'ಭಾರತೀಯ ಕುಟುಂಬ ವ್ಯವಸ್ಥೆಯೊಂದಿಗೆ ಹೋಲಿಕೆ ಸಲ್ಲ': ಸಲಿಂಗ ವಿವಾಹಕ್ಕೆ ಮಾನ್ಯತೆಗೆ ಕೇಂದ್ರ ಸರ್ಕಾರ ವಿರೋಧ

ಸಲಿಂಗ ವಿವಾಹವನ್ನು ಭಾರತೀಯ ಕುಟುಂಬ ವ್ಯವಸ್ಥೆಯೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಸಲಿಂಗಿ ವಿವಾಹ
ಸಲಿಂಗಿ ವಿವಾಹ
Updated on

ನವದೆಹಲಿ: ಸಲಿಂಗ ವಿವಾಹವನ್ನು ಭಾರತೀಯ ಕುಟುಂಬ ವ್ಯವಸ್ಥೆಯೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲಿಂಗಿ ದಂಪತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿರುವ ಕೇಂದ್ರ ಸರ್ಕಾರ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಸಲಿಂಗ ಸಂಬಂಧಗಳು ಮತ್ತು ಭಿನ್ನಲಿಂಗೀಯ ಸಂಬಂಧಗಳು ಸ್ಪಷ್ಟವಾಗಿ ವಿಭಿನ್ನ. ಅವುಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ಪ್ರತಿಪಾದಿಸಿದೆ. ಸದ್ಯ ಅಪರಾಧೀಕರಣಗೊಳ್ಳದ ಸಲಿಂಗಿಗಳ ಸಹ ಜೀವನವನ್ನು, ಹೆಂಡತಿ ಮತ್ತು ಮಕ್ಕಳನ್ನು ಒಳಗೊಂಡ ಭಾರತೀಯ ಕುಟುಂಬ ವ್ಯವಸ್ಥೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

'ಮದುವೆಯ ಗುರುತಿಸುವಿಕೆ ಅಗತ್ಯವಾಗಿ ಅದರೊಂದಿಗೆ ಅಳವಡಿಸಿಕೊಳ್ಳುವ ಹಕ್ಕನ್ನು ಮತ್ತು ಇತರ ಪೂರಕ ಹಕ್ಕುಗಳನ್ನು ತರುತ್ತದೆ. ಆದ್ದರಿಂದ, ಅಂತಹ ಸಮಸ್ಯೆಗಳನ್ನು ಸಮರ್ಥ ಶಾಸಕಾಂಗವು ನಿರ್ಧರಿಸಲು ಬಿಡುವುದು ಅವಶ್ಯಕವಾಗಿದೆ, ಅಲ್ಲಿ ಸಮಾಜ, ಮಕ್ಕಳು ಇತ್ಯಾದಿಗಳ ಮೇಲೆ ಸಾಮಾಜಿಕ, ಮಾನಸಿಕ ಮತ್ತು ಇತರ ಪರಿಣಾಮಗಳನ್ನು ಚರ್ಚಿಸಬಹುದು. ಅಂತಹ ಪವಿತ್ರ ಸಂಬಂಧಗಳನ್ನು ಗುರುತಿಸುವ ವ್ಯಾಪಕವಾದ ಶಾಖೆಗಳನ್ನು ಪ್ರತಿಯೊಂದು ಕೋನದಿಂದ ಚರ್ಚಿಸಲಾಗುವುದು ಮತ್ತು ಕಾನೂನುಬದ್ಧ ರಾಜ್ಯ ಹಿತಾಸಕ್ತಿಗಳನ್ನು ಶಾಸಕಾಂಗವು ಪರಿಗಣಿಸಬಹುದು ಎಂದು ಇದು ಖಚಿತಪಡಿಸುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ವಾದದಲ್ಲಿ ವ್ಯಕ್ತಪಡಿಸಿದೆ. 

ಇದಲ್ಲದೆ, ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವಿನ ವಿವಾಹವು ವೈಯಕ್ತಿಕ ಕಾನೂನುಗಳು ಅಥವಾ ಕ್ರೋಡೀಕರಿಸಿದ ಕಾನೂನುಗಳ ಅಡಿಯಲ್ಲಿ ನಡೆಯುತ್ತದೆ ಮತ್ತು ಮದುವೆಗೆ ಪ್ರವೇಶಿಸುವ ವ್ಯಕ್ತಿಗಳು ತಮ್ಮದೇ ಆದ ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿರುವ ಸಂಸ್ಥೆಯನ್ನು ರಚಿಸುತ್ತವೆ ಎಂದೂ ಸರ್ಕಾರ ಹೇಳಿದೆ.

ಇತ್ತೀಚಿನ ಕೆಲ ತಿಂಗಳಲ್ಲಿ ಕನಿಷ್ಠ ನಾಲ್ಕು ಸಲಿಂಗಿ ಜೋಡಿಗಳು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಈ ಮೂಲಕ ಕೇಂದ್ರ ಸರ್ಕಾರದೊಂದಿಗೆ ಕಾನೂನು ಸಂಘರ್ಷಕ್ಕೆ ಇಳಿದಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com