ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಈ ಬೇಸಿಗೆಯಲ್ಲಿ ನೀರಿನ ಕೊರತೆ: ಭಾರತದಲ್ಲಿ 143 ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ

ಈ ಬೇಸಿಗೆಯಲ್ಲಿ ದೇಶದಲ್ಲಿ ನೀರಿನ ಕೊರತೆ ಎದುರಾಗಬಹುದು. ಎಲ್ಲಾ ಪ್ರಮುಖ ಜಲಾಶಯಗಳಲ್ಲಿ ಈ ಹಿಂದಿನ ವರ್ಷ ಇದೇ ಸಮಯದಲ್ಲಿ ಇದ್ದಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಜಲಾಶಯಗಳು ಕೈಗಾರಿಕಾ ಬಳಕೆದಾರರನ್ನು ಒಳಗೊಂಡಿರುವ ದೊಡ್ಡ ನದಿಗಳು ಮತ್ತು ನಗರ ನೀರಿನ ಪೂರೈಕೆಯ ನಡುವೆ ವಿಶೇಷ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.
Published on

ನವದೆಹಲಿ: ಈ ಬೇಸಿಗೆಯಲ್ಲಿ ದೇಶದಲ್ಲಿ ನೀರಿನ ಕೊರತೆ ಎದುರಾಗಬಹುದು. ಎಲ್ಲಾ ಪ್ರಮುಖ ಜಲಾಶಯಗಳಲ್ಲಿ ಈ ಹಿಂದಿನ ವರ್ಷ ಇದೇ ಸಮಯದಲ್ಲಿ ಇದ್ದಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಜಲಾಶಯಗಳು ಕೈಗಾರಿಕಾ ಬಳಕೆದಾರರನ್ನು ಒಳಗೊಂಡಿರುವ ದೊಡ್ಡ ನದಿಗಳು ಮತ್ತು ನಗರ ನೀರಿನ ಪೂರೈಕೆಯ ನಡುವೆ ವಿಶೇಷ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.

ಈ ವರ್ಷದಲ್ಲಿ ಎದುರಾಗುವ ಕೊರತೆಯ ಚಳಿಗಾಲದ ಮಳೆ ಮತ್ತು ಫೆಬ್ರುವರಿಯಲ್ಲಿ ದಾಖಲೆಯನ್ನು ಮುರಿಯುವ ತಾಪಮಾನವು ಈಗಾಗಲೇ ಮಣ್ಣಿನ ತೇವಾಂಶದ ನಷ್ಟಕ್ಕೆ ಕಾರಣವಾಗಿದೆ ಮತ್ತು ರೈತರ ಹೊರೆಯನ್ನು ಹೆಚ್ಚಿಸಿದೆ. ಇದು ಈಗ ನೇರವಾಗಿ ಕುಡಿಯುವ ನೀರಿನ ಅಗತ್ಯಕ್ಕೆ ತೊಂದರೆ ಉಂಟುಮಾಡುತ್ತಿದೆ.

ಕೇಂದ್ರ ಜಲ ಆಯೋಗದ ಅಂಕಿಅಂಶಗಳ ಪ್ರಕಾರ, ಸದ್ಯದ ನೀರಿನ ಮಟ್ಟವು 2022ರಲ್ಲಿನ ಇದೇ ಅವಧಿಯ ಶೇ 92ರಷ್ಟು ಆಗಿದೆ. ಕಳೆದ ವರ್ಷ 143 ಪ್ರಮುಖ ಜಲಾಶಯಗಳಲ್ಲಿ 94.027 ಬಿಲಿಯನ್ ಕ್ಯೂಬಿಕ್ ಮೀಟರ್ (BCM) ನೀರು ಇತ್ತು. ಆದರೆ, ಈ ವರ್ಷ ಮಾರ್ಚ್ 9ರ ಹೊತ್ತಿಗೆ 86.45 ಕ್ಯೂಬಿಕ್ ಮೀಟರ್ ಆಗಿದೆ.

