ಮೂವರು ಪುತ್ರಿಯರಿಗಾಗಿ ಕೇರಳದ ಮುಸ್ಲಿಂ ದಂಪತಿ ಮರುಮದುವೆ; ಏಕೆ? ಇಲ್ಲಿದೆ ಆಸಕ್ತಿಕರ ಉತ್ತರ...

ಕೇರಳದ ಕಾಞಂಗಾಡ್‌ನ ಖ್ಯಾತ ವಕೀಲ ಸಿ ಶುಕ್ಕೂರ್ ಮತ್ತು ಅವರ ಪತ್ನಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ ಶೀನಾ ಅವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದು ಮಾರ್ಚ್ 8ರಂದು ಮರುಮದುವೆಯಾಗುತ್ತಿದ್ದಾರೆ. ಅದು ತಮ್ಮ ಮೂವರು ಪುತ್ರಿಯರಿಗೋಸ್ಕರ.
ಡಾ ಶೀನ ಮತ್ತು ಶಕ್ಕೂರು ತಮ್ಮ ಮಕ್ಕಳೊಂದಿಗೆ
ಡಾ ಶೀನ ಮತ್ತು ಶಕ್ಕೂರು ತಮ್ಮ ಮಕ್ಕಳೊಂದಿಗೆ

ಕೋಝಿಕೋಡ್: ಕೇರಳದ ಕಾಞಂಗಾಡ್‌ನ ಖ್ಯಾತ ವಕೀಲ ಸಿ ಶುಕ್ಕೂರ್ ಮತ್ತು ಅವರ ಪತ್ನಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಡಾ ಶೀನಾ ಅವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಮರುಮದುವೆಯಾಗುತ್ತಿದ್ದಾರೆ. ಅದು ತಮ್ಮ ಮೂವರು ಪುತ್ರಿಯರಿಗೋಸ್ಕರ.

ತಮ್ಮ ಸಂಪೂರ್ಣ ಆಸ್ತಿಯನ್ನು ತಮ್ಮ ಹೆಣ್ಣುಮಕ್ಕಳಿಗೆ ನೀಡಲು ಇಂದು ಮರುಮದುವೆಯಾಗುತ್ತಿದ್ದಾರೆ. ಅಕ್ಟೋಬರ್ 6, 1994 ರಂದು ಷರಿಯಾ ಕಾನೂನಿನ ಅಡಿಯಲ್ಲಿ ವಿವಾಹವಾದ ದಂಪತಿ ಈಗ ವಿಶೇಷ ವಿವಾಹ ಕಾಯಿದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. "ನಮ್ಮ ಮೂರು ಹೆಣ್ಣು ಮಕ್ಕಳು ನಮ್ಮ ಆಸ್ತಿಯನ್ನು ಪಡೆಯುವಂತಗಲು ನಾವು ಈ ಕ್ರಮವನ್ನು ಪಾಲಿಸುತ್ತಿದ್ದೇವೆ ಎಂದು ಶುಕ್ಕೂರ್ TNIE ಗೆ ತಿಳಿಸಿದರು.

ದೇಶದಲ್ಲಿ ಚಾಲ್ತಿಯಲ್ಲಿರುವ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಹೆಣ್ಣುಮಕ್ಕಳು ತಂದೆಯ ಆಸ್ತಿಯ ಮೂರನೇ ಎರಡರಷ್ಟು ಭಾಗವನ್ನು ಮಾತ್ರ ಪಡೆಯುತ್ತಾರೆ, ಉಳಿದವು ಅವರ ಸಹೋದರರಿಗೆ ಹೋಗುತ್ತದೆ ಎಂದು 2022 ರ ಎನ್ನ ತಾನ್ ಕೇಸ್ ಕೊಡು ಚಿತ್ರದಲ್ಲಿ ನಟಿಸಿದ ಶುಕ್ಕೂರ್ ಹೇಳುತ್ತಾರೆ. 

''ತಹಶೀಲ್ದಾರ್ ನೀಡಿರುವ ಉತ್ತರಾಧಿಕಾರ ಪ್ರಮಾಣಪತ್ರದಲ್ಲಿ ನನ್ನ ಸಹೋದರರು ವಾರಸುದಾರರಾಗಿದ್ದಾರೆ. ನಮಗೆ ಪುರುಷ ಸಂತತಿ ಇಲ್ಲದಿರುವುದರಿಂದ ಅವರಿಗೆ ಹೋಗುತ್ತದೆ. ಇದು ಮಹಿಳೆಯರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ತಾರತಮ್ಯವಾಗಿದೆ, ಮುಸ್ಲಿ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆಯ ಹಕ್ಕನ್ನು ನಿರಾಕರಿಸಿರುವುದು ವಿಷಾದನೀಯ ಎನ್ನುತ್ತಾರೆ. 

