ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರೈಲು ನಿಲ್ದಾಣದಲ್ಲಿ ಪೋರ್ನ್ ವಿಡಿಯೋ ಪ್ರದರ್ಶನ, ತಬ್ಬಿಬ್ಬಾದ ಪ್ರಯಾಣಿಕರು!

ರೈಲು ನಿಲ್ದಾಣದ ಎಲ್ಲಾ ಟಿವಿ ಸ್ಕ್ರೀನ್ ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನವಾದ್ದರಿಂದ ಪ್ರಯಾಣಿಕರು ಕೆಲಹೊತ್ತು ತಬ್ಬಿಬ್ಬಾದ ಪ್ರಸಂಗ ನಡೆದಿದೆ. ಪಾಟ್ನಾ ರೈಲು ನಿಲ್ದಾಣದಲ್ಲಿ ಈ ಎಡವಟ್ಟು ಆಗಿದೆ.
Published on

ಪಾಟ್ನಾ: ರೈಲು ನಿಲ್ದಾಣದ ಎಲ್ಲಾ ಟಿವಿ ಸ್ಕ್ರೀನ್ ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನವಾದ್ದರಿಂದ ಪ್ರಯಾಣಿಕರು ಕೆಲಹೊತ್ತು ತಬ್ಬಿಬ್ಬಾದ ಪ್ರಸಂಗ ನಡೆದಿದೆ. ಬಿಹಾರದ ರಾಜಧಾನಿ ಪಾಟ್ನಾ ರೈಲು ನಿಲ್ದಾಣದಲ್ಲಿ ಈ ಎಡವಟ್ಟು ಆಗಿದೆ. 10 ಪ್ಲಾಟ್ ಫಾರಂಗಳಲ್ಲಿ ಅಳವಡಿಸಲಾಗಿದ್ದ ಎಲ್ಲಾ ಟಿವಿ ಸ್ಕ್ರೀನ್ ಗಳಲ್ಲಿ ಮೂರು ನಿಮಿಷ ಅಶ್ಲಿಲ ವಿಡಿಯೋ ಮೂಡಿಬಂದಿದೆ.

ಇದರಿಂದ ರೈಲಿಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸಿದರು. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಡಣಾಪುರ ವಿಭಾಗದ ರೈಲು ನಿಲ್ದಾಣಗಳಲ್ಲಿ ವೀಡಿಯೊ ಮತ್ತು ಚಲನಚಿತ್ರಗಳನ್ನು ಪ್ರಸಾರ ಮಾಡುವ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ತಕ್ಷಣ ಅವರನ್ನು ಸಂಪರ್ಕಿಸಿ ಪ್ರಸಾರವನ್ನು ನಿಲ್ಲಿಸಿದರು.

ಈ ಅಚಾತುರ್ಯ ಘಟನೆಯನ್ನು ದೃಢಪಡಿಸಿದ ಡಣಾಪುರ ಡಿಆರ್‌ಎಂ ಕಚೇರಿಯ ಅಧಿಕೃತ ವಕ್ತಾರ ಪ್ರಭಾತ್ ಕುಮಾರ್, "ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ ಮತ್ತು ಒಪ್ಪಂದ ರದ್ದತಿ ಪ್ರಕ್ರಿಯೆ ಆರಂಭಿಸಲಾಗಿದೆ. ಇದು ಅಸಹನೀಯ ಘಟನೆಯಾಗಿದ್ದು, ಕಂಪನಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ.  ಇದೇ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆಯೂ ಇಂತಹದ್ದೇ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

X

Advertisement

X
Kannada Prabha
www.kannadaprabha.com