ನಾಗಾಲ್ಯಾಂಡ್ ನಲ್ಲಿ 'ವಿರೋಧ ಪಕ್ಷ ರಹಿತ ಸರ್ಕಾರ' ರಚನೆ?; ಬಿಜೆಪಿಗೆ 'ಸರ್ವಪಕ್ಷಗಳಿಂದ' ಬೇಷರತ್ ಬೆಂಬಲ!

ಇತ್ತೀಚೆಗಷ್ಟೇ ಚುನಾವಣೆ ಮುಕ್ತಾಯವಾದ ನಾಗಲ್ಯಾಂಡ್ ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಜೋರಾಗಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಅಚ್ಚರಿ ಎಂದರೆ ಹಾಲಿ ಪರಿಸ್ಥಿತಿಯಲ್ಲಿ ನಾಗಾಲ್ಯಾಂಡ್ ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿರುವುದು.
ಬಿಜೆಪಿ ನೇತೃತ್ವದ ಎನ್ ಡಿಪಿಪಿ ಮೈತ್ರಿಕೂಟ
ಬಿಜೆಪಿ ನೇತೃತ್ವದ ಎನ್ ಡಿಪಿಪಿ ಮೈತ್ರಿಕೂಟ

ಕೊಹಿಮಾ: ಇತ್ತೀಚೆಗಷ್ಟೇ ಚುನಾವಣೆ ಮುಕ್ತಾಯವಾದ ನಾಗಲ್ಯಾಂಡ್ ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಜೋರಾಗಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಅಚ್ಚರಿ ಎಂದರೆ ಹಾಲಿ ಪರಿಸ್ಥಿತಿಯಲ್ಲಿ ನಾಗಾಲ್ಯಾಂಡ್ ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದ್ದು, 'ವಿರೋಧ ಪಕ್ಷ ರಹಿತ ಸರ್ಕಾರ' ರಚನೆಯತ್ತ ಎನ್ ಡಿಎ ಮೈತ್ರಿಕೂಡ ದಾಪುಗಾಲಿರಿಸಿದೆ.

ಹೌದು.. ಬಹುಮತದ ಹೊರತಾಗಿಯೂ ನಾಗಲ್ಯಾಂಡ್ ನಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಅಲ್ಲಿನ ಎಲ್ಲ ಪಕ್ಷಗಳೂ ಬೇಷರತ್ ಬೆಂಬಲ ಸೂಚಿಸಿದ್ದು, ಇದೀಗ ನಾಗಾಲ್ಯಾಂಡ್ ನಲ್ಲಿ ವಿರೋಧ ಪಕ್ಷ ರಹಿತ ಸರ್ಕಾರ ರಚನೆಯಾಗುವ ಎಲ್ಲ ಸಾಧ್ಯತೆಗಳಿವೆ.

ಇದೇ ಮಾರ್ಚ್ 2 ರಂದು ಪ್ರಕಟಗೊಂಡ ಫಲಿತಾಂಶಗಲ್ಲಿ 60 ಸದಸ್ಯಬಲದ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಪಾಲುದಾರರಾದ -- NDPP-BJP ಕ್ರಮವಾಗಿ 25 ಮತ್ತು 12 ಸ್ಥಾನಗಳನ್ನು ಗೆದ್ದು, 60 ಸದಸ್ಯರ ಸದನದಲ್ಲಿ ಒಟ್ಟು 37 ಸ್ಥಾನಗಳನ್ನು ಗಳಿಸಿ ಬಹುಮತದೊಂದಿಗೆ ಸರ್ಕಾರ ರಚನೆಗೆ ಮುಂದಾಗಿವೆ. ಉಳಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ರಾಜಕೀಯ ಪಕ್ಷಗಳು 7 ಸ್ಥಾನಗಳನ್ನು ಗೆದ್ದಿವೆ, ನ್ಯಾಷನಲ್ ಪೀಪಲ್ಸ್ ಪಾರ್ಟಿ - 5, ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್, ನಾಗಾ ಪೀಪಲ್ಸ್ ಫ್ರಂಟ್ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ- ಅಠವಳೆ - ತಲಾ 2, ಜನತಾ ದಳ-ಯುನೈಟೆಡ್ - 1 ಮತ್ತು ಸ್ವತಂತ್ರರು - 4 ಸ್ಥಾನಗಳನ್ನು  ಪಡೆದಿದ್ದಾರೆ.

