ಪಶ್ಚಿಮದ ದೇಶಗಳಿಗೆ ರಷ್ಯಾ ವಿದೇಶಾಂಗ ಸಚಿವರ ತರಾಟೆ, ಅಫ್ಘಾನಿಸ್ತಾನದ ಕಥೆಯೇನು ಎಂದು ಪ್ರಶ್ನೆ

ಜಿ-20 ಸಭೆಗಳಲ್ಲಿ ರಷ್ಯಾ- ಉಕ್ರೇನ್ ವಿಷಯಗಳನ್ನು ಬಿಡದೇ ಪ್ರಸ್ತಾಪಿಸುತ್ತಿರುವ ಪಶ್ಚಿಮದ ದೇಶಗಳ ವಿರುದ್ಧ  ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್
ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್

ಜಿ-20 ಸಭೆಗಳಲ್ಲಿ ರಷ್ಯಾ- ಉಕ್ರೇನ್ ವಿಷಯಗಳನ್ನು ಬಿಡದೇ ಪ್ರಸ್ತಾಪಿಸುತ್ತಿರುವ ಪಶ್ಚಿಮದ ದೇಶಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್, ಅಫ್ಘಾನಿಸ್ತಾನ ಹಾಗೂ ಇರಾಕ್, ಯುಗೊಸ್ಲಾವಿಯಗಳಲ್ಲಿನ ಪರಿಸ್ಥಿತಿಗಳ ಬಗ್ಗೆ ಈ ಹಿಂದೆ ನಡೆದ ಸಭೆಗಳಲ್ಲಿ ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಉಕ್ರೇನ್ ಯುದ್ಧ ಕೊನೆಗಾಣಿಸುವುದಕ್ಕೆ ಮಾತುಕತೆಗೆ ಸಿದ್ದವಿದೆಯೇ? ಎಂದು ರಷ್ಯಾವನ್ನು ಮಾತ್ರ ಪ್ರಶ್ನಿಸುತ್ತಿರುವುದೇಕೆ? ಎಂದು ಕೇಳಿರುವ ಲಾವ್ರೋವ್, ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹಾಗೂ ನ್ಯಾಟೋ ಕಾರ್ಯದರ್ಶಿ ಜನರಲ್ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಯುದ್ಧಭೂಮಿಯಲ್ಲಿ ರಷ್ಯಾವನ್ನು ಮಣಿಸಬೇಕೆಂದು ಸಾರ್ವಜನಿಕವಾಗಿ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

"ರಷ್ಯಾ ಕಾರ್ಯತಂತ್ರದ ಸೋಲನ್ನು ಅನುಭವಿಸಬೇಕು ಹಾಗೂ ಈ ರೀತಿಯಾಗುವುದು ಜಾಗತಿಕ ಪ್ರಾಬಲ್ಯದ ದೃಷ್ಟಿಯಿಂದ ಪಶ್ಚಿಮ ದೇಶಗಳ ಅಸ್ತಿತ್ವವಾದವಾಗಿದೆ ಎಂದು ಅವರು ಹೇಳುತ್ತಾರೆ ಇದು ಮೊಂಡುತನದಿಂದ ಒಪ್ಪಿಕೊಂಡಿರುವುದಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ. 

ರಷ್ಯಾ ಸಚಿವರು ಮುಂದುವರೆದು ಪಶ್ಚಿಮದ ನಾಯಕರು ಎಂದಾದರೂ ಯಾವುದಾದರೂ ಸಭೆಯಲ್ಲಿ, ಇರಾಕ್, ಲಿಬಿಯಾ, ಅಫ್ಘಾನಿಸ್ತಾನ ಅಥವಾ ಯುಗೊಸ್ಲಾವಿಯದ ಬಗ್ಗೆ ಚರ್ಚಿಸಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com