ಒಡಿಶಾದಲ್ಲಿ ಚಾಲಕರ ಮುಷ್ಕರ: ವಿಚಲಿತನಾಗದ ವರ; ರಾತ್ರಿಯಿಡೀ ನಡೆದು ಕ್ರಮಿಸಿದ 28 ಕಿ.ಮೀ ದೂರ!

ಅಲಂಕೃತ ವಾಹನಗಳು ಮತ್ತು ಡಿಜೆ ಇಲ್ಲದ ಮದುವೆ ಮೆರವಣಿಗೆ ಇಂದಿನ ದಿನಗಳಲ್ಲಿ ಯೋಚಿಸಲು ಸಾಧ್ಯವಿಲ್ಲ.  ಆದರೆ ರಾಯಗಡ ಜಿಲ್ಲೆಯಲ್ಲಿ ವರನೊಬ್ಬ ಮದುವೆಗೆಗಾಗಿ 28 ​​ಕಿಮೀ ನಡೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಮದುವೆಗೆ ನಡೆದು ಬಂದ ವರ
ಮದುವೆಗೆ ನಡೆದು ಬಂದ ವರ
Updated on

ಒಡಿಶಾ: ಅಲಂಕೃತ ವಾಹನಗಳು ಮತ್ತು ಡಿಜೆ ಇಲ್ಲದ ಮದುವೆ ಮೆರವಣಿಗೆ ಇಂದಿನ ದಿನಗಳಲ್ಲಿ ಯೋಚಿಸಲು ಸಾಧ್ಯವಿಲ್ಲ.  ಆದರೆ ರಾಯಗಡ ಜಿಲ್ಲೆಯಲ್ಲಿ ವರನೊಬ್ಬ ಮದುವೆಗೆಗಾಗಿ 28 ​​ಕಿಮೀ ನಡೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಒಡಿಶಾದಾದ್ಯಂತ ಚಾಲಕರ ಮುಷ್ಕರದ ಹಿನ್ನೆಲೆಯಲ್ಲಿ, ವಾಹನಗಳು ಲಭ್ಯವಾಗದ ಕಾರಣ ಗುರುವಾರ ರಾತ್ರಿ ಪಾರ್ತಿಗುಡ ಗ್ರಾಮದಿಂದ ಮದುವೆ ತಂಡವು ನಡೆದುಕೊಂಡು ಹೋಗಬೇಕಾಯಿತು. ಕೊನೆಗೆ ಅವರು ಮುಂಜಾನೆ 3 ಗಂಟೆಗೆ ವಧುವಿನ ಸ್ಥಳಕ್ಕೆ ಆಗಮಿಸಿದ್ದಾರೆ.

22 ವರ್ಷದ ವರ ನರೇಶ್ ಪ್ರಾಸ್ಕಾ ಮದುವೆಯ ಮೆರವಣಿಗೆಗಾಗಿ ನಾಲ್ಕು SUV ಗಳನ್ನು ವ್ಯವಸ್ಥೆಗೊಳಿಸಿದ್ದರು. ಆದರೆ ಚಾಲಕರು ಮುಷ್ಕರಕ್ಕೆ  ತೆರಳಿದ ಕಾರಣ ಪ್ಲಾನ್ ಉಲ್ಟಾ ಆಯಿತು.  ದ್ವಿಚಕ್ರ ವಾಹನಗಳಲ್ಲಿ ಮದುವೆಗೆ ಬೇಕಾದ ಸಾಮಗ್ರಿಗಳನ್ನು ಕಳುಹಿಸಿದ್ದರು.  ಎಂಟು ಮಹಿಳೆಯರು ಸೇರಿದಂತೆ ಕುಟುಂಬದ ಸುಮಾರು 30 ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ನಡೆದುಕೊಂಡು ಹೋಗಲು ನಿರ್ಧರಿಸಿದರು. ಇದು ಸುದೀರ್ಘ ನಡಿಗೆ ಸ್ಮರಣೀಯ ಅನುಭವ ಎಂದು ನರೇಶ್ ಹೇಳಿದರು. ಪಾರ್ತಿಗುಡ ಗ್ರಾಮವು ರಾಯಗಡದ ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಜಿಪಿ ವ್ಯಾಪ್ತಿಗೆ ಬರುತ್ತದೆ.

ವರನು ಮೆರವಣಿಗೆಯೊಂದಿಗೆ ಆಗಮಿಸಿದಾಗ ವಧುವಿನ ಕುಟುಂಬ ಸದಸ್ಯರು ಸಂತೋಷದಿಂದ  ಸ್ವಾಗತಕ್ಕೆ ಸಕಲ ವ್ಯವಸ್ಥೆ ಮಾಡಿದರು. ಶುಕ್ರವಾರ ಬೆಳಗ್ಗೆ  ವರನ ತಂಡ ತಲುಪಿದ್ದರಿಂದ, ಮದುವೆಯ ವಿಧಿಗಳು ತಡವಾಗಿ ಪ್ರಾರಂಭವಾಯಿತು,  ಮಧ್ಯಾಹ್ನದ ವೇಳೆಗೆ ಶಾಸ್ತ್ರೋಕ್ತವಾಗಿ ನೆರವೇರಿತು.

ನರೇಶ್ ಅವರ ಮದುವೆ ದಿಬಲಪಾಡು ಗ್ರಾಮದ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ವಾಹನಗಳು ಈಗ ಲಭ್ಯವಿರುವುದರಿಂದ ವರನ ಮನೆಗೆ ಬೇಗ ತಲುಪುವುದಾಗಿ  ವರನ ಆಪ್ತ ಸ್ನೇಹಿತ ಸುಂದರ್ ಪ್ರಾಸ್ಕಾ ಹೇಳಿದ್ದಾರೆ.

‘ನಾವು ಆದಿವಾಸಿಗಳಾಗಿದ್ದು, ದೂರದ ನಡಿಗೆ ನಮಗೆ ಅಭ್ಯಾಸವಿದೆ, ರಾತ್ರಿ ವೇಳೆಯೂ ರಸ್ತೆಗಳ ಪರಿಚಯವಿದ್ದು, ಮದುವೆಗೆ ನಡೆದುಕೊಂಡು ಹೋಗುವುದು  ಹೊಸತು ಎನಿಸಲಿಲ್ಲ,. ಆದರೆ, ಕಳೆದ ಕೆಲವು ವರ್ಷಗಳಿಂದ ವಾಹನಗಳನ್ನೇ ಬಳಸಲಾಗುತ್ತಿದೆ ಎಂದು ವಧುವಿನ ಚಿಕ್ಕಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com