ನಾವು ದೇಶದ್ರೋಹಿಗಳಲ್ಲ, ಬಾಳಾಸಾಹೇಬ್ ಠಾಕ್ರೆಯವರ ನಿಜವಾದ ಸೈನಿಕರು: ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ವಾಗ್ದಾಳಿ

ನಾವು ದೇಶದ್ರೋಹಿಗಳಲ್ಲ ಮತ್ತು ರಾಮಮಂದಿರ ನಿರ್ಮಾಣ ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಕನಸನ್ನು ನನಸಾಗಿಸಿದ ಕಾರಣ ಬಿಜೆಪಿಯೊಂದಿಗೆ ಹೋಗುವ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಉದ್ಧವ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಮುಂಬೈ: ನಾವು ದೇಶದ್ರೋಹಿಗಳಲ್ಲ ಮತ್ತು ರಾಮಮಂದಿರ ನಿರ್ಮಾಣ ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಕನಸನ್ನು ನನಸಾಗಿಸಿದ ಕಾರಣ ಬಿಜೆಪಿಯೊಂದಿಗೆ ಹೋಗುವ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಉದ್ಧವ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಖೇಡ್‌ನಲ್ಲಿ ಉದ್ಧವ್ ಠಾಕ್ರೆ ಅವರ ಸಾರ್ವಜನಿಕ ರ‍್ಯಾಲಿ ನಂತರ, ಏಕನಾಥ್ ಶಿಂಧೆ ಭಾನುವಾರ ಅದೇ ಸ್ಥಳದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿ, ಉದ್ಧವ್ ಠಾಕ್ರೆ ಅವರು ದೇಶವನ್ನು ಲೂಟಿ ಮಾಡಿದ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿಕೊಂಡಿದ್ದಾರೆ ಎಂದು ಟೀಕಿಸಿದರು. 

ಈ ರ‍್ಯಾಲಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಮತ್ತು ಅವರ ಗುಂಪನ್ನು ಹಣ ಮತ್ತು ಕೇಂದ್ರ ಏಜೆನ್ಸಿಗಳ ಒತ್ತಡಕ್ಕಾಗಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ ದೇಶದ್ರೋಹಿ' ಎಂದು ಟೀಕಿಸಿದ್ದರು.

'ಅಧಿಕಾರಕ್ಕಾಗಿ ಮುಂಬೈನಲ್ಲಿ ಬಾಂಬ್ ಸ್ಫೋಟ ನಡೆಸಿದವರ ಮಡಿಲಲ್ಲಿ ಉದ್ಧವ್ ಠಾಕ್ರೆ ಕೂಡ ಕುಳಿತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದರು ಮತ್ತು ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟರು ಎಂದು ಶಿಂಧೆ ಹೇಳಿದರು.

'ಇವು ಬಾಳಾಸಾಹೇಬ್ ಠಾಕ್ರೆಯವರ ಕನಸುಗಳಾಗಿದ್ದವು ಮತ್ತು ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದರು. ಹೀಗಿರುವಾಗ ಬಿಜೆಪಿ ಜತೆ ಹೋಗುವ ನಮ್ಮ ನಿಲುವು ಹೇಗೆ ತಪ್ಪು? ನಾವು ದೇಶದ್ರೋಹಿಗಳಲ್ಲ ಮತ್ತು ಅಧಿಕಾರದ ಹಸಿವು ಮತ್ತು ಸ್ವಾರ್ಥಿಗಳಲ್ಲ. ನನ್ನ ರಕ್ತದಲ್ಲಿ ಯಾವುದೇ ಅಪ್ರಾಮಾಣಿಕತೆ ಇಲ್ಲ' ಎಂದು ಅವರು ಹೇಳಿದರು. 

'ಈ ಹಿಂದೆ ಉದ್ಧವ್ ಠಾಕ್ರೆ ಅವರು, ನಾನು ಮುಖ್ಯಮಂತ್ರಿಯಾಗುವುದಿಲ್ಲ. ಆದರೆ, ಶರದ್ ಪವಾರ್ ಒತ್ತಾಯಿಸಿದ್ದರಿಂದ ತಾವು ಮಹಾರಾಷ್ಟ್ರದ ಮುಖ್ಯಮಂತ್ರಿಯಾದೆ ಎಂದು ಹೇಳಿದ್ದರು. ಆದರೆ, ಇದನ್ನು ಮಾಡುವಾಗ ಉದ್ಧವ್ ಠಾಕ್ರೆ ಅವರು ತಮ್ಮ ತಂದೆಯ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡರು' ಎಂದು ಶಿಂಧೆ ಟೀಕಿಸಿದರು.

ಕೊಂಕಣದ ಜನರು ಬಾಳಾಸಾಹೇಬ್ ಠಾಕ್ರೆ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರ ಚಿಂತನೆ ಮತ್ತು ಸಿದ್ಧಾಂತವನ್ನು ತೀವ್ರವಾಗಿ ಬೆಂಬಲಿಸಿದರು. ಅದೇ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಶಿಂಧೆ ಹೇಳಿದರು.

'ಅಧಿಕಾರಕ್ಕಾಗಿ ಉದ್ಧವ್ ಠಾಕ್ರೆ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಶಿವಸೇನೆ ಮೇಲೆ ಕಾಂಗ್ರೆಸ್-ಎನ್‌ಸಿಪಿಯ ಸಿದ್ಧಾಂತದಿಂದ ಪ್ರಾಬಲ್ಯ ಸಾಧಿಸಿದವು. ಶಿವಸೇನೆ ಅಧಿಕಾರಕ್ಕಾಗಿ ತನ್ನ ಸಿದ್ಧಾಂತವನ್ನು ಕಳೆದುಕೊಂಡಿತು ಮತ್ತು ದಿವಂಗತ ಬಾಳಾಸಾಹೇಬ್ ಠಾಕ್ರೆಯವರ ಆಲೋಚನೆಗಳೊಂದಿಗೆ ರಾಜಿ ಮಾಡಿಕೊಂಡಿತು. ನಾವು ಬಾಳಾಸಾಹೇಬ್ ಠಾಕ್ರೆಯ ನಿಜವಾದ ಸೈನಿಕರಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗಿನ ಸಂಬಂಧವನ್ನು ಮುರಿದು ಕೇಸರಿ ಮತ್ತು ಹಿಂದುತ್ವದ ಪಕ್ಷದೊಂದಿಗೆ ಸರ್ಕಾರ ರಚಿಸಿದ್ದೇವೆ. ಬಿಜೆಪಿಯು ಶಿವಸೇನೆಯ ಸಹಜ ಮಿತ್ರ. ಜನರು ಹಿಂದುತ್ವಕ್ಕೆ ಮತ ಹಾಕಿದ್ದಾರೆ. ಆದ್ದರಿಂದ ಶಿವಸೇನೆಯ ಈ ಮೂಲ ಸಿದ್ಧಾಂತವನ್ನು ಕೊಂಡೊಯ್ಯುವುದು ನಮ್ಮ ಕರ್ತವ್ಯ' ಎಂದು ಶಿಂಧೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com