ದೆಹಲಿಯಲ್ಲಿ ಕೆಸಿಆರ್ ಪುತ್ರಿ ಕವಿತಾ ಉಪವಾಸ ಸತ್ಯಾಗ್ರಹ, 12 ಪಕ್ಷಗಳ ಬೆಂಬಲ

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಂತೆ ಒತ್ತಾಯಿಸಿ ಭಾರತ್ ರಾಷ್ಟ್ರ ಸಮಿತಿ ಹಿರಿಯ ನಾಯಕಿ ಕೆ.ಕವಿತಾ ಇಂದು ನವದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಕವಿತಾ
ಪ್ರತಿಭಟನೆಯಲ್ಲಿ ಕವಿತಾ

ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಂತೆ ಒತ್ತಾಯಿಸಿ ಭಾರತ್ ರಾಷ್ಟ್ರ ಸಮಿತಿ ಹಿರಿಯ ನಾಯಕಿ ಕೆ.ಕವಿತಾ ಇಂದು ಜಂತರ್ ಮಂಥರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮನ್ ಯೆಚೂರಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಕವಿತಾ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ  12 ಪಕ್ಷಗಳು ನಿನ್ನೆ ಖಚಿತಪಡಿಸಿದ್ದವು.

ಪ್ರತಿಭಟನೆ ವೇಳೆ ಮಾತನಾಡಿದ ಕವಿತಾ, 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು, ಆದರೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಮಾತನ್ನು ಉಳಿಸಿಕೊಂಡಿಲ್ಲ. "ಮಹಿಳಾ ಮೀಸಲಾತಿ ಮಸೂದೆಯು ಮಹತ್ವದ್ದಾಗಿದೆ ಮತ್ತು ನಾವು ಅದನ್ನು ಶೀಘ್ರದಲ್ಲೇ ತರಬೇಕಾಗಿದೆ. ಮಸೂದೆಯನ್ನು ಮಂಡಿಸುವವರೆಗೂ ಈ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ 1/3ರಷ್ಟು  ಸ್ಥಾನಗಳನ್ನು ಕಾಯ್ದಿರಿಸಲು ಸಂವಿಧಾನದ ತಿದ್ದುಪಡಿಗಾಗಿ ಈ ಮಸೂದೆ ಜಾರಿಗೆ ಒತ್ತಾಯಿಸಲಾಗುತ್ತಿದೆ.  ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆ ಒಳಪಡಿಸುವ ಸಾಧ್ಯತೆಯಿರುವಂತೆಯೇ ಉಪವಾಸ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com