ನಾಗಾಲ್ಯಾಂಡ್‌ನಲ್ಲಿ 'ವಿರೋಧ ಪಕ್ಷವಿಲ್ಲದ' ಸರ್ಕಾರ ಪ್ರಜಾಪ್ರಭುತ್ವದ ಅಣಕ: ರಾಜಕೀಯ ವಿಶ್ಲೇಷಕರು

ನಾಗಾಲ್ಯಾಂಡ್ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡುವುದರೊಂದಿಗೆ 'ವಿರೋಧ ಪಕ್ಷವಿಲ್ಲದ' ಸರ್ಕಾರವಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕ ಎಂದು ರಾಜ್ಯದ ರಾಜಕೀಯ...
ಪ್ರಧಾನಿ ಮೋದಿ ಹಾಗೂ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ
ಪ್ರಧಾನಿ ಮೋದಿ ಹಾಗೂ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ

ಕೋಹಿಮಾ: ನಾಗಾಲ್ಯಾಂಡ್ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡುವುದರೊಂದಿಗೆ 'ವಿರೋಧ ಪಕ್ಷವಿಲ್ಲದ' ಸರ್ಕಾರವಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕ ಎಂದು ರಾಜ್ಯದ ರಾಜಕೀಯ ವಿಶ್ಲೇಷಕರು ಮತ್ತು ಟೀಕಾಕಾರರು ಟೀಕಿಸಿದ್ದಾರೆ.

ಎನ್‌ಡಿಪಿಪಿ-ಬಿಜೆಪಿ 40:20 ಸೀಟು ಹಂಚಿಕೆ ಸೂತ್ರದ ಮೇಲೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು ಮತ್ತು ಸ್ಪಷ್ಟ ಬಹುಮತದೊಂದಿಗೆ ಸತತ ಎರಡನೇ ಅವಧಿಗೆ ಅಧಿಕಾರಕ್ಕೇರಿವೆ.

ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಇತರ ರಾಜಕೀಯ ಪಕ್ಷಗಳ ನಾಯಕರಿಗೆ ಯಾವುದೇ ಅಜೆಂಡಾ ಇಲ್ಲ ಮತ್ತು ತಮ್ಮ ಸ್ವಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ" ಎಂದು ರಾಜಕೀಯ ವಿಶ್ಲೇಷಕ ಜೋನಾಸ್ ಯಾಂಥನ್ ಅವರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರಿಲ್ಲದೆ ಸಾರ್ವಜನಿಕರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವವರು ಯಾರು? ಎಂದು ಯಾಂಥನ್ ಅವರು ಪ್ರಶ್ನಿಸಿದ್ದಾರೆ.

ನಾಗಾ ಶಾಂತಿ ಮಾತುಕತೆಗೆ ಅನುಕೂಲವಾಗುವುದಕ್ಕಾಗಿ ಸರ್ಕಾರವನ್ನು ಬೆಂಬಲಿಸುವುದಾಗಿ ಪಕ್ಷಗಳು ಹೇಳುತ್ತಿರುವುದು "ರಾಜಕೀಯ ಡ್ರಾಮಾ" ಎಂದು ಅವರು ಟೀಕಿಸಿದ್ದಾರೆ.

'ವಿರೋಧ ಪಕ್ಷ ಇಲ್ಲದ' ಸರ್ಕಾರದ ಪ್ರತಿಪಾದನೆಯು "ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಅಧಿಕಾರಕ್ಕೆ ಬರುವ ರಾಜಕೀಯ ಗಿಮಿಕ್" ಎಂದು ಹಿರಿಯ ಪತ್ರಕರ್ತ ಮತ್ತು ಬರಹಗಾರ ಎಚ್ ಚಿಶಿ ಅವರು ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com