ಸರ್ವ ಪಕ್ಷಗಳಿಂದ ಎನ್ ಡಿಎಗೆ ಬೇಷರತ್ ಬೆಂಬಲ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಗಾಲ್ಯಾಂಡ್ ಇಷ್ಟೊಂದು ರಾಜಕೀಯ ಪಕ್ಷಗಳ ಗೆಲುವಿಗೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲು. ಎಲ್‌ಜೆಪಿ (ರಾಮ್ ವಿಲಾಸ್) ಮತ್ತು ಆರ್‌ಪಿಐ (ಅಠವಳೆ) ರಾಜ್ಯ ರಾಜಕೀಯದಲ್ಲಿ ಹೊಸ ಪಕ್ಷಗಳಾಗಿವೆ. ಎನ್‌ಡಿಪಿಪಿ-ಬಿಜೆಪಿ ಇನ್ನೂ ಸರ್ಕಾರ ರಚನೆಗೆ ಹಕ್ಕು ಸಾಧಿಸದಿದ್ದರೂ, ಅವರು ತಮ್ಮ ಎರಡನೇ ಇನ್ನಿಂಗ್ಸ್ ಮುಂದುವರಿಸಲು ಇತರ ರಾಜಕೀಯ ಪಕ್ಷಗಳಿಂದ ಬೇಷರತ್ ಬೆಂಬಲವನ್ನು ಪಡೆದಿದ್ದಾರೆ. ಎಲ್‌ಜೆಪಿ (ರಾಮ್ ವಿಲಾಸ್), ಆರ್‌ಪಿಐ (ಅಠವಳೆ), ಜೆಡಿ-ಯು ಈಗಾಗಲೇ ಮೈತ್ರಿ ಪಾಲುದಾರರಿಗೆ ಬೆಂಬಲ ಪತ್ರಗಳನ್ನು ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

ಮೂರನೇ ಏಕೈಕ ಅತಿದೊಡ್ಡ ಪಕ್ಷವಾಗಿರುವ ಎನ್‌ಸಿಪಿ, ನೆಫಿಯು ರಿಯೊ ನೇತೃತ್ವದ ಎನ್‌ಡಿಪಿಪಿಗೆ ಶನಿವಾರ 'ಬೇಷರತ್' ಬೆಂಬಲವನ್ನು ವಿಸ್ತರಿಸುವ ಪತ್ರವನ್ನು ಸಲ್ಲಿಸಿದೆ ಎಂದು ಹೊಸದಾಗಿ ಚುನಾಯಿತರಾದ ಎನ್‌ಸಿಪಿ ಶಾಸಕ ವೈ ಮ್ಹೊನ್‌ಬೆಮೊ ಹಮ್ತ್ಸೊ ತಿಳಿಸಿದ್ದಾರೆ. ಅಂತೆಯೇ, ಹೊಸದಾಗಿ ಚುನಾಯಿತ ಶಾಸಕರಲ್ಲಿ ಒಬ್ಬರಾಗಿರುವ ಎನ್‌ಪಿಎಫ್ ಪ್ರಧಾನ ಕಾರ್ಯದರ್ಶಿ ಅಚುಂಬೆಮೊ ಕಿಕೋನ್, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೂ, ಇಬ್ಬರು ಸದಸ್ಯರನ್ನು ಹೊಂದಿರುವ ಪಕ್ಷವು "ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲುವ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸುವುದರಿಂದ, ನಾಗಾಲ್ಯಾಂಡ್‌ನಲ್ಲಿ ಮತ್ತೊಂದು ಸರ್ವಪಕ್ಷ ಸರ್ಕಾರ ರಚನೆಯಾಗಲಿದೆ. ಹಿಂದೆ, 2015 ಮತ್ತು 2021 ರಲ್ಲಿ ನಡೆಯುತ್ತಿರುವ ಸರ್ಕಾರದ ಅವಧಿಯಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿ ವಿರೋಧ-ಪಕ್ಷ ರಹಿತ ಸರ್ಕಾರವನ್ನು ರಚಿಸಲಾಗಿತ್ತು. ಆದರೆ ಇದು ಸದನದ ಪ್ರಮಾಣವಚನಕ್ಕೂ ಮೊದಲೇ ಪ್ರತಿಪಕ್ಷಗಳಿಲ್ಲದ ಮೊದಲ ವಿಧಾನಸಭೆಯಾದಂತಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com