ನಮ್ಮ ಪ್ರಜಾಪ್ರಭುತ್ವ ರಕ್ಷಣೆಗೆ ವಿದೇಶಿ ಶಕ್ತಿಗಳನ್ನು ರಾಹುಲ್ ಗಾಂಧಿ ಎಂದಿಗೂ ಒತ್ತಾಯಿಸಿಲ್ಲ- ಶಶಿ ತರೂರ್

ಭಾರತದಲ್ಲಿನ ಪ್ರಜಾಪ್ರಭುತ್ವ ಕುರಿತು ಲಂಡನ್ ನಲ್ಲಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಿರಂತರವಾಗಿ ಒತ್ತಾಯಿಸುತ್ತಿರುವಂತೆಯೇ, ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವ ರಕ್ಷಿಸುವಂತೆ ವಿದೇಶಿ ಶಕ್ತಿಯನ್ನು ರಾಹುಲ್ ಗಾಂಧಿ ಒತ್ತಾಯಿಸಿಲ್ಲ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಭಾರತದಲ್ಲಿನ ಪ್ರಜಾಪ್ರಭುತ್ವ ಕುರಿತು ಲಂಡನ್ ನಲ್ಲಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಿರಂತರವಾಗಿ ಒತ್ತಾಯಿಸುತ್ತಿರುವಂತೆಯೇ, ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವ ರಕ್ಷಿಸುವಂತೆ ವಿದೇಶಿ ಶಕ್ತಿಗಳನ್ನು ರಾಹುಲ್ ಗಾಂಧಿ ಒತ್ತಾಯಿಸಿಲ್ಲ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.

ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಶುಕ್ರವಾರ ಮಾತನಾಡಿದ ಶಶಿ ತರೂರ್, ನಮ್ಮ ಪ್ರಜಾಪ್ರಭುತ್ವ ರಕ್ಷಿಸಲು ದೇಶಕ್ಕೆ ಬರುವಂತೆ ವಿದೇಶಿ ಶಕ್ತಿಗಳನ್ನು ರಾಹುಲ್ ಗಾಂಧಿ ಒತ್ತಾಯಿಸಿಲ್ಲ, ಏನನ್ನೂ ಹೇಳದಿದ್ದರೂ ಕ್ಷಮೆಯಾಚನೆಗೆ ಒತ್ತಾಯಿಸುತ್ತಿರುವುದು ನಾನ್ ಸೆನ್ಸ್ ಎಂದರು.

 ಇದನ್ನೂ ಓದಿ: 5ನೇ ದಿನವೂ ವ್ಯರ್ಥವಾದ ಸಂಸತ್ತು ಕಲಾಪ: ಸೋಮವಾರಕ್ಕೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ.  ಪ್ರತಿಯೊಬ್ಬರು ಇದನ್ನು ಅರಿಯಬೇಕಾಗಿದೆ.  ಅದರಲ್ಲಿ ತಪ್ಪೇನೂ ಕೇಳಿಲ್ಲ  ಎಂದು ಶಶಿ ತರೂರ್ ಹೇಳಿದರು. 

ಸಂಸತ್ತಿನ ಬಜೆಟ್ ಅಧಿವೇಶನ ಕುರಿತು ಮಾತನಾಡಿದ ಅವರು, ಸುಗುಮವಾಗಿ ಸಂಸತ್ ಕಾರ್ಯಕಲಾಪ ನಡೆಸುವುದು ಸರ್ಕಾರದ ಜವಾಬ್ದಾರಿ. ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಹಣಕಾಸು ವಿಧೇಯಕ ಅಂಗೀಕಾರವಾಗಬೇಕಿದೆ. ಅಂತಹ ಪ್ರಮುಖ ವಿಚಾರಗಳಿರುವಾಗ ಸಂಸತ್ ಕಾರ್ಯ ಕಲಾಪಕ್ಕೆ ಅವಕಾಶ ನೀಡದಿರುವುದು ನನ್ ಸೆನ್ಸ್ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com