮು-ಕಾಶ್ಮೀರ: ವಾರ್ಷಿಕ ಅಮರನಾಥ ಯಾತ್ರೆಗೆ ಸಿದ್ಧತೆ ಪೂರ್ಣ, ಮೂಲ ಶಿಬಿರ ತಲುಪಿದ ಯಾತ್ರಿಕರ ಮೊದಲ ತಂಡ

ಜಮ್ಮು-ಕಾಶ್ಮೀರದಲ್ಲಿ ಮುಂಬರುವ ವಾರ್ಷಿಕ ಅಮರನಾಥ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭೂಮಿಯಿಂದ 3, 888 ಮೀಟರ್ ಎತ್ತರದ ಅಮರನಾಥ ಗುಹೆ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆಯನ್ನು ಸುಗಮವಾಗಿ ನಡೆಸಲು ಭದ್ರತೆ ಮತ್ತು ನಾಗರಿಕ ಆಡಳಿತಗಳು ಸಮ್ಮತಿ ಸೂಚಿಸಿವೆ. 
ಅಮರನಾಥ ಗುಹೆ
ಅಮರನಾಥ ಗುಹೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಂಬರುವ ವಾರ್ಷಿಕ ಅಮರನಾಥ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭೂಮಿಯಿಂದ 3, 888 ಮೀಟರ್ ಎತ್ತರದ ಅಮರನಾಥ ಗುಹೆ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆಯನ್ನು ಸುಗಮವಾಗಿ ನಡೆಸಲು ಭದ್ರತೆ ಮತ್ತು ನಾಗರಿಕ ಆಡಳಿತಗಳು ಸಮ್ಮತಿ ಸೂಚಿಸಿವೆ. 

ಎಲ್ಲಾ ಇಲಾಖೆಗಳು ಮತ್ತು ಸಂಬಂಧಪಟ್ಟ ಜಿಲ್ಲಾಡಳಿತಗಳು ಶ್ರೀ ಅಮರನಾಥ ದೇಗುಲ ನಿಗಮ(SASB)ದೊಂದಿಗೆ ಯಾತ್ರಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಸೌಲಭ್ಯಗಳನ್ನು ಮತ್ತು ಬೆಂಬಲವನ್ನು ಒದಗಿಸುತ್ತಿವೆ.

ಮೂಲ ಶಿಬಿರಕ್ಕೆ ತಲುಪಿದ ಯಾತ್ರಿಗಳು: ಜಮ್ಮುವಿನ ಅಮರನಾಥ ಯಾತ್ರಿ ನಿವಾಸ ಮೂಲ ಶಿಬಿರಕ್ಕೆ(Base camp)ಮೊದಲ ತಂಡದ ಯಾತ್ರಿಕರು ಆಗಮಿಸಿದ್ದಾರೆ. ಇದೇ ಶನಿವಾರದಂದು ವಾರ್ಷಿಕ ಅಮರನಾಥ ಯಾತ್ರೆ ಪ್ರಾರಂಭವಾಗುವ ಮುನ್ನ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಇಂದು ಜಮ್ಮುವಿನ ಯಾತ್ರಿ ನಿವಾಸ ಬೇಸ್ ಕ್ಯಾಂಪ್‌ಗೆ ತಲುಪಿದರು. 

ಯಾತ್ರಿಗಳಿಗೆ ಸೌಲಭ್ಯ: ಜುಲೈ 1 ರಂದು ಪ್ರಾರಂಭವಾಗುವ 62 ದಿನಗಳ ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ. ವಸತಿ ಸೌಲಭ್ಯಗಳು, ವರ್ಧಿತ ಸಂವಹನ ಮಾರ್ಗಗಳು ಮತ್ತು ವಿಸ್ತಾರವಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಹೆಚ್ಚಿನ ಸಂಖ್ಯೆಯ ಲ್ಯಾಂಗರ್‌ಗಳನ್ನು ಇರಿಸಲಾಗಿದೆ. ಯಾತ್ರಾ ಟ್ರ್ಯಾಕ್‌ಗಳನ್ನು ನವೀಕರಿಸಲಾಗಿದೆ. ಎಲ್ಲಾ ದುರ್ಬಲ ಸ್ಥಳಗಳಲ್ಲಿ ಸುರಕ್ಷತಾ ರೇಲಿಂಗ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಡ್ರೋನ್‌ಗಳನ್ನು ನಿಯೋಜಿಸಿ ನಿರಂತರ ಕಣ್ಗಾವಲು ಇರಿಸಲು ಯಾತ್ರಾ ಮಾರ್ಗದಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ಭಕ್ತರನ್ನು ಸ್ವಾಗತಿಸಿದ ಎಸ್‌ಎಎಸ್‌ಬಿ ಸಿಇಒ ಡಾ.ಎಂ.ಕೆ.ಭಂಡಾರಿ, ಭೇಟಿ ನೀಡುವ ಯಾತ್ರಿಗಳು ತೊಂದರೆ-ಮುಕ್ತ ಯಾತ್ರೆ ಕೈಗೊಳ್ಳಲು ಜಮ್ಮು-ಕಾಶ್ಮೀರದ ಆಡಳಿತದ ಸಹಯೋಗದಲ್ಲಿ ಮಂಡಳಿಯಿಂದ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com