ಉತ್ತರದ ವಲಯದಲ್ಲಿ ಹೊರತುಪಡಿಸಿ, ದೇಶದ ಜಲಾಶಯಗಳ ಉಳಿದ ನಾಲ್ಕು ಪ್ರದೇಶಗಳಲ್ಲಿ ಹಿಂದಿನ ವರ್ಷಕ್ಕಿಂತ ಕಡಿಮೆ ನೀರು ಇದೆ. ಪೂರ್ವ ವಲಯದಲ್ಲಿ, ಜಲಾಶಯಗಳಲ್ಲಿನ ನೀರು ಕಳೆದ 10 ವರ್ಷಗಳ ಸರಾಸರಿಗಿಂತ ಕಡಿಮೆ ಇದೆ.

ಈಮಧ್ಯೆ, ಮುಂಗಾರು ಮಳೆ ಕೊರತೆಯ ಬಗ್ಗೆ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾನ್ಸೂನ್ ಸಮಯದಲ್ಲಿ ಕಡಿಮೆ ಮಳೆ ತರಬಹುದಾದ ಎಲ್-ನಿನೊ ಪರಿಸ್ಥಿತಿಗಳನ್ನು ಅಂತರರಾಷ್ಟ್ರೀಯ ಹವಾಮಾನ ಶಾಸ್ತ್ರಜ್ಞರು ಸೂಚಿಸಿದ್ದಾರೆ.

ಜಲಾಶಯಗಳಲ್ಲಿ ನೀರು ಕಡಿಮೆಯಾಗಲು ಪ್ರಮುಖ ಕಾರಣವೆಂದರೆ, ಕಳೆದ ವರ್ಷದ ಕಳಪೆ ಮುಂಗಾರು. ಮುಂಗಾರು ಹೆಚ್ಚು ಅನಿಯಮಿತವಾಗಿದೆ ಮತ್ತು ಕೊರತೆಯಾಗಿದೆ, ವಿಶೇಷವಾಗಿ ಗಂಗಾ ಜಲಾನಯನ ಪ್ರದೇಶದಲ್ಲಿ ಎಂದು ಅಣೆಕಟ್ಟುಗಳು, ನದಿಗಳು ಮತ್ತು ಜನರ ಮೇಲಿನ ಸೌತ್-ಏಷ್ಯಾ ನೆಟ್‌ವರ್ಕ್‌ನ ಹಿಮಾಂಶು ಠಕ್ಕರ್ ಹೇಳುತ್ತಾರೆ. 

2020 ಮತ್ತು 2021 ರಲ್ಲಿ ಮಾನ್ಸೂನ್ ಸಾಮಾನ್ಯವಾಗಿತ್ತು, ಇದು ಜಲಾಶಯಗಳಲ್ಲಿ ನೀರಿನ ಲಭ್ಯತೆಗೆ ಕಾರಣವಾಯಿತು. ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಸಜ್ಜಾಗಬೇಕು ಎನ್ನುತ್ತಾರೆ ತಜ್ಞರು. 

'ಇತ್ತೀಚೆಗೆ ಗುಜರಾತ್ ಸರ್ಕಾರ ತನ್ನ ಬೇಸಿಗೆ ಬೆಳೆಗಳಿಗೆ ರೈತರಿಗೆ ನೀರು ನೀಡುವುದಾಗಿ ಹೇಳಿತ್ತು. ಆದಾಗ್ಯೂ, ನಿರೀಕ್ಷಿತ ಕಳಪೆ ಮಾನ್ಸೂನ್ ಅವಧಿಯನ್ನು ನಿಭಾಯಿಸಲು ಸರ್ದಾರ್ ಸರೋವರ್ ಅಣೆಕಟ್ಟಿನ ನೀರನ್ನು ಸಂರಕ್ಷಿಸಬೇಕಾಗಿದೆ' ಎಂದು ಠಕ್ಕರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com