ಆಹಾರ ಭದ್ರತೆಯ ಸವಾಲುಗಳನ್ನು ನಿಭಾಯಿಸಲು ಸಿರಿಧಾನ್ಯ ಸಹಾಯ ಮಾಡುತ್ತದೆ: ಪ್ರಧಾನಿ ನರೇಂದ್ರ ಮೋದಿ

ಆಹಾರ ಭದ್ರತೆ ಮತ್ತು ಆಹಾರ ಪದ್ಧತಿಯ ಸವಾಲುಗಳನ್ನು ನಿಭಾಯಿಸಲು ಸಿರಿಧಾನ್ಯ ಸಹಾಯ ಮಾಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಆಹಾರ ಬುಟ್ಟಿಯಲ್ಲಿ ಪೌಷ್ಟಿಕ-ಧಾನ್ಯಗಳ ಪಾಲನ್ನು ಹೆಚ್ಚಿಸಲು ಕೃಷಿ ವಿಜ್ಞಾನಿಗಳಿಗೆ ಶನಿವಾರ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಆಹಾರ ಭದ್ರತೆ ಮತ್ತು ಆಹಾರ ಪದ್ಧತಿಯ ಸವಾಲುಗಳನ್ನು ನಿಭಾಯಿಸಲು ಸಿರಿಧಾನ್ಯ ಸಹಾಯ ಮಾಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಆಹಾರ ಬುಟ್ಟಿಯಲ್ಲಿ ಪೌಷ್ಟಿಕ-ಧಾನ್ಯಗಳ ಪಾಲನ್ನು ಹೆಚ್ಚಿಸಲು ಕೃಷಿ ವಿಜ್ಞಾನಿಗಳಿಗೆ ಶನಿವಾರ ಕರೆ ನೀಡಿದರು.

ಗ್ಲೋಬಲ್ ಮಿಲೆಟ್ಸ್ (ಶ್ರೀ ಅನ್ನ) ಸಮ್ಮೇಳನವನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ಭಾರತದ ಪ್ರಸ್ತಾವನೆ ಮತ್ತು ಪ್ರಯತ್ನಗಳ ನಂತರ, ವಿಶ್ವಸಂಸ್ಥೆಯು 2023 ಅನ್ನು 'ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ' ಎಂದು ಘೋಷಿಸಿರುವುದು ದೇಶಕ್ಕೆ ಸಂದಿರುವ ಗೌರವದ ವಿಷಯವಾಗಿದೆ" ಎಂದು ಹೇಳಿದರು.

'ಸಿರಿಧಾನ್ಯ ಅಥವಾ ಶ್ರೀ ಅನ್ನವನ್ನು ಜಾಗತಿಕ ಆಂದೋಲನವಾಗಿ ಉತ್ತೇಜಿಸಲು ಭಾರತ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳಿಲ್ಲದೆ ಸಿರಿಧಾನ್ಯವನ್ನು ಸುಲಭವಾಗಿ ಬೆಳೆಯಬಹುದು. ಭಾರತದ ಸಿರಿಧಾನ್ಯ ಮಿಷನ್ ದೇಶದ 2.5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ' ಎಂದು ಹೇಳಿದರು.

ಇಂದು ರಾಷ್ಟ್ರೀಯ ಆಹಾರ ಬುಟ್ಟಿಯಲ್ಲಿ ಸಿರಿಧಾನ್ಯಗಳು ಕೇವಲ 5-6 ಪ್ರತಿಶತವನ್ನು ಹೊಂದಿವೆ. ಭಾರತದ ವಿಜ್ಞಾನಿಗಳು ಮತ್ತು ಕೃಷಿ ತಜ್ಞರು ಈ ಪಾಲನ್ನು ಹೆಚ್ಚಿಸಲು ತ್ವರಿತವಾಗಿ ಕೆಲಸ ಮಾಡಲು ನಾನು ಒತ್ತಾಯಿಸುತ್ತೇನೆ. ಅದಕ್ಕಾಗಿ ನಾವು ಸಾಧಿಸಬಹುದಾದ ಗುರಿಗಳನ್ನು ಹೊಂದಿಸಬೇಕಾಗಿದೆ ಎಂದು ಮೋದಿ ಹೇಳಿದರು.

ಸರ್ಕಾರವು ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಪ್ರಾರಂಭಿಸಿದೆ. ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದರು.

ಸಿರಿಧಾನ್ಯ ಅಥವಾ ಪೌಷ್ಠಿಕ-ಧಾನ್ಯಗಳ ಪ್ರಾಮುಖ್ಯತೆಯನ್ನು ಗುರುತಿಸಿ, ಮತ್ತು ಜನರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವುದರೊಂದಿಗೆ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಸೃಷ್ಟಿಸುವ ಮೂಲಕ, ಭಾರತವು 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ನಿರ್ಣಯವನ್ನು ಅಂಗೀಕರಿಸಿತು.

ಭಾರತದ ಪ್ರಸ್ತಾಪವನ್ನು 72 ದೇಶಗಳು ಬೆಂಬಲಿಸಿದವು ಮತ್ತು ಯುಎನ್‌ಜಿಎ ಮಾರ್ಚ್ 2021 ರಲ್ಲಿ 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿತು.

ಭಾರತವು 170 ಲಕ್ಷ ಟನ್‌ಗಳಿಗಿಂತ ಹೆಚ್ಚು ಸಿರಿಧಾನ್ಯವನ್ನು ಉತ್ಪಾದಿಸುತ್ತದೆ. ಇದು ಏಷ್ಯಾದ ಶೇ 80 ಮತ್ತು ಜಾಗತಿಕ ಉತ್ಪಾದನೆಯ ಶೇ 20ರಷ್ಟಿದೆ. ಸಿರಿಧಾನ್ಯದ ಜಾಗತಿಕ ಸರಾಸರಿ ಇಳುವರಿ 1,229 ಕೆಜಿ/ಹೆಕ್ಟೇರ್ ಆಗಿದ್ದರೆ, ಭಾರತದಲ್ಲಿ ಇಳುವರಿ 1,239 ಕೆಜಿ/ಹೆಕ್ಟೇರ್ ಆಗಿದೆ.

ಪ್ರಧಾನಿಯವರು ಕಸ್ಟಮೈಸ್ ಮಾಡಿದ ಪೋಸ್ಟಲ್ ಸ್ಟ್ಯಾಂಪ್ ಮತ್ತು 75 ರೂಪಾಯಿ ಕರೆನ್ಸಿ ನಾಣ್ಯವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂಇ)-2023 ರಂದು ಅನಾವರಣಗೊಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com