“ಸಂವಿಧಾನದ ಸೆಕ್ಷನ್ 14 ರ ಪ್ರಕಾರ, ಧರ್ಮ, ಜಾತಿ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಮುಸ್ಲಿಮರ ಹೆಣ್ಣುಮಕ್ಕಳಿಗೆ ಈ ಹಕ್ಕನ್ನು ನಿರಾಕರಿಸಿರುವುದು ಅತ್ಯಂತ ವಿಷಾದನೀಯ,” ಎಂದು ಶುಕ್ಕೂರ್ ಹೇಳಿದರು. "ನಾನು ಎರಡು ಬಾರಿ ಅಪಘಾತಗಳನ್ನು ಎದುರಿಸಿದ್ದೇನೆ, ಅದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದೇನೆ. ನಾನು ಜಗತ್ತನ್ನು ತೊರೆದ ನಂತರ ಏನಾಗುತ್ತದೆ ಎಂದು ಇದು ನನ್ನನ್ನು ಯೋಚಿಸುವಂತೆ ಮಾಡಿತು. ನನ್ನ ಹೆಣ್ಣು ಮಕ್ಕಳು ನನ್ನ ಆಸ್ತಿಯ ಏಕೈಕ ವಾರಸುದಾರರಾಗಬೇಕೆಂದು ನಾನು ಬಯಸುತ್ತೇನೆ ಎನ್ನುತ್ತಾರೆ.

ಮುಸ್ಲಿಂ ಉತ್ತರಾಧಿಕಾರ ಕುರಿತ ನ್ಯಾಯಾಲಯದ ಆದೇಶದ ಆಧಾರವಾಗಿರುವ ಡಿ ಹೆಚ್ ಮುಲ್ಲಾ ಬರೆದಿರುವ ಮುಹಮ್ಮದನ್ ಕಾನೂನಿನ ತತ್ವಗಳ ಪ್ರಕಾರ, ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಮತ್ತು ಉಳಿದ ಭಾಗವನ್ನು ಅವರ ಸಹೋದರರು ಪಡೆಯುತ್ತಾರೆ ಎಂದು ಶುಕ್ಕೂರ್ ಹೇಳುತ್ತಾರೆ. ಇದನ್ನು ಹೋಗಲಾಡಿಸಲು ಮುಸ್ಲಿಮರಿಗೆ ಇರುವ ಏಕೈಕ ಪರಿಹಾರವೆಂದರೆ 1954 ರಲ್ಲಿ ಸಂಸತ್ತು ಅಂಗೀಕರಿಸಿದ ವಿಶೇಷ ವಿವಾಹ ಕಾಯ್ದೆಯನ್ನು ಆರಿಸಿಕೊಳ್ಳುವುದು.

1994ರಲ್ಲಿ ಚೆರುವತ್ತೂರಿನ ನಸೀಮಾ ಮಂಜಿಲ್‌ನಲ್ಲಿ ನಮ್ಮ ವಿವಾಹವನ್ನು ದಿವಂಗತ ಪಾಣಕ್ಕಾಡ್ ಸೈಯದ್ ಹೈದರ್ ಅಲಿ ಶಿಹಾಬ್ ತಂಗಳ್ ಅವರು ನೆರವೇರಿಸಿದರು, ಮಾರ್ಚ್ 8 ರಂದು ಹೊಸದುರ್ಗದ ಉಪನೋಂದಣಿ ಕಚೇರಿಯಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಾವು ಮತ್ತೆ ವಿವಾಹವಾಗುತ್ತಿದ್ದೇವೆ. ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಯಾವುದೇ ವ್ಯಕ್ತಿಯ ಆಸ್ತಿಗೆ ಉತ್ತರಾಧಿಕಾರವನ್ನು ಭಾರತೀಯ ಉತ್ತರಾಧಿಕಾರ ಕಾಯಿದೆಯಿಂದ ನಿಯಂತ್ರಿಸಲ್ಪಡುತ್ತದೆ ಎಂದು ಹೇಳುತ್ತದೆ ಎಂದು ವಿವರಿಸುತ್ತಾರೆ. 

ಶುಕ್ಕೂರ್ ಅವರು ಫೆಬ್ರವರಿ 3 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹಗಳಿಗೆ ಕಡ್ಡಾಯವಾಗಿರುವ 30 ದಿನಗಳ ನೋಟಿಸ್ ನೀಡಿರುವುದಾಗಿ ಹೇಳಿದರು. “ಅಲ್ಲಾ ಮತ್ತು ನಮ್ಮ ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಜೀವನದ ಪ್ರತಿಯೊಂದು ಅಂಶದಲ್ಲೂ ಸಮಾನತೆ ಹರಡಲಿ ಎಂದು ಶುಕ್ಕೂರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com