ರಾಹುಲ್ ಗಾಂಧಿ ಜವಾಬ್ದಾರಿಯಿಂದ ಮಾತನಾಡಬೇಕು: ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ

ರಾಹುಲ್ ಗಾಂಧಿ ಹೆಚ್ಚಿನ ಜವಾಬ್ದಾರಿಯಿಂದ ಮಾತನಾಡಬೇಕು, ಸಮಾಜದಲ್ಲಿ ಸಂಘದ ಅಸ್ವಿತ್ವದ ವಾಸ್ತವ ಸ್ಥಿತಿಯನ್ನು ಅವರು ನೋಡಬೇಕು ಎಂದು ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಂಗಳವಾರ ಹೇಳಿದ್ದಾರೆ.
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ

ಹರಿಯಾಣ: ರಾಹುಲ್ ಗಾಂಧಿ ಹೆಚ್ಚಿನ ಜವಾಬ್ದಾರಿಯಿಂದ ಮಾತನಾಡಬೇಕು, ಸಮಾಜದಲ್ಲಿ ಸಂಘದ ಅಸ್ವಿತ್ವದ ವಾಸ್ತವ ಸ್ಥಿತಿಯನ್ನು ಅವರು ನೋಡಬೇಕು ಎಂದು ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಂಗಳವಾರ ಹೇಳಿದ್ದಾರೆ.

ರಾಹುಲ್ ಗಾಂಧಿ ಇತ್ತೀಚಿನ ತಮ್ಮ ಭಾಷಣದಲ್ಲಿ ಪದೇ ಪದೇ ಆರ್ ಎಸ್ ಎಸ್ ಗುರಿಯಾಗಿಸಿಕೊಂಡು ಮಾತನಾಡಿದ ನಂತರ ಹೊಸಬಾಳೆ ಈ ರೀತಿಯ ಹೇಳಿಕೆ ನೀಡಿದ್ದಾರೆ. ಸಲಿಂಗ ವಿವಾಹದ ಬಗ್ಗೆ ಕೇಂದ್ರದ ನಿಲುವನ್ನು ಆರ್‌ಎಸ್‌ಎಸ್ ಒಪ್ಪುತ್ತದೆ. ಮದುವೆ ಎಂಬುದು ಬೇರೆ ಬೇರೆ  ಲಿಂಗದ ಇಬ್ಬರ ನಡುವೆ ಮಾತ್ರ ನಡೆಯಬಹುದು ಎಂದು ಅವರು ಹೇಳಿದ್ದಾರೆ. 

ಆರ್ ಎಸ್ ಎಸ್ ವಿರುದ್ಧ ರಾಹುಲ್  ಗಾಂಧಿಯವರ ಇತ್ತೀಚಿನ ಟೀಕೆ ಕುರಿತು ಮಾತನಾಡಿದ  ಹೊಸಬಾಳೆ,  ತಮ್ಮ ರಾಜಕೀಯ ಅಜೆಂಡಾಗಾಗಿ ಈ ರೀತಿ ಮಾಡುತ್ತಿರಬೇಕು. ಆದರೆ ಆರ್ ಎಸ್ ಎಸ್ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವುದಿಲ್ಲ ಮತ್ತು ಸಂಘದೊಂದಿಗೆ ಅವರಿಗೆ ಯಾವುದೇ ಸ್ಪರ್ಧೆ ಇಲ್ಲ ಎಂದು ಹೇಳಿದರು.

ರಾಜಕೀಯ ಪಕ್ಷದ ನಾಯಕರಾಗಿ, ಅವರು ಹೆಚ್ಚು ಜವಾಬ್ದಾರಿಯುತವಾಗಿ ಮಾತನಾಡಬೇಕು ಮತ್ತು ಸಂಘದ ವಿಸ್ತರಣೆ ಮತ್ತು ಸಮಾಜದಲ್ಲಿ ಸ್ವೀಕಾರದ ವಾಸ್ತವವನ್ನು ನೋಡಬೇಕು ಎಂದು ಹರಿಯಾಣದ ಆರ್‌ಎಸ್‌ಎಸ್‌ನ 'ಅಖಿಲ ಭಾರತೀಯ ಪ್ರತಿನಿಧಿ ಸಭಾ' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುಕೆಯಲ್ಲಿ ಗಾಂಧಿ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ನಾಯಕ, ಭಾರತವನ್ನು ಜೈಲಾಗಿ ಪರಿವರ್ತಿಸಿದವರಿಗೆ ದೇಶದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಪ್ರತಿಕ್ರಿಯಿಸುವ ಹಕ್ಕಿಲ್ಲ ಎಂದು ಹೇಳಿದರು. ಮುಸ್ಲಿಂ ಬುದ್ಧಿಜೀವಿಗಳು ಮತ್ತು ಅವರ ಆಧ್ಯಾತ್ಮಿಕ ನಾಯಕರ ಆಹ್ವಾನದ ಮೇರೆಗೆ ಅವರನ್ನು  ಆರೆಸ್ಸೆಸ್ ನಾಯಕರು ಭೇಟಿ ಮಾಡುತ್ತಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಹೊಸಬಾಳೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com