ಕೇರಳ: ಪತ್ನಿಯನ್ನೇ ಮರುವಿವಾಹವಾದ ಮುಸ್ಲಿಂ ವಕೀಲರಿಗೆ ಬೆದರಿಕೆ!

ಮಗಳ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಪತ್ನಿಯನ್ನು ಮರುವಿವಾಹವಾದ ಮುಸ್ಲಿಂ ವಕೀಲರೊಬ್ಬರಿಗೆ ಬೆದರಿಕೆ ಹಾಕಲಾಗಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. 
ಕೇರಳ: ಪತ್ನಿಯನ್ನೇ ಮರುವಿವಾಹವಾದ ಮುಸ್ಲಿಂ ವಕೀಲ
ಕೇರಳ: ಪತ್ನಿಯನ್ನೇ ಮರುವಿವಾಹವಾದ ಮುಸ್ಲಿಂ ವಕೀಲ

ತಿರುವನಂತಪುರಂ: ಮಗಳ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಪತ್ನಿಯನ್ನು ಮರುವಿವಾಹವಾದ ಮುಸ್ಲಿಂ ವಕೀಲರೊಬ್ಬರಿಗೆ ಬೆದರಿಕೆ ಹಾಕಲಾಗಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. 

ವಿಶೇಷ ವಿವಾಹ ಕಾಯ್ದೆಯಡಿ ಅಡ್ವೊಕೇಟ್-ನಟ ಸಿ ಶುಕ್ಕುರ್ ಅವರು ಪತ್ನಿಯನ್ನು ಮರುವಿವಾಹವಾಗಿದ್ದರು. ಈಗ ಬೆದರಿಕೆ ಕರೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕೇರಳ ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. ಶುಕ್ಕುರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೆಲವು ಸಂಘಟನೆಗಳಿಂದ ಬೆದರಿಕೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶುಕ್ಕುರ್ ಪತ್ನಿ ಶೀನಾ,  ಮಹಾತ್ಮ ಗಾಂಧಿ ವಿವಿಯ ಮಾಜಿ ಉಪಕುಲಪತಿಯಾದ್ದಾರೆ. ಆಸ್ತಿಯ ಉತ್ತರಾಧಿಕಾರವನ್ನೂ ನಿರ್ಣಯಿಸುವ ಮುಸ್ಲಿಮ್ ವೈಯಕ್ತಿಕ ಕಾನೂನಿನ ಅಡಿಯ ವಿಶೇಷ ವಿವಾಹ ಕಾಯ್ದೆಯಡಿ ದಂಪತಿಗಳು ಮರುವಿವಾಹವಾಗಿದ್ದರು. ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ಹೆಣ್ಣುಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಮಾತ್ರ ಪಡೆಯುತ್ತಾರೆ ಮತ್ತು ಉಳಿದವು ಪುರುಷ ವಾರಸುದಾರರ ಅನುಪಸ್ಥಿತಿಯಲ್ಲಿ ಅವರ ಸಹೋದರರಿಗೆ ಹೋಗುತ್ತದೆ.

ಈ ಕುಟುಂಬದ ವಿರುದ್ಧ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳು ಫತ್ವಾಗಳನ್ನು ಹೊರಡಿಸಿವೆ. ಕೇರಳದ ಪ್ರಮುಖ ಸುನ್ನಿ ಉನ್ನತ ಶಿಕ್ಷಣ ಸಂಸ್ಥೆ ಈ ದಂಪತಿಗಳ ನಡೆಗೆ ಅಸಮಾಧಾನ ಹೊರಹಾಕಿದ್ದು ಇವರು ಮುಸ್ಲಿಮ್ ವೈಯಕ್ತಿಕ ಕಾನೂನುಗಳು ಹಾಗೂ ಇಸ್ಲಾಮ್ ನ್ನು ಅವಮಾನ ಮಾಡಿದ್ದಾರೆ ಎಂದು ಹೇಳಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com